ಮಾಜಿ ಗೃಹ ಸಚಿವ ಜಿ. ಪರಮೇಶ್ವರ್‌ಗೆ ಹಾರ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದ ರೌಡಿ ಶೀಟರ್ 

ತುಮಕೂರಿನ ಸಿದ್ದಾರ್ಥ ನಗರದ ತಮ್ಮ ನಿವಾಸದಲ್ಲಿ ನಡೆದ ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಒಬ್ಬ ಮಾಜಿ ಗೃಹ ಸಚಿವರಿಗೆ ಶುಭ ಕೋರಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಡಾ.ಜಿ.ಪರಮೇಶ್ವರ್​ಗೆ ಹಾರ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದ ರೌಡಿಶೀಟರ್

ಡಾ.ಜಿ.ಪರಮೇಶ್ವರ್​ಗೆ ಹಾರ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದ ರೌಡಿಶೀಟರ್

  • Share this:
ಬೆಂಗಳೂರು (ಆಗಸ್ಟ್ 07): ಮಾಜಿ ಗೃಹ ಸಚಿವ, ಮಾಜಿ ಡಿಸಿಎಂ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ|| ಜಿ ಪರಮೇಶ್ವರ್ ನಿನ್ನೆ 70 ನೇ ವರ್ಷದ ಜನ್ಮ ದಿನ ಆಚರಿಸಿಕೊಂಡರು. ಮಾಜಿ ಗೃಹ ಸಚಿವರಿಗೆ ನೆಲಮಂಗಲದ ರೌಡಿ ಶೀಟರ್ ಒಂದಲ್ ರವಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ. ತುಮಕೂರಿನ ಸಿದ್ದಾರ್ಥ ನಗರದ ತಮ್ಮ ನಿವಾಸದಲ್ಲಿ ನಡೆದ ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಒಬ್ಬ ಮಾಜಿ ಗೃಹ ಸಚಿವರಿಗೆ ಶುಭ ಕೋರಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಜಾತಿ ಅಭಿಮಾನ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ರೌಡಿ ಶೀಟರ್ ಒಂದಲ್‌ರವಿ ಹಾಗೂ ಪರಮೇಶ್ವರ್ ಒಂದೇ ಸಮುದಾಯದವರಾಗಿದ್ದಾರೆ. ಸ್ವಜಾತಿ ಅಭಿಮಾನದಿಂದ ರೌಡಿ ಶೀಟರ್ ರವಿ ಶುಭಾಷಯ ಕೋರಿದ್ದಾರೆ. ರೌಡಿ ಶೀಟರ್ ಒಂದಲ್ ರವಿ ಸಹ ಪರಮೇಶ್ವರ್ ಸಹಕಾರದಿಂದ ರಾಜಕೀಯದಲ್ಲಿ ಸಕ್ರಿಯಗೊಳ್ಳುವ ಯೋಜನೆಯಲ್ಲಿದ್ದು, ನೆಲಮಂಗಲದಲ್ಲಿ ಮುಂಬರುವ ನಗರಸಭೆ ಚುನಾವಣೆಗೆ ಸಹ ಸ್ಪರ್ಧಿಯಾಗುವ ನಿಟ್ಟಿನಲ್ಲಿ ಪರಮೇಶ್ವರ್ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮಂಗಳೂರಿನ ಈ ಬೀಚ್​ಗೆ ಸದ್ಯಕ್ಕಿಲ್ಲ ಎಂಟ್ರಿ; ಟ್ರಿಪ್ ಹೋಗೋ ಪ್ಲ್ಯಾನ್ ಇದ್ರೆ ಮುಂದೂಡಿ..!

ಪರಮೇಶ್ವರ್ ವಲಸೆ ಗುಮಾನಿ:

ಡಾ ಜಿ ಪರಮೇಶ್ವರ್ ಸದ್ಯ ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದ ಶಾಸಕರಾಗಿದ್ದು, 2013ರ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ನಂತರ 2018  ಚುನಾವಣೆಗೆ ಪರಮೇಶ್ವರ್ ನೆಲಮಂಗಲ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳಲಾಗುತ್ತೆ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು. ಈಗಿರುವಾಗ ಸದ್ಯದ ತುಮಕೂರು ಜಿಲ್ಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ರಾಜಕೀಯ ವಿದ್ಯಾಮಾನಗಳ ನಂತರ ಮತ್ತೆ ಪರಮೇಶ್ವರ್ 2023 ವಿಧಾನಸಭಾ ಚುನಾವಣೆಗೆ ಮತ್ತೆ ನೆಲಮಂಗಲ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಗುಮಾನಿ ಎದ್ದಿದ್ದು, ನೆಲಮಂಗಲ ಒಡನಾಟ ಹಾಗೂ ನೆಲಮಂಗಲ ರೌಡಿ ಶೀಟರ್ ಭೇಟಿ ವಲಸೆ ಗುಮಾನಿಗೆ ಮತ್ತಷ್ಟು ಪುಷ್ಟಿ ನೀಡಿದೆ‌.

ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಮುಂದುವರೆದ ಮಳೆ; ಸಿಲಿಕಾನ್​ ಸಿಟಿಯಲ್ಲಿ ಹೇಗಿರಲಿದೆ ಇಂದಿನ ವಾತಾವರಣ?

ಬೆಮೆಲ್ ಕೃಷ್ಣಪ್ಪ ಮರ್ಡರ್ ಪ್ರಕರಣದ ಆರೋಪಿ ಒಂದಲ್ ರವಿ:

ಇನ್ನೂ ಒಂದಲ್ ರವಿ ಈ ಹಿಂದೆ ಒಂದಷ್ಟು ಸಣ್ಣ ಪುಟ್ಟ ರೌಡಿ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಬಹುದೊಡ್ಡ ರೌಡಿ ಇತಿಹಾಸವೇನು ಇರಲಿಲ್ಲ. ಆದರೆ 2012 ರಲ್ಲಿ ನಡೆದ ಬೆಮೆಲ್ ಕೃಷ್ಣಪ್ಪ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿ ರೌಡಿ ಶೀಟರ್ ಆಗಿ ಪೊಲೀಸರು ಫೈಲ್ ಒಪನ್ ಮಾಡಿದ್ದಾರೆ.

ಆರ್‌ಟಿ‌ಐ ಕಾರ್ಯಕರ್ತ ಅನ್ನೋ ಹಣೆ ಪಟ್ಟಿ:

ಇನ್ನೂ ರೌಡಿ ಶೀಟರ್ ಒಂದಲ್‌ ರವಿ ತನಗೆ ಅಂಟಿರುವ ಕಪ್ಪು ಮಸಿಯನ್ನ ತೊಳೆದು ಹಾಕಿಕೊಳ್ಳಲು ಸಾಮಾಜಿಕ ಕಾರ್ಯಗಳನ್ನ ಮಾಡುತ್ತಿರುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಗೆ ಒಂದಷ್ಟು ಆರ್‌ಟಿ‌ಐ ಕಾಯ್ದೆ ಅಡಿ ಅರ್ಜಿಗಳನ್ನ ಹಾಕುತ್ತಾ ಅಧಿಕಾರಿಗಳನ್ನ ಬೆದರಿಸುತ್ತಿರುವ ಆರೋಪ ಕೇಳಿಬಂದಿದೆ. ಆರ್‌ಟಿ‌ಐ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುತ್ತೇನೆ ಎಂದು ತನಗೆ ತಾನೆ ಹಣೆಪಟ್ಟಿ ಹಾಕಿಕೊಂಡಿರುವ ಬಗ್ಗೆ ಹಲವರು ಆರೋಪಿಸುತ್ತಿದ್ದಾರೆ.
Published by:Latha CG
First published: