ಚಿಕ್ಕಮಗಳೂರು: ಸಾಮಾನ್ಯವಾಗಿ ಗರ್ಭ ಧರಿಸಿದ ಮಹಿಳೆಯ ದೇಹ ಸಂಪೂರ್ಣವಾಗಿ ಬದಲಾವಣೆಯಾಗುತ್ತಾ ಬರುತ್ತದೆ. ದೇಹದಲ್ಲಿ ಆಗುವಂತಹ ಹಾರ್ಮೋನು ವೈಪರಿತ್ಯದಿಂದಾಗಿ ಸ್ತನ ಊದಿಕೊಳ್ಳುವುದು, ಆಯಾಸಗೊಳ್ಳುವುದು, ವಾಕರಿಕೆ, ನಿಶ್ಯಕ್ತಿ, ಹಗುರ ಋತುಚಕ್ರ, ಪದೇ ಪದೇ ಮೂತ್ರವಿಸರ್ಜನೆ, ತಲೆತಿರುಗುವಿಕೆ, ಬೆನ್ನು ನೋವು ಹೀಗೆ ಹಲವಾರು ಲಕ್ಷಣಗಳು ಗರ್ಭಿಣಿ ಮಹಿಳೆಯರಲ್ಲಿ (Pregnant Women) ಕಂಡು ಬರುತ್ತದೆ. ಅದರಲ್ಲಿಯೂ ಗರ್ಭಿಣಿಯರಿಗೆ ದಿನ ಕಳೆದಂತೆ ಹೊಟ್ಟೆ ದಪ್ಪ ಆಗುತ್ತದೆ. ಆದರೆ ಚಿಕ್ಕಮಗಳೂರಿನ (Chikkamagalauru) ಸರ್ಕಾರಿ ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ತಾನು ಗರ್ಭಿಣಿಯಾಗಿರುವ ವಿಚಾರ ಮುಚ್ಚಿಟ್ಟು ಇದೀಗ ಮಗುವಿಗೆ (Baby) ಹಾಸ್ಟೆಲ್ (Hostel) ನಲ್ಲಿಯೇ ಜನ್ಮ ನೀಡಿದ್ದಾಳೆ. ಇದೀಗ ಯುವತಿ ಗರ್ಭಿಣಿಯಾಗಿರುವ ಬಗ್ಗೆ 9 ತಿಂಗಳು ಪ್ರಿನ್ಸಿಪಾಲ್, ವಾರ್ಡನ್, ಸಹಪಾಠಿಗಳು, ಅಡುಗೆಯವರು ಯಾರಿಗೂ ಗೊತ್ತಾಗಿಲ್ವಾ ಎಂದು ದಲಿತ ಸಂಘಟನೆಗಳು (Dalit organization) ಪ್ರಶ್ನಿಸುತ್ತಿದೆ.
ಹೌದು, ಚಿಕ್ಕಮಗಳೂರಿನ ಸರ್ಕಾರಿ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಹೆರಿಗೆಯಾಗಿದ್ದು, ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿ, ವಾರ್ಡನ್ ಅನ್ನು ವಜಾಗೊಳಿಸುವಂತೆ ದಲಿತ ಸಂಘಟನೆಗಳು ಆಗ್ರಹಿಸಿದೆ.
ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಗೆ ಹೆರಿಗೆ
ಚಿಕ್ಕಮಗಳೂರಿನ ಪಿಯುಸಿ ಹಾಸ್ಟೆಲ್‌ನಲ್ಲಿ ಈ ಘಟನೆ ವರದಿಯಾಗಿದ್ದು, ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಗೆ ಹೆರಿಗೆಯಾಗಿದೆ. ಹೀಗಾಗಿ ವಾರ್ಡನ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳು ವಾಗ್ದಾಳಿ ನಡೆಸಿದ್ದಾರೆ.
ಹುಡುಗನ ವಿರುದ್ಧ ಪೋಕ್ಸೋ ಕೇಸ್
ಹಾಸ್ಟೆಲ್‌ನಲ್ಲಿದ್ದುಕೊಂಡು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಹೆರಿಗೆಯಾಗಿದೆ. ಆದರೆ ಈ ವಿಚಾರವನ್ನು ಹೊರಬರಲು ಬಿಡದೇ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ. ಇನ್ನೂ ವಿಷಯ ತಿಳಿದು ಬರುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರೆ ಆಕೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು. ಹಾಗಾಗಿ ಗೊತ್ತಾಗಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಯುವತಿಯನ್ನು ಮನೆಗೆ ಕಳಿಸಿ ಹುಡುಗನ ವಿರುದ್ಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: Pregnancy Cold: ಗರ್ಭಿಣಿಯರನ್ನು ಕಾಡುವ ಶೀತಕ್ಕೆ ಸುಲಭ ಪರಿಹಾರ ಇಲ್ಲಿದೆ
ಒಂಭತ್ತು ತಿಂಗಳು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಯಾಮಾರಿದ್ಲಂತೆ ಯುವತಿ
ಇನ್ನೂ ದಲಿತ ಸಂಘಟನೆಗಳು, ನಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುವುದು ಏಕೆ? ಪೋಷಕರು ಯಾವ ಧೈರ್ಯದ ಮೇಲೆ ಮಕ್ಕಳನ್ನ ಹಾಸ್ಟೆಲ್‌ಗೆ ಸೇರಿಸುತ್ತಾರೆ? ಇಬ್ಬರು ವಾರ್ಡನ್‌ಗಳು ಏನು ಮಾಡುತ್ತಿದ್ದರು? ಸರ್ಕಾರಿ ಹಾಸ್ಟೆಲ್‌ನಲ್ಲೇ ರಕ್ಷಣೆ ಇಲ್ಲ ಅಂದ ಮೇಲೆ ಮಕ್ಕಳನ್ನ ಹೇಗೆ ಕಳಿಸೋದು? ಊಟ ಹಾಕಿ, ಬಿಲ್ ಮಾಡಿಕೊಂಡು ಹಣ ತೆಗೆದುಕೊಳ್ಳುವುದು ಮಾತ್ರ ವಾರ್ಡನ್ ಕೆಲಸನಾ? ಒಂಭತ್ತು ತಿಂಗಳು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಯಾರಿಗೂ ಗೊತ್ತಾಗದಂತೆ ಯುವತಿ ಅದ್ಹೇಗೆ ಇದ್ದಳು? ಸಹಪಾಠಿಗಳು, ಅಡುಗೆಯವರು, ಕಾಲೇಜಿನಲ್ಲಿ ಶಿಕ್ಷಕರು, ವಾರ್ಡನ್‌ಗಳಿಗೆ ಕಿಂಚಿತ್ತು ಅನುಮಾನ ಬಾರದಂತೆ 9 ತಿಂಗಳು ಯಾಮಾರಿಸಿದಳಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ವಾರ್ಡನ್ ವಿರುದ್ಧ ಕೇಸ್ ದಾಖಲಿಸಿ ವಜಾಗೊಳಿಸುವಂತೆ ಒತ್ತಾಯ
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ಮಹಿಳೆಯಾಗಿದ್ದಾರೆ. ಅಲ್ಲದೇ ವಾರ್ಡನ್ ಸಹ ಮಹಿಳೆಯಾಗಿದ್ದಾರೆ. ಇವರಿಬ್ಬರು ಏನು ಮಾಡುತ್ತಿದ್ದರು? ಯುವತಿ ಗರ್ಭಿಣಿಯಾಗಿರುವುದು ಅವರಿಗೆ ಗೊತ್ತಿದ್ದೇ ಆಯಿತಾ ಅಥವಾ ಗೊತ್ತಿಲ್ಲದೇ ಆಯ್ತಾ? ಮಕ್ಕಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿ ವಹಿಸಿರುವ ವಾರ್ಡನ್ ವಿರುದ್ಧ ಕೇಸ್ ದಾಖಲಿಸಿ ಕೆಲಸದಿಂದ ವಜಾಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Pregnancy Care: ಗರ್ಭಿಣಿಯರು ಮೊಟ್ಟೆಯನ್ನು ತಿನ್ನೋಕೂ ಒಂದು ವಿಧಾನವಿದೆ
ಹಾಸ್ಟೆಲ್‌ನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು. ಅದನ್ನು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ತಪಾಸಣೆ ಮಾಡಿದ್ದರೆ ಈ ಪ್ರಕರಣ ಆಗಲೇ ಹೊರಗೆ ಬರುತ್ತಿತ್ತು. ಆದರೆ ಒಂಭತ್ತು ತಿಂಗಳು ಮುಗಿದು ಹಾಸ್ಟೆಲ್‌ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ ಅಂದರೆ ಒಳಗೆ ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ