Murder: ಗಂಡ ಬಿಟ್ಟವಳಿಗೆ ಅವನ ಮೇಲೆ ಪ್ರೇಮ, ಇವನ ಮೇಲೆ ಮೋಹ! ಅಕ್ರಮ ಸಂಬಂಧಕ್ಕೆ ನಡೆಯಿತು ಮಹಿಳೆ ಕೊಲೆ

ಹೆಂಡತಿ ಮಕ್ಕಳು ಇದ್ರೂ ಪೂವಯ್ಯ ಝಾಹಿರಾಳ ಜೊತೆ ಅಕ್ರಮ ಸಂಬಂಧ ಇಟ್ಕೊಂಡಿದ್ನಂತೆ. ಆದ್ರೆ ಇದ್ರ ನಡುವೆ ಝಾಹಿರಾ ಮತ್ತೊಬ್ಬ ಗೆಳೆಯನನ್ನು ಬಯಸಿದ್ಲು ಅನ್ನೋದು ತಿಳಿದು ಝಾಹಿರಾ ಮನೆಗೆ ಬಂದು ಆಕೆಯ ಜೊತೆ ಕ್ಯಾತೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಪೂವಯ್ಯ ಚಾಕುವಿನಿಂದ ಝಾಹಿರಾಳನ್ನ ಇರಿದು ಹತ್ಯೆ ಮಾಡಿದ್ದಾನೆ.

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

  • Share this:
ಕೊಡಗು: ಗಂಡನಿಲ್ಲದೆ (Husband) ಮಕ್ಕಳೊಂದಿಗೆ ಬದುಕುತ್ತಿದ್ದ ಆಕೆಗೆ ಒಬ್ಬ ಗೆಳೆಯ (Friend) ಸಾಕಾಗಲಿಲ್ಲವೇನೋ. ಅವನ್ ಬಿಟ್, ಇವನ್ ಬಿಟ್ಟು, ಅವನ್ಯಾರು ಎನ್ನೋ ಹಾಗೆ ಮತ್ತೊಬ್ಬನನ್ನು ತಾನು ಹಂಚಿಕೊಳ್ಳೋಕೆ ಹೋಗಿದ್ಲು. ಇಬ್ಬರ ನಡುವೆ ಸಿಲುಕಿ ಅದರಲ್ಲೊಬ್ಬ ಅವಳ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾನೆ. ಆಕೆಗೆ ಗಂಡನಿಲ್ಲದಿದ್ದರೂ ಇಬ್ಬರು ಮಕ್ಕಳನ್ನ ಸಾಕಿ ಸಲಹುತ್ತಿದ್ಲು. ಅಷ್ಟೇ ಆಗಿದ್ರೆ ಎಲ್ಲವೂ ಚೆನ್ನಾಗಿರುತ್ತಿತ್ತು ಅನ್ಸುತ್ತೆ. ಆದ್ರೆ ಆಕೆಯ ಮನಸ್ಸು ಹೊಸ ಗೆಳೆಯನ ಬಯಸಿತ್ತು. ಹೆಂಡತಿ (Wife) ಮಕ್ಕಳು (Children) ಇದ್ರೂ ಅವನೊಬ್ಬ ಆಕೆಯ ಜೊತೆ ಗೌಪ್ಯವಾಗಿ ಸಂಬಂಧ ಇಟ್ಕೊಂಡಿದ್ದ. ಹೀಗೆ ನಾಲ್ಕು ವರ್ಷಗಳು ಕಳೆದಿದ್ವು. ಇದ್ರ ನಡುವೆ ಅದೇನಾಯ್ತೋ ಗೊತ್ತಿಲ್ಲ ಆಕೆಗೆ ಬೇರೊಬ್ಬ ಗೆಳೆಯನ ಸಂಗ ಬೆಳೀತು. ಇದು ಮೊದಲ ಗೆಳೆಯನನ್ನ ಕೆರಳಿಸಿತ್ತು. ಆತ ಕೋಪದ ಕೈಗೆ ಬುದ್ದಿ ಕೊಟ್ಟು, ಆಕೆಯ ಪ್ರಾಣವನ್ನೇ ತೆಗೆದುಬಿಟ್ಟ. ಇಂತಹ ದುರಂತ ಘಟನೆಗೆ ಸಾಕ್ಷಿಯಾಗಿರೋದು ಕೊಡಗು (Kodagu) ಜಿಲ್ಲೆ.

ಒಂಟಿ ಮಹಿಳೆ ಕೊಲೆ ಮಾಡಿದ ಹಂತಕ

ಝಾಹಿರಾ ಎಂಬಾಕೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮದವಳು. ಕೊಲೆ ಮಾಡಿದವನ ಹೆಸರು ಪೂವಯ್ಯ. ಇವನೇ ಈ ಝಾಹಿರಾಳನ್ನ ಚಾಕುವಿನಿಂದ ಇರಿದು ಕೊಂದ ಕೊಲೆಗಡುಕ. ಅಷ್ಟಕ್ಕೂ ಇವರಿಬ್ಬರಿಗೂ ಇರೋ ಸಂಬಂಧ ಹಾಗೂ ಈ ಹತ್ಯೆಗೆ ಕಾರಣವೇ ಇಂಟರ್ಸ್ಟಿಂಗ್. ಅದನ್ನು ಕೊಡಗು ಎಸ್‌ಪಿ ಕ್ಯಾಪ್ಟನ್ ಅಯ್ಯಪ್ಪ ಅವರು ವಿವರಿಸಿದ್ದಾರೆ.

Murder: ಗಂಡ ಬಿಟ್ಟವಳಿಗೆ ಅವನ ಮೇಲೆ ಪ್ರೀತಿ, ಇವನ ಮೇಲೆ ಮೋಹ! ಅಕ್ರಮ ಸಂಬಂಧಕ್ಕೆ ನಡೆಯಿತು ಮಹಿಳೆ ಕೊಲೆ
ಆರೋಪಿ ಪೂವಯ್ಯ


ಮಕ್ಕಳೊಂದಿಗೆ ವಾಸಿಸುತ್ತಿದ್ದ ಮಹಿಳೆ

ಝಾಹಿರಾ ಗಂಡನಿಂದ ದೂರಾಗಿ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸ್ತಾ ಇದ್ಲು. ಇದ್ರ ನಡುವೆ ಎಂಟ್ರಿ ಕೊಟ್ಟವನೇ ಈ ಪೂವಯ್ಯ. ಕಳೆದ ಹಲವು ವರ್ಷಗಳಿಂದ ಇವರಿಬ್ಬರ ಸಂಬಂಧ ಗೌಪ್ಯವಾಗಿ ನಡೆದಿತ್ತು ಅನ್ನೋ ಮಾತಿದೆ. ಆಗಾಗ್ಗೆ ಈಕೆಯ ಮನೆಗೆ ಬಂದೂ ಹೋಗ್ತಿದ್ನಂತೆ. ಅದನ್ನ ಊರಿನವರೇ ಹೇಳ್ತಾರೆ. ಹಾಗೆ ಬಂದು ಹೋಗ್ತಿದ್ದವ ಇಂದು ಆಕೆಯನ್ನೇ ಕೊಂದು ಮುಗಿಸಿದ್ದ.

ಇದನ್ನೂ ಓದಿ: Love Tragedy: ಇತ್ತ ಕೈಕೊಟ್ಟವಳ ಕೊಂದ ಪ್ರಿಯಕರ, ಅತ್ತ ಪ್ರೇಯಸಿ ಮನೆಯವರ ಕಿರುಕುಳಕ್ಕೆ ಯುವಕ ಸೂಸೈಡ್!

ಹೆಂಡತಿ-ಮಕ್ಕಳಿದ್ದರೂ ಮಹಿಳೆಯೊಂದಿಗೆ ಸಂಬಂಧ

ಹೆಂಡತಿ ಮಕ್ಕಳು ಇದ್ರೂ ಪೂವಯ್ಯ ಝಾಹಿರಾಳ ಜೊತೆ ಅಕ್ರಮ ಸಂಬಂಧ ಇಟ್ಕೊಂಡಿದ್ನಂತೆ. ಆದ್ರೆ ಇದ್ರ ನಡುವೆ ಝಾಹಿರಾ ಮತ್ತೊಬ್ಬ ಗೆಳೆಯನನ್ನು ಬಯಸಿದ್ಲು ಅನ್ನೋದು ತಿಳಿದು ಝಾಹಿರಾ ಮನೆಗೆ ಬಂದು ಆಕೆಯ ಜೊತೆ ಕ್ಯಾತೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಪೂವಯ್ಯ ಚಾಕುವಿನಿಂದ ಝಾಹಿರಾಳನ್ನ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ಹೆಂಡತಿಗೆ ಕರೆ ಮಾಡಿ ಬೇಗ ಮನೆಗೆ ಬಾ, ನಾನು ಝಾಯಿರಾಳನ್ನು ಕೊಲೆ ಮಾಡಿದ್ದೇನೆ. ಇನ್ನೇನು ಜೈಲಿಗೆ ಹೋಗ್ತೀನಿ ಬಾ ಅಂತ ಹೇಳಿದ್ನಂತೆ.

ಕೊಲೆ ಬಗ್ಗೆ ಹೆಂಡತಿಗೆ ಹೇಳಿದ ಹಂತಕ

ಮನೆಗೆ ಬಂದ ಹೆಂಡತಿಗೆ ತಾನು ಮಾಡಿದ ಕೊಲೆ ಬಗ್ಗೆ ಎಲ್ಲವನ್ನು ಒದರಿದ್ದಾನೆ. ಯಾಕೆ ಹೀಗೆ ಮಾಡಿದೆ ಅಂತ ಕೇಳಿದ್ರೆ, ನಾನು ನಾಲ್ಕು ವರ್ಷದಿಂದ ಅವಳನ್ನು ನೋಡಿಕೊಂಡಿದ್ದೆ, ಮನೆಯನ್ನು ನಾನೇ ನಿಬಾಯಿಸ್ತಾ ಇದ್ದೆ. ಮನೆ ಬಾಡಿಗೆಯನ್ನು ನಾನೇ ಕಟ್ತಾ ಇದ್ದೆ. ಆದರೆ ಅವಳು ನನಗೆ ಮೋಸ ಮಾಡಿದ್ದರಿಂದ ಕೊಂದೆ ಎಂದು ಹೇಳಿದ್ರು ಅಂತ ಪೂವಯ್ಯನ ಹೆಂಡತಿ ಹೇಮಾವತಿ ಹೇಳಿದ್ದಾರೆ.

ಇದನ್ನೂ ಓದಿ: Residential School: ವಿದ್ಯಾರ್ಥಿನಿಯರು ಮಲಗಿದ್ದ ವೇಳೆ ಇಣುಕಿ ನೋಡ್ತಿದ್ದ ಶಿಕ್ಷಕ; ಕಿರುಕುಳ ಕೊಟ್ಟ ಟೀಚರ್ಸ್​ಗೆ ಬಿತ್ತು ಗೂಸಾ!

ಒಟ್ನಲ್ಲಿ ತಂದೆಯಿಂದ ದೂರಾಗಿದ್ದ ಮಕ್ಕಳು ತಾಯಿ ಝಾಹಿರಾಳ ನಡೆ ಹಾಗೂ ತಾಯಿಯ ಗೆಳೆಯ ಪೂವಯ್ಯನ ಕೃತ್ಯದಿಂದ ಇದೀಗ ಅನಾಥವಾಗಿವೆ. ಅತ್ತ ಹೆಂಡತಿ ಇದ್ರೂ ಪರಸ್ತ್ರೀ ಆಸೆಗೆ ಬಿದ್ದ ಪೂವಯ್ಯ ಮಾಡಿದ ತಪ್ಪಿನಿಂದ ಆತನ ಹೆಂಡತಿ ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಕ್ರಮ ಸಂಬಂಧವೊಂದು ಎರಡೂ ಕುಟುಂಬಗಳನ್ನು ಸದ್ಯ ಬೀದಿಗೆ ತಂದು ನಿಲ್ಲಿಸಿದೆ.
Published by:Annappa Achari
First published: