• Home
  • »
  • News
  • »
  • state
  • »
  • Tumakuru: ನಿಮಗೆ ಪೂಜೆ ಮಾಡಿಕೊಡುವುದಿಲ್ಲ, ದಲಿತ ಕುಟುಂಬವನ್ನು ದೇಗುಲದಿಂದ ಹೊರಕ್ಕೆ ಕಳುಹಿಸಿದ ಅರ್ಚಕ

Tumakuru: ನಿಮಗೆ ಪೂಜೆ ಮಾಡಿಕೊಡುವುದಿಲ್ಲ, ದಲಿತ ಕುಟುಂಬವನ್ನು ದೇಗುಲದಿಂದ ಹೊರಕ್ಕೆ ಕಳುಹಿಸಿದ ಅರ್ಚಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಲಿತ ಕುಟುಂಬ ಪೂಜೆಗೆಂದು ಮುಳಕಟ್ಟಮ್ಮ ದೇವಾಲಯಕ್ಕೆ ಬಂದಿದ್ದರು. ದೇವಾಲಯಕ್ಕೆ ಕುಟುಂಬಸ್ಥರು ಬರ್ತಿದ್ದಂತೆ ಅರ್ಚಕ ಕೋಪಗೊಂಡು ನಿಮಗೆ ಪೂಜೆ ಮಾಡಿಕೊಡಲ್ಲ, ಹಣ್ಣು ಕಾಯಿ ವಾಪಸ್ ತೆಗೆದುಕೊಂಡು ಹೋಗಿ ಎಂದು ಅವಾಜ್​ ಕೂಡ ಹಾಕಿದ್ದಾನೆ. 

  • News18 Kannada
  • Last Updated :
  • Karnataka, India
  • Share this:

ತುಮಕೂರು (ಅ.12): ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ತೊಲಗಿಲ್ಲ. ದೇಶ ಎಷ್ಟೇ ಅಭಿವೃದ್ಧಿಗೊಂಡರು ಜಾತಿ (Cast) ಎನ್ನುವ ಭೂತ ಮಾತ್ರ ಸಮಾಜವನ್ನು ಬಿಟ್ಟು ತೊಲಗಿಲ್ಲ. ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬಂದಿದ್ದ ದಲಿತ ಕುಟುಂಬವನ್ನ (Dalit Family) ಅರ್ಚಕರು (Priest) ಹೊರಗೆ ಕಳುಹಿದ ಘಟನೆ ನಡೆದಿದೆ. ಪೂಜೆ (Pooja) ಮಾಡಿಕೊಡಲಿ ನೀಡಲು ನಿರಾಕರಿಸಿದ ಅರ್ಚಕರು ಹಣ್ಣು ಕಾಯಿ ವಾಪಸ್ ತಗೊಂಡು ಹೋಗಿ ಎಂದಿದ್ದಾರೆ. 


ದಲಿತ ಕುಟುಂಬವನ್ನು ಹೊರಗೆ ಕಳ್ಸಿದ ಅರ್ಚಕ


ದಲಿತರನ್ನು ದೇವಾಲಯದ ಒಳಗೆ ಬಿಟ್ಟುಕೊಳ್ಳಲು ಅರ್ಚಕ ಒಪ್ಪಿಲ್ಲ. ಇಂತಹ ಅಮಾನವೀಯ ಘಟನೆಯೊಂದು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು, ನಿಟ್ಟೂರಿನ ಮೈಸೂರು ರಸ್ತೆಯಲ್ಲಿರುವ ಮುಳಕಟ್ಟಮ್ಮ ದೇವಾಲಯದಲ್ಲಿ ನಡೆದಿದೆ.


ಹಣ್ಣುಕಾಯಿ ತೆಗೆದುಕೊಂಡು ಹೋಗುವಂತೆ ಅವಾಜ್​


ಗುಬ್ಬಿ ತಾಲೂಕಿನ ಕಡಬ ಗ್ರಾಮದ ದಲಿತ ಕುಟುಂಬ ಪೂಜೆಗೆಂದು ಮುಳಕಟ್ಟಮ್ಮ ದೇವಾಲಯಕ್ಕೆ ಬಂದಿದ್ದರು. ದೇವಾಲಯಕ್ಕೆ ಕುಟುಂಬಸ್ಥರು ಬರ್ತಿದ್ದಂತೆ ಅರ್ಚಕ ಕೋಪಗೊಂಡು ತಡೆದು ನಿಲ್ಲಿಸಿದ್ದಾನೆ. ಅಷ್ಟೇ ಅಲ್ಲದೇ ನಿಮಗೆ ಪೂಜೆ ಮಾಡಿಕೊಡಲ್ಲ, ಹಣ್ಣು ಕಾಯಿ ವಾಪಸ್ ತೆಗೆದುಕೊಂಡು ಹೋಗಿ ಎಂದು ಅವಾಜ್​ ಕೂಡ ಹಾಕಿದ್ದಾನೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ದಲಿತರನ್ನು ಕೂಡಿ ಹಾಕಿ ಚಿತ್ರಹಿಂಸೆ 


ಚಿಕ್ಕಮಗಳೂರು ತಾಲೂಕಿನ ಹುಣಸೆಹಳ್ಳಿಪುರದ ಕಾಫಿ ಎಸ್ಟೇಟ್‌ನಲ್ಲಿ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 10 ಕ್ಕೂ ಹೆಚ್ಚು ಮಂದಿಯನ್ನು ಎಸ್ಟೇಟ್‌ ಮಾಲೀಕ ಕೂಡಿ ಹಾಕಿ ಚಿತ್ರಹಿಂಸೆ ನೀಡಿ, ಹಲ್ಲೆ ನಡೆಸಿದ್ದಾಗಿ ಪೊಲೀಸ್‌ ದೂರು ದಾಖಲಾಗಿದೆ


ಈ ಕಾರ್ಮಿಕರ ಪೈಕಿ ಬಹುತೇಕರು ಮಹಿಳೆಯರು. ಅವರನ್ನು ಹಿಂಸಿಸಿ ಸೆರೆಯಲ್ಲಿಟ್ಟ ಆರೋಪದ ಮೇಲೆ ಕಾಫಿ ಎಸ್ಟೇಟ್ ಮಾಲೀಕರು ಮತ್ತು ಅವರ ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕಾಫಿ ಬೆಳೆಯುವ ಜಿಲ್ಲೆಯ ಹುಣಸೆಹಳ್ಳಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಜಗದೀಶಗೌಡ ಮತ್ತು ಆತನ ಪುತ್ರ ತಿಲಕ್ ಎಂದು ಗುರುತಿಸಲಾಗಿದೆ.


ಓರ್ವ ಮಹಿಳೆಗೆ ಗರ್ಭಪಾತ


ಎಲ್ಲಾ ಕಾರ್ಮಿಕರು ಆರೋಪಿಯ ಒಂದೇ ಹಳ್ಳಿಗೆ ಸೇರಿದವರು. ಚಿತ್ರಹಿಂಸೆಯ ಪ್ರಮಾಣ ಎಷ್ಟಿತ್ತೆಂದರೆ, ಕಾರ್ಮಿಕರಲ್ಲಿ ಒಬ್ಬ ಗರ್ಭಿಣಿ ಮಹಿಳೆಗೆ ರಕ್ತಸ್ರಾವ ಪ್ರಾರಂಭವಾಯಿತು. ಆಕೆ ತನ್ನ ಮಗುವನ್ನು ಕಳೆದುಕೊಂಡಿದ್ದಾರೆ.


ಇದನ್ನೂ ಓದಿ: Pratap Simha: ಉದ್ದೇಶಪೂರ್ವಕವಾಗಿ ಟಿಪ್ಪು ಹೆಸರನ್ನು ತೆಗೆಸಿದ್ದೇನೆ- ಸಂಸದ ಪ್ರತಾಪ್ ಸಿಂಹ


ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ತಂದೆ-ಮಗ ಇಬ್ಬರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಅವರು ತಮ್ಮ ಸಿಬ್ಬಂದಿ ಕ್ವಾರ್ಟರ್ಸ್‌ಗಳಲ್ಲಿ ಹಲವಾರು ಕಾರ್ಮಿಕರನ್ನು, ಹೆಚ್ಚಾಗಿ ಮಹಿಳೆಯರನ್ನು ಬಲವಂತವಾಗಿ ಲಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಂದೆ ಮತ್ತು ಮಗ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.


ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಬಾಲಕನಿಗೆ ದಂಡ


ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ, ಇದಕ್ಕೆ ಉದಾಹರಣೆ ಕೊಪ್ಪಳ ಜಿಲ್ಲೆಯಲ್ಲಿ ಆಡುವ ಮಗುವೊಂದು (Child entereed temple) ದೇವಸ್ಥಾನಕ್ಕೆ ಹೋಗಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದಿಕರಿಸಿ ಅಸ್ಫಶ್ಯತೆ ಆಚರಿಸಿದ್ದರು.ದೇವಸ್ಥಾನಕ್ಕೆ ದಲಿತ ಮಗು ಪ್ರವೇಶಿದ್ದಕ್ಕೆ ಶುದ್ದಿಕರಣ, ದಂಡ ವಿಧಿಸಿದ ಪ್ರಕರಣದ ನಂತರ , ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದರು, ಅಸ್ಪೃಶ್ಯತೆ ಆಚರಣೆ ಕೈ ಬಿಡಲು ಸೂಚನೆ ನೀಡಿದರು, ತಪ್ಪು ಕಲ್ಪನೆಯಿಂದ ಆಗಿರುವ ಘಟನೆ ಸೌಹಾರ್ದಯುತವಾಗಿ ಇರುತ್ತವೆ ಎಂದ ಗ್ರಾಮಸ್ಥರು ಹೇಳಿದ್ದಾರೆ.


ಇದನ್ನೂ ಓದಿ: ದಲಿತ ವ್ಯಕ್ತಿ ಬೈಕ್‌ ಮುಟ್ಟಿದಕ್ಕೆ ಅರೆಬೆತ್ತಲೆಗೊಳಿಸಿ ಹಲ್ಲೆ; ವಿಜಯಪುರದಲ್ಲೊಂದು ಅಮಾನವೀಯ ಘಟನೆ


11 ಸಾವಿರ ರೂಪಾಯಿ ದಂಡ


ಕುಷ್ಟಗಿ ತಾಲೂಕಿನ ಮಿಯಾಪುರದಲ್ಲಿ ಈ  ಘಟನೆ ನಡೆದಿದೆ. ಸೆ 4 ರಂದು ಚನ್ನದಾಸರ ಸಮುದಾಯದ ಮಗುವೊಂದು ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು. ಅಂದು ಮಗುವಿನ 4ನೇ ವರ್ಷದ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಆಂಜನೇಯ ನಮಿಸಲು ಹೋಗಿತ್ತು, ದಲಿತರು ಗುಡಿ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ದೇವಸ್ಥಾನವನ್ನು ಶುದ್ಧೀಕರಿಸಿದ್ದರು. 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಸೆ 11 ರಂದು ಗ್ರಾಮದ ಸವರ್ಣಿಯರು ಸಭೆ ನಡೆಸಿ ದಂಡ ವಿಧಿಸಿದ್ದರು, ಇದಕ್ಕೆ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು.


Published by:ಪಾವನ ಎಚ್ ಎಸ್
First published: