ಕೋಲಾರ: ರಾಜ್ಯದ ದೇವಮೂಲೆ ಕೋಲಾರದ ಮುಳಬಾಗಿಲಿನ ಕುರುಡುಮಲೆ ಗಣಪತಿ ದೇಗುಲ (Kurudumale Ganapati temple) ರಾಜಕಾರಣಿಗಳ ಅಚ್ಚು ಮೆಚ್ಚಿನ ಪುಣ್ಯಕ್ಷೇತ್ರ. ಶತಾಯ ಗತಾಯ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಗೆಲುವಿನ ಪ್ರಾಪ್ತಿಗಾಗಿ ಜೆಡಿಎಸ್ (JDS) ನಾಯಕರು ಕಾರ್ಯಸಿದ್ದಿ ಗಣಹೋಮ ಮೊರೆ ಹೋಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಆದಿಯಾಗಿ ರಾಹುಲ್ ಗಾಂಧಿ, ಎಸ್.ಎಂ. ಕೃಷ್ಣ, ಯಡಿಯೂರಪ್ಪ, ಕುಮಾರಸ್ವಾಮಿ ಅವರಂತಹ ದಿಗ್ಗಜ ನಾಯಕರು, ತಮ್ಮ ಯಾವುದೇ ರಾಜಕೀಯ ಕಾರ್ಯಕ್ರಮ ಆರಂಭಿಸುವ ಮುನ್ನ ಈ ಕ್ಷೇತ್ರಕ್ಕೆ ಬಂದು ಒಮ್ಮೆ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಇದೀಗ ಕೋಲಾರ (Kolar) ಜಿಲ್ಲೆಯ ಜೆಡಿಎಸ್ ನಾಯಕರು ವಿಧಾನಸಭೆ ಚುನಾವಣೆ ಗೆಲುವಿಗಾಗಿ ಕುರುಡುಮಲೆ ದೇಗುಲದಲ್ಲಿ ದಿನವಿಡೀ ಕಾರ್ಯಸಿದ್ದಿ ಗಣಹೋಮ ಹಮ್ಮಿಕೊಳ್ಳುವ ಮೂಲಕ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿಗಾಗಿ ವಿಘ್ನ ವಿನಾಯಕನ ಮೊರೆ ಹೋಗಿದ್ದಾರೆ.
ಕುರುಡುಮಲೆ ವಿನಾಯಕನ ಮೊರೆ
ಕೋಲಾರ ಜಿಲ್ಲಾ ಜೆಡಿಎಸ್ ಎಸ್ಸಿ ವಿಭಾಗದಿಂದ ಹೋಮ ಹವನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಪೂಜಾ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು, ಎಸ್ಸಿ ವಿಭಾಗದ ರಾಜ್ಯಾಧ್ಯಕ್ಷ್ಯ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ಹೋಮ ಹವನ ಕಾರ್ಯಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪ್ರಾಪ್ತಿಯಾಗಲೆಂದು ತಮ್ಮ ಕೋರಿಕೆ ಸಲ್ಲಿಸಿದ್ರು.
ಜೆಡಿಎಸ್‌ಗೆ ಗೆಲುವಿನ ವಿಶ್ವಾಸ
ಕುರುಡುಮಲೆ ದೇಗುಲದಲ್ಲಿ ಕಾರ್ಯಸಿದ್ದ ಗಣಹೋಮದ ಮೂಲಕ ಕೋರಿಕೆ ಸಲ್ಲಿಸಿ, ತಕ್ಕ ಪರಿಶ್ರಮ ಹಾಕಿದಲ್ಲಿ ಅಂದುಕೊಂಡ ಕೆಲಸ ಆಗುತ್ತದೆ ಎಂಬುದು ಜೆಡಿಎಸ್ ನಾಯಕರ ನಂಬಿಕೆಯಾಗಿದೆ. ಕೋಲಾರದ ಆರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕನಿಷ್ಟ ನಾಲ್ಕಕ್ಕಿಂತಲೂ ಹೆಚ್ಚು ಸ್ತಾನ ಗೆಲ್ಲಲಿದೆ ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿದೆ. ಇದಕ್ಕಿರುವ ವಿಘ್ನಗಳು ದೂರವಾಗಲಿ ಎಂದು ಕೋರಿಕೆ ಸಲ್ಲಿಕೆ ಮಾಡಿರೊದಾಗಿ ಮುಖಂಡರು ತಿಳಿಸಿದ್ದಾರೆ.
ಈ ಹಿಂದೆ ಘಟಾನುಘಟಿಗಳಿಂದ ಪೂಜೆ
ಈ ಹಿಂದೆ ಹಲವು ರಾಜಕಾರಣಿಗಳು ಕುರುಡುಮಲೆ ವಿನಾಯಕನ ಮೊರೆ ಹೋಗಿ, ಗೆಲುವು ಸಾಧಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಆದಿಯಾಗಿ ರಾಹುಲ್ ಗಾಂಧಿ, ಎಸ್.ಎಂ. ಕೃಷ್ಣ, ಯಡಿಯೂರಪ್ಪ, ಕುಮಾರಸ್ವಾಮಿ ಅವರಂತಹ ದಿಗ್ಗಜ ನಾಯಕರು, ತಮ್ಮ ಯಾವುದೇ ರಾಜಕೀಯ ಕಾರ್ಯಕ್ರಮ ಆರಂಭಿಸುವ ಮುನ್ನ ಈ ಕ್ಷೇತ್ರಕ್ಕೆ ಬಂದು ಒಮ್ಮೆ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: CT Ravi: ಸಿಟಿ ರವಿ ವಿರುದ್ಧ ವೀರಶೈವ ಲಿಂಗಾಯತರ ಆಕ್ರೋಶ, ಪತ್ರಿಕಾ ಪ್ರಕಟಣೆ ಮೂಲಕ ಖಡಕ್ ಎಚ್ಚರಿಕೆ
ಗೆಲುವು ಕೊಡುತ್ತಾನಾ ಕುರುಡುಮಲೆ ವಿನಾಯಕ?
ಒಟ್ನಲ್ಲಿ ಕೋಲಾರ ಜಿಲ್ಲೆಯ ಕುರುಡುಮಲೆ ಶ್ರೀ ವಿನಾಯಕ ದೇಗುಲ ಭಕ್ತರ ಇಷ್ಟಾರ್ಥಗಳನ್ನ ನೆರವೇರಿಸುವ ಅಚ್ಚು ಮೆಚ್ಚಿನ ಪುಣ್ಯಕ್ಷೇತ್ರವಾಗಿದೆ. ರಾಜಕಾರಣಿಗಳು ಸಹ ಚುನಾವಣೆ ವೇಳೆಯಲ್ಲಿ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸೊದು ಸಹಜವಾಗಿದ್ದು, ಚುನಾವಣೆಯ ಫಲಿತಾಂಶದ ನಂತರವಷ್ಟೆ ಗೆಲುವು ಸೋಲು ನಿರ್ಧಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ