ಬೆಂಗಳೂರು (ಡಿ.12): ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ (School Student) ಮಿತಿ ಮೀರಿದ ವರ್ತನೆ ಪೋಷಕರನ್ನೇ ಬೆಚ್ಚಿಬೀಳಿಸುತ್ತಿದೆ. ಆಧುನಿಕ ಯುಗದಲ್ಲಿ ಶಾಲಾ ಮಕ್ಕಳಲ್ಲಿ (School Children) ಮುಗ್ಧತೆ ಮರೆಯಾಗಿದ್ದು, ಆಟಾಟೋಪಗಳು ಹೆಚ್ಚಾಗಿದೆ. ಮೊಬೈಲ್ ಚಟ ದುರಾಭ್ಯಾಸಗಳಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಇಲ್ಲೊಬ್ಬ ಬಾಲಕಿ ಶಾಲೆಯಲ್ಲಿ ಪೋಷಕರ ಮೀಟಿಂಗ್ಗೆ (Parents Meeting) ತನ್ನ ಬಾಯ್ ಫ್ರೆಂಡ್ನನ್ನು (Boy Friend) ಕರೆತಂದು ಇವರೇ ನನ್ನ ಅಣ್ಣ ಎಂದಿದ್ದಾಳೆ. ಬೆಂಗಳೂರಿನ ಶಾಲೆಯಲ್ಲಿ (Bengaluru School) ಇಂತಹ ಘಟನೆ ನಡೆದಿದೆ. ಶಿಕ್ಷಕರು ಸರಿಯಾಗಿ ವಿಚಾರಣೆ ಮಾಡಿದಾಗ ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ.
ಪೋಷಕರ ಬದಲು ಬಾಯ್ ಫ್ರೆಂಡ್ ಹಾಜರು
ಮೀಟಿಂಗ್ಗೆ ಪೋಷಕರ ಬದಲು ಮಕ್ಕಳು ಬೇರೆಯವರನ್ನ ಕರೆದುಕೊಂಡು ಹೋಗುತ್ತಿದ್ದಾರೆ. ಇಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಶಿಕ್ಷಕರೇ ಬೆಚ್ಚಿಬಿದ್ದಿದ್ದಾರೆ. ಪೋಷಕರ ಮೀಟಿಂಗ್ ನಲ್ಲಿ ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಪೋಷಕರ ಮೀಟಿಂಗ್ ಬಾಯ್ ಫ್ರೆಂಡ್ ಕರೆದುಕೊಂಡು ಬಂದ ವಿದ್ಯಾರ್ಥಿನಿ ಶಿಕ್ಷಕರ ಕೈಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ವಿದ್ಯಾರ್ಥಿನಿಯ ಡ್ರಾಮಾ ಬಟಾಬಯಲು
ವಿದ್ಯಾರ್ಥಿನಿ ಬಾಯ್ ಫ್ರೆಂಡ್ ಕರೆದುಕೊಂಡು ಬಂದು ನನ್ನ ಬ್ರದರ್ ಎಂದು ಶಾಲೆ ಆಡಳಿತ ಮಂಡಳಿಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಖಾಸಗಿ ಶಾಲೆಯ ಆಡಳಿತ ಮಂಡಳಿ ಹುಡುಗನನ್ನ ವಿಚಾರಿಸಿದಾಗ ಅವಳು ನನ್ನ ಸಿಸ್ಟರ್ ಎಂದು ಹೇಳಿದ್ದಾನೆ. ಪದೇ ಪದೇ ವಿಚಾರಿಸಿದಾಗ ನನ್ನ ಕಸಿನ್ ಬ್ರದರ್ ಎಂದು ಹೇಳಿಕೆ ನೀಡಿದ್ದಾಳೆ.
ಶಾಲಾ ಆಡಳಿತ ಮಂಡಳಿ ತರಾಟೆ
ಇಬ್ಬರ ಹೇಳಿಕೆಯಲ್ಲಿ ಗೊಂದಲವನ್ನು ಗಮನಿಸಿದ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಶಾಲಾ ಮಕ್ಕಳು ಬೇರೆಯವರನ್ನ ಪೋಷಕರು ಎಂದು ಕರೆದುಕೊಂಡು ಬರ್ತಿದ್ದಾರೆ. ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದೆ. ಆ ವಿಚಾರ ಪೋಷಕರಿಗೂ ಗೊತ್ತಿಲ್ಲ ಎಂದು ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.
ಕೆಲದಿನಗಳ ಹಿಂದ ಶಾಲಾ ಮಕ್ಕಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ
ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳ (School Student) ಕಾಟಕ್ಕೆ ಬೇಸತ್ತ ಶಿಕ್ಷಕರು (Teacher) ರಾಜೀನಾಮೆಗೆ ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ (Bengaluru) ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ (School Bag Checking) ನಡೆಸಿದ ಶಿಕ್ಷಕರು ಒಂದು ಕ್ಷಣ ಶಾಕ್ ಆಗಿದ್ದರು. ಬ್ಯಾಗ್ನಲ್ಲಿ ಪತ್ತೆಯಾದ ವಸ್ತುಗಳನ್ನು ಕಂಡು ಶಿಕ್ಷಕರು ಈ ವಿಷಯವನ್ನ ಶಾಲಾ ಅಡಳಿತ ಮಂಡಳಿಯ (School Administration) ಗಮನಕ್ಕೆ ತಂದಿದ್ದರು.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಮಕ್ಕಳ (Children Behavior) ನಡವಳಿಕೆ ಮೇಲೆ ನಿಗಾ ಇರಿಸುವಂತೆ ಸಲಹೆ ನೀಡಿದೆ. ಇದರ ಜೊತೆಗೆ ಮಕ್ಕಳ ಬ್ಯಾಗ್ಗಳನ್ನು ಪರಿಶೀಲನೆ ಮತ್ತು ಅವರ ಶಾಲಾ ಹಾಜರಾತಿ (School Attendance) ಬಗ್ಗೆಯೂ ಗಮನ ನೀಡುವಂತೆ ಸೂಚನೆ ನೀಡಿದೆ. ಅದರಲ್ಲಿಯೂ 9 ಮತ್ತು 10ನೇ ತರಗತಿ ಮಕ್ಕಳ ಬ್ಯಾಗ್ಗಳಲ್ಲಿ ಈ ವಸ್ತುಗಳು ಪತ್ತೆಯಾದ ಘಟನೆ ನಡೆದಿತ್ತು.
ಇದನ್ನೂ ಓದಿ: Positive Story: ಶಾಲೆ ಆಡಳಿತ ಮಕ್ಕಳ ಕೈಗೆ, ಪಾಠ ಮಾಡೋದೂ ವಿದ್ಯಾರ್ಥಿಗಳೇ!
ಗರ್ಭ ನಿರೋಧಕ ಮಾತ್ರೆಗಳು ಪತ್ತೆ
ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾದ ಘಟನೆ ನಡೆದಿತ್ತು. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿರುವ ಮಾಹಿತಿ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ