HOME » NEWS » State » A PRIVATE COMPANY ILLEGALLY ACQUIRE LAND FARMERS DEMAND FOR JUSTICE RHHSN ANLM

ಖಾಸಗಿ ಕಂಪನಿಯಿಂದ ಅಕ್ರಮವಾಗಿ ಭೂಮಿ‌ ಕಬಳಿಕೆ ಅರೋಪ: ನಮಗೆ ನ್ಯಾಯ ಕೊಡಿ ಎನ್ನುತ್ತಿರುವ ರೈತರು

ಖಾಸಗಿ ಕಂಪನಿಯೊಂದು ರೈತರ ಭೂಮಿಯನ್ನು‌ ಅಕ್ರಮವಾಗಿ ಕಬಳಿಸಿದ್ದು ತಲೆಮಾರುಗಳು ಕಳೆದರು ರೈತರಿಗೆ ಮಾತ್ರ ಹೊಟ್ಟೆಗೆ ತಣ್ಣಿರು ಬಟ್ಟೆ ಅನ್ನುವಂತಾಗಿದೆ ಪರಿಸ್ಥಿತಿ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದ್ದು ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ನ್ಯಾಯ ಸಿಗುವಂತೆ ಸಹಾಯ ಮಾಡಬೇಕಿದೆ.

news18-kannada
Updated:January 21, 2021, 7:59 PM IST
ಖಾಸಗಿ ಕಂಪನಿಯಿಂದ ಅಕ್ರಮವಾಗಿ ಭೂಮಿ‌ ಕಬಳಿಕೆ ಅರೋಪ: ನಮಗೆ ನ್ಯಾಯ ಕೊಡಿ ಎನ್ನುತ್ತಿರುವ ರೈತರು
ಭೂಮಿ ಕೊಡಿಸಿ ನ್ಯಾಯ ಕೊಡಿ ಎಂದು ಆಗ್ರಹಿಸುತ್ತಿರುವ ರೈತರ ಪ್ರತಿಭಟನೆ.
  • Share this:
ಬೆಂಗಳೂರು (ಜ 21): ಬೆಂಗಳೂರು ನಗರ ಬೆಳೆಯುತ್ತಲೇ ನಗರದ ಸುತ್ತಮುತ್ತಲೂ ಭೂಮಿ ಮೇಲೆ ಧನವಂತರ ಕಣ್ಣು ಬೀಳಿತ್ತಿದೆ. ಅಕ್ರಮವಾಗಿ ರೈತರ ಭೂಮಿ ಕಬಳಿಸಿರುವ ಕಂಪನಿಯೊಂದು ನಕಲಿ ದಾಖಲಿ ಸೃಷ್ಟಿಸಿ ಭೂ ಪರಿವರ್ತನೆ ಹೆಸರಿನಲ್ಲಿ ಬಡಾವಣೆ ನಿರ್ಮಾಣ ಮಾಡಲು ಖಾಸಗಿ ಸಂಸ್ಥೆಯೊಂದು ಮುಂದಾಗಿದೆ. ಆದ್ರೆ ಭೂಮಿ ಕಳೆದುಕೊಂಡ ರೈತರು ನಮಗೆ ನ್ಯಾಯ ಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮಗೆ ನ್ಯಾಯ ಕೊಡಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ರೈತರು ಎಂ‌ಎಸ್‌ಪಿ‌ಪಿ‌ಗೆ ದಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಭೂಮಿ ನಮಗೆ ಕೊಟ್ಟು ಬಿಡಿ ಎಂದು ಮಹಿಳೆಯ ಕಣ್ಣೀರು ಹಾಕುತ್ತಿದ್ದಾರೆ. ಹೌದು ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯ 110 ಎಕರೆ ಭೂಮಿ ಭಾರಿ ವಿವಾದಕ್ಕೆ ಕಾರಣವಾಗಿದ್ದು ಈ ಭೂಮಿಯೂ 1937ಕ್ಕೂ ಮುಂಚೆ ಅಂದಿನ ಮೈಸೂರು ರಾಜ್ಯದಲ್ಲಿ ರೈತರು ಪಡೆದುಕೊಂಡಿರುತ್ತಾರೆ.

ಖಾಸಗಿ ಕಂಪನಿ ಸ್ವಾಧೀನಕ್ಕೆ ಸರ್ಕಾರ ಆದೇಶ

ಮೈಸೂರು ಸರ್ಕಾರ  ಮೈಸೂರು ಸ್ಟೋನ್‌ವೇರ್ ಪೈಪ್ಸ್ ಅಂಡ್ ಪಾಟರೀಸ್ ಎನ್ನುವ ಕಂಪನಿಗೆ ಸ್ವಾಧೀನಪಡಿಸಿಕೊಳ್ಳಲು ಆದೇಶ ನೀಡುತ್ತದೆ. ಆದ್ರೆ ಭೂಮಿಯನ್ನ ಸ್ವಾಧೀನಕ್ಕೆ ಪಡೆದು 5 ವರ್ಷಗಳು ಕಳೆದರು ಎಂ‌ಎಸ್‌ಪಿಪಿ ಸಂಸ್ಥೆಯು ರೈತರಿಗೆ ಒಂದು ರುಪಾಯಿ ಪರಿಹಾರ ಹಣ ನೀಡಿರುವುದಿಲ್ಲ. ಈಗಾಗಿ ಸರ್ಕಾರ ಸ್ವಾಧೀನ ಪ್ರಕ್ರಿಯೆಯನ್ನ 1941ರಲ್ಲಿ ವಜಾ ಗೊಳಿಸಿ ಅದೇಶ ಹೊರಡಿಸಿತ್ತು.

ಮೈನಿಂಗ್ ಮಾಡಲು ಗುತ್ತಿಗೆ:

ಭೂ ಸ್ವಾಧೀನ ಪ್ರಕ್ರಿಯೆ ವಜಾಗೊಂಡ ನಂತರ ಹಳೇ ಆದೇಶ ಪ್ರತಿಯನ್ನೇ ಇಟ್ಟುಕೊಂಡು ಸರ್ಕಾರದ ದಿಕ್ಕು ತಪ್ಪಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮೈನಿಂಗ್ ಮಾಡಲು 1978ರಲ್ಲಿ ಮೈನಿಂಗ್ ಮಾಡಲು 20 ವರ್ಷಗಳ ಕಾಲ ಗುತ್ತಿಗೆಗೆ ಭೂಮಿಯನ್ನ ಕಂಪನಿ ಪಡೆಯುತ್ತೆ, ಅದು ಕೂಡ 1998 ರಲ್ಲಿ ಮೈನಿಂಗ್ ಗುತ್ತಿಗೆ ರದ್ದಾಗಿದ್ದು ಈ ಮೈನಿಂಗ್ ಸಂಸ್ಥೆಯೇ ನಕಲಿ ಎಂದು 2013ರಲ್ಲಿ ಎಂದು ಕರ್ನಾಟಕ ರಾಜ್ಯ ಪತ್ರ ಆದೇಶ ಹೊರಡಿಸಿದೆ.

ನಕಲಿ ದಾಖಲೆಗಳ ಸೃಷ್ಟಿ:ಸರ್ಕಾರದ ದಿಕ್ಕು ತಪ್ಪಿಸಿ ಇಷ್ಟೆಲ್ಲಾ ಮಾಡಿದ್ದಲ್ಲದೇ ಎಂ‌ಎಸ್‌ಪಿ‌ಪಿ ಸಂಸ್ಥೆಯು ಬಿಡಿಎ ಹಾಗೂ ಜಿಲ್ಲಾಧಿಕಾರಿಗಳ ಹಿಂಬರಹ ಪ್ರತಿಯನ್ನು ಇಟ್ಟುಕೊಂಡು ಅಕ್ರಮವಾಗಿ ವಶಕ್ಕೆ ಪಡೆದಿರುವ ಭೂಮಿಯಲ್ಲಿ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡಲು ಮುಂದಾಗಿದ್ದು ಈ ಕುರಿತು ನೊಂದ ರೈತರು ಬೆಂಗಳೂರು ಉತ್ತರ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಬೆಂಗಳೂರು ಉತ್ತರ ವಿಭಾದವರಿಗೆ ದೂರು ಸಹ ನೀಡಿದ್ದಾರೆ, ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಕೈತೊಳೆದುಕೊಂಡಿದ್ದಾರೆ.

ಇದನ್ನು ಓದಿ: ಖಾತೆ ಹಂಚಿಕೆ ಅಸಮಾಧಾನ, ಸಚಿವ ಸಂಪುಟ ಸಭೆಗೆ ಗೈರು; ಸಿಎಂ ಮಾತನಾಡಿ ಸರಿಪಡಿಸುತ್ತಾರೆ ಎಂದ ಬೊಮ್ಮಾಯಿ

ನ್ಯಾಯಾಲಯದಲ್ಲೆ ದಾವೆ:

ಇನ್ನೂ ಭೂ ಅಕ್ರಮ ಕಬಳಿಕೆ ಸಂಬಂಧ ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ನೊಂದ ರೈತರು ದಾವೆ ಹೂಡಿದ್ದು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಎಂ‌ಎಸ್‌‌ಪಿಪಿ ಸಂಸ್ಥೆ ಬಡಾವಣೆ ಮಾಡಲು ಮುಂದಾಗಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ 2019ರ ವರೆಗೂ ರೈತರ ಹೆಸರಿನಲ್ಲೆ ಇದ್ದ ಭೂಮಿ ನಂತರ ಇದ್ದಕ್ಕಿದ್ದ ಹಾಗೆ ಹಣ ಹಾಗೂ ಪ್ರಭಾವ ಬಳಸಿ ಮೈನಿಂಗ್ ಕಂಪನಿ ಹೆಸರಿಗೆ ಪಹಣಿ ಪರಿವರ್ತನೆಯಾಗಿದೆ.
Youtube Video

ಒಟ್ಟಾರೆ ಖಾಸಗಿ ಕಂಪನಿಯೊಂದು ರೈತರ ಭೂಮಿಯನ್ನು‌ ಅಕ್ರಮವಾಗಿ ಕಬಳಿಸಿದ್ದು ತಲೆಮಾರುಗಳು ಕಳೆದರು ರೈತರಿಗೆ ಮಾತ್ರ ಹೊಟ್ಟೆಗೆ ತಣ್ಣಿರು ಬಟ್ಟೆ ಅನ್ನುವಂತಾಗಿದೆ ಪರಿಸ್ಥಿತಿ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದ್ದು ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ನ್ಯಾಯ ಸಿಗುವಂತೆ ಸಹಾಯ ಮಾಡಬೇಕಿದೆ.
Published by: HR Ramesh
First published: January 21, 2021, 7:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories