ರಾಯಚೂರು(ಮಾ. 17): ಇಬ್ಬರು ಅಪ್ರಾಪ್ತ ಶಾಲಾ ಬಾಲಕಿಯರನ್ನು ಅಂಗಡಿಗೆ ಕರೆದು ಒಬ್ಬರ ನಂತರ ಒಬ್ಬರ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಫೆಬ್ರುವರಿ 25 ರಂದು ಅತ್ಯಾಚಾರವೆಸಗಿರುವ ಅರುಣಕುಮಾರ ಠಾಕೂರ ಎಂಬುವವ ಮಧ್ಯಾಹ್ನದ ವೇಳೆ ಶಾಲೆಯಿಂದ ಊಟಕ್ಕಾಗಿ ಮನೆಗೆ ಹೋಗುತ್ತಿದ್ದಾಗ ಇಬ್ಬರು ಬಾಲಕಿಯರನ್ನು ಪುಸಲಾಯಿಸಿ ಕರೆದು ಅಂಗಡಿಯ ಒಳಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರು ಬಾಲಕಿಯರ ಬಟ್ಟೆ ಕಟ್ಟಿ ಇಬ್ಬರನ್ನು ಬೇರೆ ಬೇರೆ ರೂಮಿನಲ್ಲಿ ಕೂಡಿ ಹಾಕಿದ. ಮೊದಲು ಒಬ್ಬ ಬಾಲಕಿ, ನಂತರ ಇನ್ನೊಬ್ಬ ಬಾಲಕಿಯನ್ನು ಸಹ ಅತ್ಯಾಚಾರ ಮಾಡಿದ್ದ.
ಈ ಸಂದರ್ಭದಲ್ಲಿ ಇಬ್ಬರಿಗೂ ಜ್ಯೂಸ್, ಪ್ಲಾಸ್ಟಿಕ್ ಕಿವಿಯೋಲೆ, ಸರ, ಮೇಕಪ್ ಸಾಮಾನುಗಳನ್ನು ನೀಡಿ, ಒಂದು ವೇಳೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ವಿಷ ಹಾಕಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ಬೆದರಿಕೆಯಿಂದ ಬಾಲಕಿಯರು ಯಾರಿಗೂ ಹೇಳಿರಲಿಲ್ಲ.
ಆದರೆ ದಿನೇ ದಿನೇ ಈ ಬಾಲಕಿಯರ ನಡುವಳಿಕೆಗಳು ಬದಲಾಗಿ, ಬಾಲಕಿಯರು ಒಂದು ರೀತಿ ಹೆದರಿದಂತೆ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಬಾಲಕಿಯರ ತಾಯಿ ವಿಚಾರಿಸಿದಾಗ ತಮ್ಮ ಮೇಲೆ ಅರುಣಕುಮಾರ ಎರಗಿದ ವಿಚಾರ ತಿಳಿಸುತ್ತಾರೆ. ಈ ಹಿನ್ನೆಲೆ ಬಾಲಕಿಯರ ತಾಯಿಯು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ನೀಡಿದ ನಂತರ ಗ್ರಾಮದಿಂದ ಅರುಣಕುಮಾರ ನಾಪತ್ತೆಯಾಗಿದ್ದ. ಈ ಪ್ರಕರಣದ ಬೆನ್ನು ಹತ್ತಿದ ಸಿಂಧನೂರು ಪೊಲೀಸರು ಸಿಂಧನೂರು ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್ಐ ರಾಘವೇಂದ್ರ, ಸಿಬ್ಬಂದಿಗಳಾದ ಶರಣಪ್ಪ, ದ್ಯಾಮಣ್ಣ, ಪರಸುರಾಮ, ಅಶೋಕ ಹಾಗು ಅಜೀಮ್ ಪಾಷಾ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸಿತ್ತು.
ಇದನ್ನೂ ಓದಿ :
ದುಬೈನಿಂದ ಬಂದಿದ್ದ ಚಿಕ್ಕಮಗಳೂರಿನ ಮಹಿಳೆಯೊಬ್ಬರಿಗೆ ಕೊರೋನಾ ಶಂಕೆ; ಆಸ್ಪತ್ರೆಗೆ ದಾಖಲು
ನಾಪತ್ತೆಯಾಗಿದ್ದ ಆರೋಪಿ ಪತ್ತೆಯಾಗದಂತೆ ಕಾವಿ ವೇಷಧರಿಸಿಕೊಂಡು ಊರೂರು ಸುತ್ತುತ್ತಿದ್ದ. ಇಂದು ಬಳ್ಳಾರಿ ಜಿಲ್ಲೆಯ ಸಿರಗೇರಿ ಬಳಿಯ ತಾಳೂರು ಬಳಿಯ ದೇವಸ್ಥಾನದಲ್ಲಿ ಸ್ವಾಮಿಯಂತೆ ಇದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 50 ವರ್ಷದ ವಿಕೃತ ಕಾಮಿಯನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಎಸ್ಪಿ ವೇದಮೂರ್ತಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ