• Home
  • »
  • News
  • »
  • state
  • »
  • Letter to Police: ಮದುವೆಯಾಗಲು ವಧು ಸಿಗ್ತಿಲ್ಲ; ಹೆಣ್ಣು ಹುಡುಕಿಕೊಡಿ ಎಂದು ಪೊಲೀಸರಿಗೆ ಯುವಕನ ಪತ್ರ

Letter to Police: ಮದುವೆಯಾಗಲು ವಧು ಸಿಗ್ತಿಲ್ಲ; ಹೆಣ್ಣು ಹುಡುಕಿಕೊಡಿ ಎಂದು ಪೊಲೀಸರಿಗೆ ಯುವಕನ ಪತ್ರ

ಪೊಲೀಸರಿಗೆ ಪತ್ರ

ಪೊಲೀಸರಿಗೆ ಪತ್ರ

ಮದುವೆಗೆ ವಧು ಸಿಗದೆ ನೊಂದ ಯುವಕ ಹೆಣ್ಣು ಹುಡುಕಿಕೊಡಿ ಎಂದು  ಪೊಲೀಸರಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರವೀಣ್ ಎಂಬಾತ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್​ಗೆ ಪತ್ರ ಬರೆದಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಶಿವಮೊಗ್ಗ (ನ.25): ಇತ್ತೀಚಿಗೆ ಮದುವೆಯಾಗಲು (Marriage) ಹೆಣ್ಣೇ ಸಿಗ್ತಿಲ್ಲ ಎಂದು ಇಂಜಿನಿಯರ್ಸ್​, ಡಾಕ್ಟರ್ಸ್ (Engineers, Doctors)​ ಕೂಡ ಹೆಣ್ಣು ಸಿಗ್ತಿಲ್ಲ. ಈತ ರೈತನೋರ್ವ ಮದುವೆಗೆ ಹೆಣ್ಣು ಹುಡುಕಿಕೊಡಿ ಎಂದು ಪೊಲೀಸರಿಗೆ ಪತ್ರ (Police Letter) ಬರೆದಿದ್ದಾನೆ. ರೈತರು ಅಂದ್ರೆ ಸಾಕು ಹೆಣ್ಣು ಕೊಡೋರು ಇದೀಗ ಮೂಗು ಮುರೀತಾರೆ. ರೈತರಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗ್ತಿಲ್ಲ. ಹಳ್ಳಿಯಲ್ಲಿ (Village) ವಾಸವಿದ್ದಾರೆ ಎಂದ್ರೆ ಪೋಷಕರು (Parents) ಮಗಳನ್ನು ಕೊಡಲು ಹಿಂದೇಟು ಹಾಕ್ತಾರೆ. ಬೆಂಗಳೂರಲ್ಲಿರುವ ಹುಡುಗನೇ ಬೇಕು ಅಂತಾರೆ. ಹೀಗಾಗಿ ಅನೇಕ ಗ್ರಾಮಗಳಲ್ಲಿರುವ ಹುಡುಗರು ಮದುವೆಗೆ ಹೆಣ್ಣೇ ಸಿಗದೇ ನೊಂದಿದ್ದಾರೆ. 


ಹೆಣ್ಣು ಹುಡುಕಿಕೊಡಿ ಎಂದು ಎಸ್ಪಿಗೆ ದೂರು ನೀಡಿದ ಭೂಪ


ಮದುವೆಗೆ ವಧು ಸಿಗದೆ ನೊಂದ ಯುವಕ ಹೆಣ್ಣು ಹುಡುಕಿಕೊಡಿ ಎಂದು  ಪೊಲೀಸರಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರವೀಣ್ ಎಂಬಾತ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್​ಗೆ ಪತ್ರ ಬರೆದಿದ್ದಾರೆ.




ಸಾಫ್ಟ್​ವೇರ್​ ಕೆಲಸ ಬಿಟ್ಟು ಕೃಷಿಕರಾದ್ರು


ಭದ್ರಾವತಿಯ ಹೊಸಮನೆ ನಿವಾಸಿಯಾದ ಪ್ರವೀಣ್ ಓ ಎಸ್ ಅವರು ತೋಟಗಾರಿಕೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಣ್ಣಸಂಗಪ್ಪ ಪುತ್ರರಾಗಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಪ್ರವೀಣ್, ಬಳಿಕ ಕೆಲಸ ಬಿಟ್ಟು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.




ದೂರು ಸ್ವೀಕರಿಸಿದ ಪೊಲೀಸರ ಇಲಾಖೆ


ಆಂಧ್ರ ಮೂಲದ ಸಣ್ಣಸಂಗಪ್ಪ ಎಂಬುವರ ಪುತ್ರ ಪ್ರವೀಣ್, ವಿವಾಹವಾಗಲು ವಧು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಪ್ರವೀಣ್ ವಿಚಿತ್ರ ದೂರನ್ನು ಶಿವಮೊಗ್ಗ ಪೊಲೀಸ್ ಇಲಾಖೆ  ಸ್ವೀಕರಿಸಿದೆ.  ಪ್ರವೀಣ್ ದೂರು ನೀಡಿರುವ ಪ್ರತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಲಿದೆ.


ಇತ್ತೀಚಿಗೆ ಕುಮಾರಸ್ವಾಮಿಗೂ ಬಂದಿತ್ತು ಪತ್ರ


ಕುಮಾರಸ್ವಾಮಿ ಅವರ ಬಳಿ ಜನರು ಕೆಲಸ ಕೊಡಿಸಿ, ಚಿಕಿತ್ಸೆ ಕೊಡಿಸಿ ಇಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅಂತ ಕೇಳಿಕೊಂಡು ಅವರ ಮನೆ ಬಾಗಿಲಿಗೆ ಹೋಗ್ತಾರೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮುದುವತ್ತಿ ಗ್ರಾಮದ ಯುವಕ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ಮದುವೆಗೆ ವಧುಗಳ ಕೊರತೆ ಬಗ್ಗೆ ಮಾತಾಡಿದ್ದ.


ರೈತ ಯುವಕರಿಗೆ ಸಿಗ್ತಿಲ್ಲ ಹುಡುಗಿ


ಒಕ್ಕಲಿಗ ರೈತ ಯುವಕರಿಗೆ ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ ಈ ಹಿನ್ನೆಲೆಯಲ್ಲಿ ಒಕ್ಕಲಿಗ ಯುವಕರಿಗೆ ವಧುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕುಮಾರಸ್ವಾಮಿಗೆ ಮನವಿ ಮಾಡಿದ್ದಾನೆ.


ವಧುಗಳು ಬೇರೆ ಜಿಲ್ಲೆ ವರನನ್ನು ಮದುವೆಯಾಗುವುದನ್ನು ನಿಷೇಧಿಸಿ


ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಕುಮಾರಸ್ವಾಮಿಗೆ ಧನಂಜಯ ಅವಲತ್ತುಕೊಂಡಿದ್ದನು.


ಇದನ್ನೂ ಓದಿ: Traffic Rules: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಹೊಸ ಪ್ಲಾನ್!


200 ಹುಡುಗಿಯರಿಗೆ 10 ಸಾವಿರ ಯುವಕರು

ಇತ್ತೀಚಿಗಷ್ಟೇ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಾವಿರಾರು ಒಕ್ಕಲಿಗ ಹುಡುಗರು ಇಲ್ಲಿ ವಧುವಿಗಾಗಿ ಮುಗಿಬಿದ್ದಿದ್ದರು. ರಾಜ್ಯ ಮಟ್ಟದ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದರೆ, 10 ಸಾವಿರಕ್ಕೂ ಅಧಿಕ ಗಂಡು ಮಕ್ಕಳು ಬಾಳ ಸಂಗಾತಿಯನ್ನು ಅರಸಿ ಬಂದಿದ್ದರು.

Published by:ಪಾವನ ಎಚ್ ಎಸ್
First published: