ಪ್ಲಾಸ್ಟಿಕ್​ಗೆ ಟಾಂಗ್ ಕೊಡ್ತಿದೆ ಹಸಿರು ಕವರ್; ಕನ್ನಡಿಗ ಯುವಕನ ಹೆಮ್ಮೆಯ ಸಾಧನೆ!

ಕೆಲವು ಆಯ್ದ ತರಕಾರಿಗಳ ಸಿಪ್ಪೆ, ಗೆಣಸು ಮುಂತಾದ ಕೇವಲ ಬಿಸಿನೀರಿನಲ್ಲಿ ಆರಾಮಾಗಿ ಕರಗಿ ಪರಿಸರಕ್ಕೆ ಯಾವುದೇ ಹಾನಿ ಮಾಡದ ಎನ್ವಿಗ್ರೀನ್ ಪ್ರಾಡಕ್ಟ್ ಇವರ ಹೆಗ್ಗಳಿಕೆ. ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಊರಿನಿಂದ ಬಂದ ಈ ಯುವಕ ಇಂದು ಆತ್ಮನಿರ್ಭರತೆಯ ಜೀವಂತ ಸಾಕ್ಷಿಯಾಗಿ ಕಣ್ಣೆದುರಿಗಿದ್ದಾರೆ.

ಅಶ್ವತ್ಥ್​ ಹೆಗಡೆ.

ಅಶ್ವತ್ಥ್​ ಹೆಗಡೆ.

  • Share this:
ಬೆಂಗಳೂರು: ಇದೊಂದು ಸಾಧಾರಣ ಕವರ್... ನೋಡೋಕೆ ಮಾಮೂಲಿ ಪ್ಲಾಸ್ಟಿಕ್ ಕವರ್ ನಂತೆಯೇ ಕಾಣುತ್ತೆ, ಅದೇ ರೀತಿ ಅಗತ್ಯ ವಸ್ತುಗಳನ್ನು ತುಂಬಿಕೊಂಡು ಹೋಗಬಹುದಾದ ಸ್ಟ್ರೆಂತ್ ಇದಕ್ಕಿದೆ. ಆದ್ರೆ ಇದು ಪ್ಲಾಸ್ಟಿಕ್ ಅಲ್ಲ, ಮಣ್ಣಲ್ಲಿ, ನೀರಲ್ಲಿ ಕರಗಿ ಹೋಗೋ ವಿಶಿಷ್ಟ ವಸ್ತು.. ಅಂದ್ಹಾಗೆ ಈ ವಸ್ತು ಮತ್ತು ಅದರ ಜನಕ ಎರಡೂ ನಮ್ಮ ರಾಜ್ಯದಲ್ಲೇ ಹುಟ್ಟಿ ಬೆಳೆದು ಹೆಸರು ಮಾಡುತ್ತಿರುವವರು.. ಆತ್ಮನಿರ್ಭರತೆ.. ಪ್ರಧಾನಿ ಮೋದಿ ಈ ಕಾರ್ಯಕ್ರಮವನ್ನು ಜನರಿಗೆ ಪರಿಚಯಿಸಿ ಪ್ರೋತ್ಸಾಹಿಸೋ ಮುಂಚೆಯೇ ಆ ದಿಕ್ಕಿನಲ್ಲಿ ಹೆಜ್ಜೆ ಹಾಕಿದ ವ್ಯಕ್ತಿಯ ಹೆಸರು ಅಶ್ವಥ್ ಹೆಗಡೆ. ಇಡೀ ಜಗತ್ತಿಗೇ ಮಾರಕವಾಗಿರುವ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಪರಿಸರಸ್ನೇಹಿ ಉತ್ಪನ್ನ ಕಂಡುಹಿಡಿದು, ಅದನ್ನು ಯಶಸ್ವಿಯಾಗಿ ವಿಶ್ವದ ಮೂಲೆ ಮೂಲೆಗಳಿಗೆ ತಲುಪಿಸುತ್ತಿದ್ದಾರೆ ಈತ.

ಕೆಲವು ಆಯ್ದ ತರಕಾರಿಗಳ ಸಿಪ್ಪೆ, ಗೆಣಸು ಮುಂತಾದ, ಕೇವಲ ಬಿಸಿನೀರಿನಲ್ಲಿ ಆರಾಮಾಗಿ ಕರಗಿ ಪರಿಸರಕ್ಕೆ ಯಾವುದೇ ಹಾನಿ ಮಾಡದ ಎನ್ವಿಗ್ರೀನ್ ಪ್ರಾಡಕ್ಟ್ ಇವರ ಹೆಗ್ಗಳಿಕೆ. ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಊರಿನಿಂದ ಬಂದ ಈ ಯುವಕ ಇಂದು ಆತ್ಮನಿರ್ಭರತೆಯ ಜೀವಂತ ಸಾಕ್ಷಿಯಾಗಿ ಕಣ್ಣೆದುರಿಗಿದ್ದಾರೆ. ಪ್ಲಾಸ್ಟಿಕ್ ಬ್ಯಾನ್ ಆದಾಗ ಅಶ್ವಥ್ ಎಲ್ಲೆಡೆ ಬಟ್ಟೆಯ ಬ್ಯಾಗುಗಳನ್ನ ಮಾರಾಟ ಮಾಡ್ತಿದ್ರಂತೆ. ಆಗ ಮೀನುಗಾರ ಮಹಿಳೆಯೊಬ್ಬರು 20 ರೂ ಮೀನಿಗೆ 25 ರೂಪಾಯಿ ಬೆಲೆಬಾಳೋ ಬಟ್ಟೆಬ್ಯಾಗಲ್ಲಿ ಹಾಕಿಕೊಡೋಕಾಗುತ್ತಾ ಅಂತ ಅಶ್ವಥ್ ಗೇ ಪ್ರಶ್ನಿಸಿದ್ರಂತೆ.. ಆಗ ಇವ್ರ ತಲೆಗೆ ಹೊಳೆದದ್ದೇ ಎಲ್ಲರೂ ಸುಲಭವಾಗಿ ಬಳಸಬಲ್ಲ, ಕೈಗಟುಕುವ ದರದ, ಪರಿಸರ ಸ್ನೇಹಿ ಉತ್ಪನ್ನ.

ಅದರ ಪರಿಣಾಮವಾಗಿ ಎನ್ವಿಗ್ರೀನ್ ಜನಿಸಿದೆ. ಇವರು ತಯಾರಿಸೋ ಮೂಲ ವಸ್ತುವನ್ನು ಕೊಂಡು ಅದರಿಂದ ತಯಾರಕರು ತಮಗೆ ಬೇಕಾದ ಆಕಾರ ಮತ್ತು ಸೈಜಿನ ಕವರ್ ಗಳನ್ನು ತಯಾರಿಸ್ತಾರೆ. ಅದನ್ನು ಬಳಸಿದ ಗ್ರಾಹಕ ಬೇಕಾಬಿಟ್ಟಿಯಾಗಿ ಬಿಸಾಕಿದ್ರೂ 180 ದಿನಗಳಲ್ಲಿ ಆ ಕವರ್ ಮಣ್ಣಲ್ಲಿ ಮಣ್ಣಾಗಿ ಹೋಗಿಬಿಡುತ್ತದೆ. ಇವರ ಈ ಅತ್ಯುತ್ತಮ ಪ್ರಾಡಕ್ಟ್ ಯೂರೋಪ್, ಅಮೇರಿಕಾದಲ್ಲೂ ಭಾರೀ ಫೇಮಸ್ ಆಗಿದೆ. ಕೋವಿಡ್ ಸಂದರ್ಭದಲ್ಲಿ ಜನ ಆರೋಗ್ಯ ಮತ್ತು ಪರಿಸರದ ಬಗ್ಗೆ ಎಚ್ಚೆತ್ತುಕೊಂಡಂತಿದೆ.

ಇದನ್ನೂ ಓದಿ: Death Penalty for the Rapist: ಉತ್ತರ ಪ್ರದೇಶದಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಹಾಗಾಗಿ ಹಿಂದಿಗಿಂತಲೂ ಹೆಚ್ಚು ಆಸಕ್ತಿ ವಹಿಸಿ ಪರಿಸರ‌ ಸ್ನೇಹಿ ವಸ್ತುಗಳನ್ನು ಬಳಸುವ ಇಚ್ಛೆ ವ್ಯಕ್ತಪಡಿಸ್ತಿದ್ದಾರೆ. ಹೀಗಾಗಿ ಇವರ ಉತ್ಪನ್ನಗಳಿಗೆ ಬೇಡಿಕೆ ಉತ್ತಮವಾಗಿದೆ. ಕೇವಲ ಇವರು ತಯಾರಿಸೋ ಕಚ್ಚಾಸಾಮಗ್ರಿ ಮಾತ್ರವಲ್ಲದೇ, ಅದರಿಂದ ವಿಧವಿಧವಾದ ಉತ್ಪನ್ನಗಳನ್ನು ತಯಾರಿಸಲು ಅನೇಕರು ಆಸಕ್ತಿ ತೋರಿಸ್ತಿದ್ದಾರೆ. ಇದಕ್ಕಾಗಿ ಬಗೆಬಗೆಯ ತಯಾರಿಕಾ ಘಟಕಗಳನ್ನು ಕೂಡಾ ಸ್ಥಾಪಿಸ್ತಿದ್ದಾರೆ.

ಇಡೀ ಜಗತ್ತಿಗೇ ವಿಲನ್ ಆಗಿರೋ ಪ್ಲಾಸ್ಟಿಕ್ ಗೆ ತರಕಾರಿ ಸಿಪ್ಪೆ ಮೂಲಕ ಟಾಂಗ್ ಕೊಡೋಕೆ ಇವ್ರು ಕಂಡುಹಿಡಿದ ರಾಮಬಾಣ ಗುರಿತಲುಪಿದೆ. ಇನ್ನೇನಿದ್ರೂ ಹಸಿರು ಕವರ್ ಎಲ್ಲೆಡೆ ರಾರಾಜಿಸೋದಷ್ಟೇ ಬಾಕಿ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ತಮ್ಮ ಉತ್ಪನ್ನದ ಜೊತೆಗೆ ತಾವೂ ಜಗತ್ಪ್ರಸಿದ್ಧರಾಗ್ತಿದ್ದಾರೆ‌ ಅಶ್ವಥ್. ಒಂದು ಕೆಲಸಕ್ಕೂ ವಿದೇಶದ ಕಡೆ ಮುಖ ಮಾಡುವ ಯುವಜನರೇ ಹೆಚ್ಚಾಗಿರುವಾಗ ಇಲ್ಲೇ ಹೊಸದೇನನ್ನೋ ಹುಡುಕಿ, ವಿದೇಶಿಯರು ಮುಗಿಬಿದ್ದು ಕೊಳ್ಳುವಂತೆ ಮಾಡಿರೋ ಇವರ ಸಾಧನೆ ಸಣ್ಣದಲ್ಲ.
Published by:MAshok Kumar
First published: