Prisoner Love story: ಪ್ರೇಯಸಿಯೊಂದಿಗೆ ಸರಸವಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಪಾತಕಿ, ಲವ್ವಿಡವ್ವಿಗೆ ಪೊಲೀಸರೇ ಸಾಥ್!

ಪ್ರೇಯಸಿ ಜೊತೆ ಸರಸವಾಡುತ್ತಿರೋವಾಗಲೇ ಪಾತಕಿ ಸಿಕ್ಕಿಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ. ವಿಚಾರಣೆ ಕರೆದೊಯ್ಯುವಾಗ ಪ್ರೇಯಸಿಯೊಂದಿಗೆ ಸರಸವಾಡಲು ಪೊಲೀಸರೇ ಅವಕಾಶ ಕೊಟ್ಟಿರೋದು ಈಗ ಬಹಿರಂಗವಾಗಿದೆ. ಸರಸವಾಡುತ್ತಿರೋವಾಗಲೇ ಧಾರವಾಡ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ಪ್ರೇಯಸಿ ಜೊತೆ ಸರಸವಾಡುತ್ತಿರುವಾಗಲೇ ಸಿಕ್ಕಿಬಿದ್ದ ಪಾತಕಿ!

ಪ್ರೇಯಸಿ ಜೊತೆ ಸರಸವಾಡುತ್ತಿರುವಾಗಲೇ ಸಿಕ್ಕಿಬಿದ್ದ ಪಾತಕಿ!

  • Share this:
ಯಾವುದೇ ಅಪರಾಧಿಯನ್ನು ನ್ಯಾಯಾಲಯಕ್ಕೆ (Court) ಹಾಜರು ಮಾಡುವಾಗ ಬಿಗಿ ಪೊಲೀಸ್ (Police) ಬಂದೋಬಸ್ತ್ ಇರುತ್ತೆ. ಅಷ್ಟೇ ಭದ್ರತೆಯಿಂದ (Security) ಅಪರಾಧಿಗಳನ್ನು(Prisoner) ಕರೆದೊಯ್ಯಲಾಗುತ್ತೆ‌. ಆದರೆ ಇಲ್ಲಿ ಪೊಲೀಸರೇ ಅಪರಾಧಿಯೊಬ್ಬನ ಲವ್ವಿಡವ್ವಿಗೆ (Love story) ಸಾಥ್ ಕೊಟ್ಟಿದ್ದಾರೆ. ಅಪರಾಧಿಗೆ ತನ್ನ ಪ್ರೇಯಸಿಯೊಂದಿಗೆ (Lover) ಸರಸವಾಡಲು ಅವಕಾಶ ಕೊಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಾಗ್ತಿದ್ದಂತೆ ರೇಡ್​ (Raid) ಮಾಡಿದ್ದಾರೆ. ಈ ವೇಳೆ ಪ್ರೇಯಸಿ ಜೊತೆ ಸರಸವಾಡುತ್ತಿರೋವಾಗಲೇ ಪಾತಕಿ ಸಿಕ್ಕಿಬಿದ್ದಿದ್ದಾನೆ. ಅಂದಹಾಗೇ ಈ ಘಟನೆ ನಡೆದಿರೋದು ಧಾರವಾಡದಲ್ಲಿ. ಸಿಕ್ಕಿಬಿದ್ದ ಪಾತಕಿಯ ಹೆಸರು ಬಚ್ಚಾ ಖಾನ್ (Bacha khan). ಈಗಾಗಲೇ ಈತನಿಗೆ ಹಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ವಿಚಾರಣೆ ಕರೆದೊಯ್ಯುವಾಗ ಪ್ರೇಯಸಿಯೊಂದಿಗೆ ಸರಸವಾಡಲು ಪೊಲೀಸರೇ ಅವಕಾಶ ಕೊಟ್ಟಿರೋದು ಈಗ ಬಹಿರಂಗವಾಗಿದೆ.

ಬಚ್ಚಾ ಖಾನ್ ಹೇಳಿಕೇಳಿ ದೊಡ್ಡ ಭೂಗತ ಪಾತಕಿ. ಹಲವಾರು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದವನು. ಅಷ್ಟೇ ಅಲ್ಲ ಅನೇಕ ಪ್ರಕರಣಗಳಲ್ಲಿ ಜೈಲು ಶಿಕ್ಷೆಯೂ ಆಗಿದೆ. ಈಗಾಗಲೇ ಒಂದು ಕೇಸಿನಲ್ಲಂತೂ ಈತನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇನ್ನೂ ಅನೇಕ ಪ್ರಕರಣಗಳ ವಿಚಾರಣೆಯೂ ನಡೆದಿದೆ.

ಜೈಲು ಬದಲು ಲಾಡ್ಜ್​ಗೆ ಹೋಗಿದ್ದ ಪಾತಕಿ!

ಬಚ್ಚಾ ಖಾನ್​ನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಐವರು ಪೊಲೀಸರು ಧಾರವಾಡದ ನ್ಯಾಯಾಲಯಕ್ಕೆ ಕರೆ ತಂದಿದ್ದರು. ಆದರೆ ವಿಚಾರಣೆ ಬಳಿಕ ಮರಳಿ ಬಳ್ಳಾರಿಗೆ ಹೋಗದೇ ಧಾರವಾಡದ ಸತ್ತೂರು ಬಡಾವಣೆಯಲ್ಲಿರೋ ಪ್ರಕೃತಿ ರೆಸಿಡೆನ್ಸಿ ಲಾಡ್ಜ್​ಗೆ ಬಿಟ್ಟಿದ್ದಾರೆ.

 A Prisoner bacha khan caught flirting with his lover in lodge at Dharwad
ಪಾತಕಿ ಬಚ್ಚಾಖಾನ್


ಲಾಡ್ಜ್​ನಲ್ಲಿ ಪಾತಕಿಗೆ ಕಾಯುತ್ತಿದ್ದ ಪ್ರೇಯಸಿ!

ಅದಾಗಲೇ ಅಲ್ಲಿ ಈತನಿಗೋಸ್ಕರ ಪ್ರೇಯಸಿ ಕಾಯುತ್ತಿದ್ದಳು. ಪಾತಕಿ ತನ್ನ ಪ್ರೇಯಸಿಯನ್ನು ಕರೆದುಕೊಂಡು ಲಾಡ್ಜ್​​ನೊಳಗೆ ಹೋಗಿದ್ದ. ಈ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಲಾಬೂರಾಮ್ ಅವರಿಗೆ ಮಾಹಿತಿಯೊಂದು ಬಂದಿತ್ತು. ಮಾಹಿತಿ ಆಧರಿಸಿ ಆಯುಕ್ತರು ದಾಳಿ ಮಾಡಿದಾಗ ಬಚ್ಚಾಖಾನ್ ಪ್ರೇಯಸಿಯೊಂದಿಗೆ ಸರಸವಾಡುವಾಗಲೇ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಎಲ್​ಎಲ್​ಬಿ ಮಾಡಲು ಸೀಟ್ ಸಿಗದ್ದಕ್ಕೆ ಯುವಕ ಸೂಸೈಡ್!

ಸರಸದಲ್ಲಿದ್ದಾಗಲೇ ಪಾತಕಿಗೆ ಶಾಕ್!

ಜೈಲಿನಿಂದಲೇ ಅನೇಕ ಸುಪಾರಿ ತೆಗೆದುಕೊಳ್ಳುವ ಬಚ್ಚಾಖಾನ್ 2020 ಅಗಸ್ಟ್ 6 ರಂದು ಧಾರವಾಡದ ಕುಖ್ಯಾತ ರೌಡಿ ಫ್ರೂಟ್​ ಇರ್ಫಾನ್​​ನನ್ನು ಹುಬ್ಬಳ್ಳಿಯಲ್ಲಿ ಹಾಡಹಗಲೇ ಕೊಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ನಡೆದಿದೆ. ಇದೀಗ ಪ್ರೇಯಸಿಯೊಂದಿಗೆ ಸರಸದಲ್ಲಿದ್ದಾಗ ಸಿಕ್ಕಿ ಬಿದ್ದಿದ್ದಾನೆ.

ಬಚ್ಚಾಖಾನ್​ನ ಲವ್ವಿಡವ್ವಿಗೆ ಖಾಕಿಯೇ ಸಾಥ್!

ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾಗಿರಿ ಠಾಣೆಗೆ ಕರೆ ತಂದಿದ್ದಾರೆ. ಇನ್ನು ಈತನನ್ನು ಬಳ್ಳಾರಿ ಜೈಲಿನಿಂದ ಐವರು ಪೊಲೀಸ್ ಸಿಬ್ಬಂದಿ ಕರೆ ತಂದಿದ್ದಾರೆ. ಇದೀಗ ಅವರ ಮೇಲೆಯೂ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದಲ್ಲದೇ ಈತನಿಗೆ ಮತ್ತೆ ಯಾರು ಸಹಾಯ ಮಾಡಿದ್ದಾರೆ ಅನ್ನೋದರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಮಧ್ಯೆ ಬಳ್ಳಾರಿ ಪೊಲೀಸರ ಬೇಜವಾಬ್ದಾರಿತನ ಹಾಗೂ ಹಣದಾಸೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಸುಬ್ಬಾರೆಡ್ಡಿ ಕೊಲೆ ಕೇಸಿನ ಆರೋಪಿ

ಬಚ್ಚಾಖಾನ್ ಹಲವಾರು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಬೆಂಗಳೂರಿನ ಬಿಲ್ಡರ್ ಸುಬ್ಬಾರೆಡ್ಡಿ ಕೊಲೆ ಕೇಸಿನಲ್ಲಿ ಎರಡನೇ ಆರೋಪಿಯಾಗಿದ್ದ ಬಚ್ಚಾಖಾನ್ ಅಪರಾಧಿ ಅಂತಾ ಸಾಬೀತಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

ಇದನ್ನೂ ಓದಿ: ವಾಟ್ಸಾಪ್​​ನಲ್ಲಿ ಬಾಸ್​ ಅಂತಾ ಸ್ಟೇಟಸ್ ಹಾಕದ್ದಕ್ಕೆ ಹೀಗಾ ಮಾಡೋದು?

ಇನ್ನು 2009ರಲ್ಲಿ ಧಾರವಾಡದ ಕೇಂದ್ರ ಕಾರಾಗೃಹದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿದಾಗ ಈತನ ಬಳಿ ಗಾಂಜಾ ಪತ್ತೆಯಾಗಿತ್ತು. ಇದೇ ವೇಳೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಈತ ಹಲ್ಲೆಯನ್ನೂ ಮಾಡಿದ್ದ. ಇದರ ವಿಚಾರಣೆ ಇನ್ನೂ ನಡೆಯುತ್ತಿದೆ. ಸದ್ಯ ಸರಸವಾಡೋವಾಗಲೇ ಖಾಕಿ ಶಾಕ್ ಕೊಟ್ಟಿದ್ದು, ಸಹಕರಿಸಿದ ಪೊಲೀಸರ ಮೇಲೂ ಕ್ರಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
Published by:Thara Kemmara
First published: