• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Gift Politics: ಮುಗಿಬಿದ್ದು ತಂದ ಬೆಳ್ಳಿ ಫೋಟೋದಿಂದ ಮಹಿಳೆಯರಿಗೆ ಶಾಕ್, ಶಾಸಕರು ಕೊಟ್ಟ ಗಿಫ್ಟ್​ ಅಸಲಿ ಬಣ್ಣ ಬಯಲು!

Gift Politics: ಮುಗಿಬಿದ್ದು ತಂದ ಬೆಳ್ಳಿ ಫೋಟೋದಿಂದ ಮಹಿಳೆಯರಿಗೆ ಶಾಕ್, ಶಾಸಕರು ಕೊಟ್ಟ ಗಿಫ್ಟ್​ ಅಸಲಿ ಬಣ್ಣ ಬಯಲು!

ಗಿಫ್ಟ್​ ರಾಜಕಾರಣ (ಸಾಂದರ್ಭಿಕ ಚಿತ್ರ)

ಗಿಫ್ಟ್​ ರಾಜಕಾರಣ (ಸಾಂದರ್ಭಿಕ ಚಿತ್ರ)

Hassan: ಬೆಳ್ಳಿ ಫೋಟೋಗಳೆಂದು ಮಹಿಳೆಯರು ಬಿಸಿಲು ಲೆಕ್ಕಿಸದೇ ಸರದಿಯಲ್ಲಿ ನಿಂತಿ ಗಿಫ್ಟ್ ತೆಗೆದುಕೊಂಡು ಬಂದಿದ್ದರು. ಆದ್ರೆ ಮನೆಗೆ ಬಂದಾಗ ಫೋಟೋದ ಅಸಲಿ ಬಣ್ಣ ಬಯಲಾಗಿದೆ.

 • News18 Kannada
 • 4-MIN READ
 • Last Updated :
 • Hassan, India
 • Share this:

ಹಾಸನ: ರಾಜ್ಯದಲ್ಲಿ ಚುನಾವಣೆ ದಿನಾಂಕ (Karnataka Election Date) ಘೋಷಣೆಗೂ ಮುನ್ನವೇ ರಾಜಕೀಯ ಮುಖಂಡರು (Political Leaders) ಮತದಾರರನ್ನು ಸೆಳೆಯಲು ಬಗೆ ಬಗೆಯ ಗಿಫ್ಟ್ (Gift Politics) ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಗಿಫ್ಟ್​ ಹಂಚಿಕೆ ಆರಂಭವಾಗಿದೆ. ಬಹುತೇಕ ಕಡೆ ಗಿಫ್ಟ್ ಪಡೆಯಲು ಜನರು ಮುಗಿಬಿದ್ದಿದ್ರೆ, ಜಾಗೃತ ಮತದಾರರ (Voters) ಮಾತ್ರ ಗಿಫ್ಟ್ ನೀಡಲು ಬಂದವರಿಗೆ ಛೀಮಾರಿ ಹಾಕಿ ವಾಪಸ್ ಕಳುಹಿಸಿದ್ದಾರೆ. ಎರಡು ದಿನಗಳ ಹಿಂದೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ (Former Shamanuru Shivashankarappa) ನೀಡಿದ್ದ ಸೀರೆಗಳಿಗೆ ಮಹಿಳೆಯರು ಬೆಂಕಿ ಹಚ್ಚಿದ್ದರು. ಇದೀಗ ಹಾಸನ ಶಾಸಕ ಪ್ರೀತಂಗೌಡ (MLA Preetham Gowda) ಬೆಂಬಲಿಗರು ನೀಡಿದ್ದ ಗಿಫ್ಟ್ ಅಸಲಿ ಬಣ್ಣವನ್ನು ಮಹಿಳೆಯರು ಬಯಲು ಮಾಡಿದ್ದಾರೆ.


ಸುಮಾರು 15 ದಿನಗಳ ಹಿಂದೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರೀತಂಗೌಡ ಬೆಂಬಲಿಗರು ಬೆಳ್ಳಿ ಲಕ್ಷ್ಮಿ ಫೋಟೋಗಳನ್ನು ಹಂಚಿದ್ದರು. ಬೆಳ್ಳಿ ಫೋಟೋಗಳೆಂದು ಮಹಿಳೆಯರು ಬಿಸಿಲು ಲೆಕ್ಕಿಸದೇ ಸರದಿಯಲ್ಲಿ ನಿಂತಿ ಗಿಫ್ಟ್ ತೆಗೆದುಕೊಂಡು ಬಂದಿದ್ದರು. ಆದ್ರೆ ಮನೆಗೆ ಬಂದಾಗ ಫೋಟೋದ ಅಸಲಿ ಬಣ್ಣ ಬಯಲಾಗಿದೆ.


a shocking news to the women who brought the silver photo mrq
ಶಾಸಕರ ಬೆಂಬಲಿಗರು ನೀಡಿದ ಗಿಫ್ಟ್


ಗಿಫ್ಟ್​ ವಿಡಿಯೋ ಮಾಡಿದ ಮಹಿಳೆಯರು


ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಪೋಟೋ ಎಂದು ಮಹಿಳೆಯರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಶಾಸಕ ಪ್ರೀತಂಗೌಡ ಬೆಂಬಲಿಗರು ವಾರ್ಡ್​​ವಾರು ಹಾಗೂ ಗ್ರಾಮ ಪಂಚಾಯ್ತಿವಾರು ಕಾರ್ಯಕ್ರಮ ನಡೆಸಿ ಈ ಗಿಫ್ಟ್​ಗಳನ್ನು ಹಂಚಿಕೆ ಮಾಡಿದ್ದರು.
ಬೆಳ್ಳಿ ಫೋಟೋಗಳನ್ನ ನೀಡಿ ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದರು. ಪೊಲೀಸರ ಸಮ್ಮುಖದಲ್ಲೇ ನಿಯಮ ಉಲ್ಲಂಘನೆ ಮಾಡಿ ಆಮಿಷ ಒಡ್ಡಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದರು.


ಇದನ್ನೂ ಓದಿ:  CM Basavaraj Bommai: ಕೇವಲ ಘೋಷಣೆಗೆ ಮಾತ್ರ ಸೀಮಿತವಾಯ್ತಾ ಭರವಸೆ? ಮಾತು ತಪ್ಪಿದ ರಾಜ್ಯ ಸರ್ಕಾರ!
ಗಿಫ್ಟ್ ಹೀಗಿದೆ

top videos


  ಪುಟ್ಟ ಫೋಟೋ ಮಾಡಿ ಆಕರ್ಷಕ ಫ್ರೇಮ್ ಹಾಕಿ ಅದರೊಳಗೆ ಅದೃಷ್ಟಲಕ್ಷ್ಮಿ ಪೋಟೋ ಮುದ್ರಣ ಮಾಡಲಾಗಿದೆ. ನೀಡಿರುವ ಫೋಟೋ ಬೆಳ್ಳಿಯದ್ದು ಅಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು