News18 India World Cup 2019

ಯುವಕನ ದೇಹದಿಂದ ಹೊರ ಹೋದ ಛಾಯೆ: ವೈರಲ್​ ಆಗುತ್ತಿದೆ ವಿಡಿಯೋ

news18
Updated:October 11, 2018, 5:10 PM IST
ಯುವಕನ ದೇಹದಿಂದ ಹೊರ ಹೋದ ಛಾಯೆ: ವೈರಲ್​ ಆಗುತ್ತಿದೆ ವಿಡಿಯೋ
news18
Updated: October 11, 2018, 5:10 PM IST
ಪರಶುರಾಮ್​ ತಹಶೀಲ್ದಾರ್​, ನ್ಯೂಸ್​ 18 ಕನ್ನಡ

ಹುಬ್ಬಳ್ಳಿ(ಅ.11): ಹುಬ್ಬಳ್ಳಿಯಲ್ಲಿ ಅಗೋಚರ ಲೋಕದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನ ದೇಹದಿಂದ ಛಾಯೆಯೊಂದು ಹೊರಗೆ ಹೋಗಿರುವ ದೃಶ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರೇತಾತ್ಮದ ಕುಚೇಷ್ಟೆ ಇರಬಹುದೆಂದು ಜನರು ದಂಗಾಗಿದ್ದಾರೆ.

ವಾಣಿಜ್ಯ ನಗರ ಹುಬ್ಬಳ್ಳಿಯ ಮಂಟೂರು ರಸ್ತೆ ನಿವಾಸಿ ಪ್ರತಾಪ್‌ ದೊಡ್ಡಮನಿ ಎಂಬಾತ ಇತ್ತೀಚೆಗೆ ಮೃತಪಟ್ಟಿದ್ದ. ಆತ ದಿಢೀರನೆ ಸಾವನ್ನಪ್ಪಿದ್ದು ಸ್ನೇಹಿತರಿಗೆ ಆಘಾತ ತಂದಿದ್ದು. ಆರಾಮಾಗಿ ಓಡಾಡಿಕೊಂಡಿದ್ದ ಪ್ರತಾಪ್‌ ಏಕಾಏಕಿ ಸಾವನ್ನಪ್ಪಿದ್ದಕ್ಕೆ ಸ್ನೇಹಿತರು ಮರುಕಪಟ್ಟಿದ್ದರು. ಕೆಲ ತಿಂಗಳುಗಳ ಹಿಂದೆ ಆತನ ಬರ್ಥ್‌ಡೆ ಪಾರ್ಟಿಗೆ ಹೋಗಿದ್ದು. ಪ್ರತಾಪ್‌ನ ಜೊತೆ ಕುಣಿದು ಕುಪ್ಪಳ್ಳಿಸಿದ್ದನ್ನು ಸ್ಮರಿಸಿಕೊಂಡಿದ್ದರು. ಸ್ನೇಹಿತರೆಲ್ಲ ಸೇರಿ ಬರ್ಥ್‌ಡೆ ಪಾರ್ಟಿ ದಿನ ಡ್ಯಾನ್ಸ್‌ ಮಾಡಿದ್ದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಅಂದು ಸೆರೆಹಿಡಿದ ದೃಶ್ಯಗಳನ್ನು ನೋಡುತ್ತಿದ್ದ ಸ್ನೇಹಿತರಿಗೆ ಆಶ್ಚರ್ಯ ಕಾದಿತ್ತು. ಪ್ರತಾಪನ ದೇಹದಿಂದ ಛಾಯೆಯೊಂದು ಹೊರಗೆ ಹೋಗುತ್ತಿದ್ದುದು ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಪ್ರತಾಪನ ದೇಹದಿಂದ ಪ್ರೇತಾತ್ಮ ಹೊರಗೆ ಹೋಗುತ್ತಿದೆ ಎಂದು ಭಾವಿಸಿದ ಗೆಳೆಯರು ದಂಗಾಗಿದ್ದರು. ದೃಶ್ಯಾವಳಿಯನ್ನು ತಮ್ಮ ಇತರ ಸ್ನೇಹಿತರಿಗೆ ಫಾರ್ವರ್ಡ್‌ ಮಾಡಿದ್ದರು. ದೇಹದಿಂದ ಹೊರಗಡೆ ಹೋದ ಛಾಯೆಯ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಪ್ ಮತ್ತು ಪ್ರದೀಪ್‌ ಚಿಕ್ಕವರಿದ್ದಾಗಲೇ ತಂದೆ- ತಾಯಿಯನ್ನು ಕಳೆದುಕೊಂಡಿದ್ದಾರೆ. ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದಾರೆ. ಪ್ರತಾಪ್ ಪೇಂಟರ್‌ ಕೆಲಸ ಮಾಡಿಕೊಂಡಿದ್ದ. ಬರ್ಥ್‌ಡೆ ಪಾರ್ಟಿ ಆಗಿ ಕೆಲವು ತಿಂಗಳು ಆತ ಚೆನ್ನಾಗಿಯೇ ಇದ್ದ. ಆದರೆ ಇತ್ತೀಚೆಗೆ ತುಂಬಾ ತಲೆನೋವು ಎನ್ನುತ್ತಿದ್ದ. ಅನಾರೋಗ್ಯದ ಕಾರಣ ಎರಡು ಮೂರು ದಿನ ಹಾಸಿಗೆ ಹಿಡಿದಿದ್ದ. ಸೆಪ್ಟೆಂಬರ್‌ 1ರಂದು ಹಾಸಿಗೆಯಲ್ಲಿಯೇ ಕೊನೆಯುಸಿರೆಳೆದಿದ್ದ.

ಪ್ರತಾಪನ ನಿಧನದ ನಂತರ ಯಾವುದೇ ರೀತಿಯ ವಿಚಿತ್ರ ಅನುಭವಗಳು ಆಗಿಲ್ಲ. ಆತ ಬದುಕಿದ್ದಾಗ ಸಾಮಾನ್ಯವಾಗಿಯೇ ವರ್ತಿಸುತ್ತಿದ್ದ. ನಿರುಪದ್ರವಿಯಾಗಿ ತನ್ನ ಕೆಲಸವನ್ನು ಮಾಡಿಕೊಂಡು ಇರುತ್ತಿದ್ದ. ಆತನ ದೇಹದಲ್ಲಿ ಯಾವುದೇ ಪ್ರೇತಾತ್ಮ ಇದ್ದಿದ್ದು ಗೊತ್ತಿಲ್ಲ ಎನ್ನುತ್ತಾರೆ ಕುಟುಂಬಸ್ಥರು. ಆದರೆ ಬರ್ಥ್‌ಡೇ ಪಾರ್ಟಿ ದಿನ ಕುಣಿಯುತ್ತಿದ್ದಾಗ ಪ್ರತಾಪನ ದೇಹದಿಂದ ಹೊರಹೋದ ಛಾಯೆಯ ರಹಸ್ಯವೇನು. ಆದಕ್ಕೂ ಪ್ರತಾಪನ ಸಾವಿಗೂ ಏನಾದರೂ ಸಂಬಂಧವಿದೆಯಾ ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...