ಬೆಳಗಾವಿ(ಜನವರಿ.01): ರಾಜ್ಯದಲ್ಲಿ ಅನೇಕ ವರ್ಷಗಳಿಂದ ಪ್ರಾದೇಶಿಕ ಅಸಮಾನತೆಯ ಕೂಗು ಇದೆ. ಇದನ್ನು ಸರಿಮಾಡುವ ಪ್ರಯತ್ನ ಸರ್ಕಾರ ಮಾಡಿದರು ಅದು ಯಶಸ್ವಿಯಾಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುವುದು ಹೋರಾಟಗಾರರ ಆಗ್ರಹ. ಇದಕ್ಕಾಗಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಧ್ವನಿಗಳು ಕೇಳಿ ಬಂದಿದೆ. ಇಂದು ಸಹ ಹೋರಾಟಗಾರರು ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಅಡವೇಶ ಇಟಗಿ ನೇತೃತ್ವದಲ್ಲಿ ಇಂದು ಬೆಳಗ್ಗೆ ಪ್ರತ್ಯೇಕ ಧ್ವಜನ್ನು ಹೋರಾಟಗಾರರು ಹಾರಿಸಿದ್ದಾರೆ. ರಾಜ್ಯದ ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ಧ್ವಜ ಇದಾಗಿದೆ. ಕಳೆದ ವರ್ಷ ಸಹ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡುವ ಯತ್ನ ನಡೆದಿತ್ತು. ಆದರೆ, ಪೊಲೀಸರು ತಡೆಯವ ಯತ್ನ ಮಾಡಿದ್ದಾರೆ.
ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಿದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು. ನಂತರ ಪೊಲೀಸರು ಧ್ವಜವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಡಿವೇಶ ಇಟಗಿ, ದೇಶದಲ್ಲಿ ಒಂದೇ ಭಾಷೆ ಮಾತನಾಡುವ ಎರಡು ರಾಜ್ಯಗಳು ಇವೆ. ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇವೆ. ಸಂವಿಧಾನದಲ್ಲಿ ಸಣ್ಣ ಸಣ್ಣ ರಾಜ್ಯಗಳ ಇರಬೇಕು ಎನ್ನುವ ಮಾತು ಹೇಳಿದ್ದರು.
ಆರೋಗ್ಯ, ನೀರಾವರಿ, ಕೃಷಿ ಸೇರಿ ಅನೇಕ ಕ್ಷೇತ್ರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅನೇಕ ವರ್ಷಗಳಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಉತ್ತರ ಕರ್ನಾಟಕ ಆದಾಯದ ಮೂಲವಾಗಿದೆ. ಇಲ್ಲಿನ ಹಣದಲ್ಲಿ ಬೆಂಗಳೂರು ಅಭಿವೃದ್ಧಿ ಮಾಡುತ್ತಿದೆ. ಇದನ್ನು ಸರಿಪಡಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲಗೊಂಡಿವೆ ಎಂದರು.
ಬೆಳಗಾವಿ ಜಿಲ್ಲೆ ವಿಭಜನೆಯಲ್ಲಿಯೂ ಅನ್ಯಾಯವಾಗಿದ್ದು, ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371ನೇ ಕಲಂ ಪ್ರಕಾರ ಅಭಿವೃದ್ಧಿ ಮೀಸಲು ಇಟ್ಟ ಹಣವನ್ನು ಬೇರೆ ಉದ್ದೇಶ ಬಳಕೆ ಮಾಡಕೊಳ್ಳಲಾಗುತ್ತದೆ. ಹಿಂದುಗಳಿಂದ ಜಿಲ್ಲೆಗಳಿಗೆ ಅನೇಕ ವರ್ಷಗಳಿಂದ ಅನ್ಯಾಯವಾಗಿದೆ. ಪ್ರತ್ಯೇಕ ರಾಜ್ಯ ಆಗೊ ವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಅಡವೇಶ ಇಟಗಿ ಹೇಳಿದರು.
ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರಿಸುವ ಭರವಸೆಯನ್ನು ಬಿ ಎಸ್ ಯಡಿಯೂರಪ್ಪ ನೀಡಿದ್ದರು. ಅಧಿಕಾರ ಬಂದ ಬಳಿಕ ಸುವರ್ಣ ಸೌಧದಕ್ಕೆ ಜಿಲ್ಲಾ ಮಟ್ಟದ ಕಚೇರಿಯನ್ನು ಶಿಫ್ಟ್ ಮಾಡಿದ್ದರು.
ಪ್ರವಾಹ, ಕೊರೋನಾ ಸೋಂಕಿನ ನೆಪ ಹೇಳಿ ಸುವರ್ಣಸೌಧದಲ್ಲಿ 2 ವರ್ಷಗಳಿಂದ ಅಧಿವೇಶ ನಡೆಸಿಲ್ಲ. ಪ್ರವಾಹ ಸಂದರ್ಭದಲ್ಲಿ ಪರಿಹಾರದಲ್ಲಿ ಸಾಕಷ್ಟು ಲೋಪ ಆಗಿದೆ ಎನ್ನುವುದು ಉತ್ತರ ಕರ್ನಾಟಕ ಭಾಗದ ಜನರ ಅಭಿಪ್ರಾಯವಾಗಿದೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ