Goa- Karnataka: ಗೋವಾ-ಕರ್ನಾಟಕಗೂ ನಂಟು ಇರುವ ಕೋಟಿ ತೀರ್ಥ ಕಲ್ಯಾಣಿಯ ವಿಶೇಷತೆ ಬಗ್ಗೆ ಗೊತ್ತೇ?

ಗೋವಾ ಮೂಲದ ಇತಿಹಾಸಕಾರರಾಗಿರುವ ರೋಹಿತ್ ಫಲ್ಗಾಂವಕರ್ ಹೇಳುತ್ತಾರೆ ದೀವಾರ್ ದ್ವೀಪದಲ್ಲಿ ಎರಡು ಪ್ರಮುಖ ದೇವಾಲಯಗಳಿದ್ದವು, ಒಂದು ಸಪ್ತಕೋಟೀಶ್ವರ ದೇವಾಲಯವಾಗಿದ್ದರೆ ಇನ್ನೊಂದು ಗಣಪತಿಯ ದೇವಾಲಯ.

ಕೋಟಿ ತೀರ್ಥ ತಾಲಿ

ಕೋಟಿ ತೀರ್ಥ ತಾಲಿ

  • Share this:
ಇಂದು ನಾವು ಭಾರತದಲ್ಲಿ ರಾಜ್ಯಗಳು ಉದಯವಾಗಿ ಎಲ್ಲವೂ ಅಖಂಡ ಭಾರತದಲ್ಲಿ(India) ಒಂದಾಗಿರುವುದನ್ನು ಕಾಣಬಹುದು. ಆದರೆ ಪುರಾತನ ಕಾಲದಲ್ಲಿ(Ancient times) ಸಾಮ್ರಾಜ್ಯಗಳ (Empires) ಸಮಯವಾಗಿತ್ತು ಹಾಗೂ ಆ ಸಾಮ್ರಾಜ್ಯಗಳು (kingdoms )ಭೌತಿಕವಾಗಿ ಎಲ್ಲೆಲ್ಲಿಯೋ ಹರಡಿತ್ತು. ಈಗಲೂ ಕೆಲವು ರಾಜ್ಯಗಳಿಗೆ ಸಂಬಂಧಿಸಿದಂತಹ ಕೆಲವು ವಿಷಯಗಳು ಬೇರೊಂದು ರಾಜ್ಯದಲ್ಲಿ ಕಾಣಬಹುದಾಗಿದೆ. ಅಂತಹ ಹಲವಾರು ಉದಾಹರಣಗಳಿದ್ದು ಅದರಲ್ಲೊಂದಾಗಿದೆ ಕೋಟಿ ತೀರ್ಥ ತಾಲಿ ಅಥವಾ ಪೊರ್ನೆ(Porne Theertha) ತೀರ್ಥ.

ಇತಿಹಾಸದ ಗತ ವೈಭವಕ್ಕೆ ಸಾಕ್ಷಿ
ಇಂದು ಗೋವಾ ರಾಜ್ಯದಲ್ಲಿ ಬರುವ ದಿವಾರ್ ದ್ವೀಪದಲ್ಲಿ ಸ್ಥಿತವಿರುವ ಈ ತೀರ್ಥವು ಕರ್ನಾಟಕದೊಂದಿಗೆ ಗೋವಾಗಿರುವ ನಂಟನ್ನು ತೋರಿಸುತ್ತದೆ ಎಂದರೆ ತಪ್ಪಾಗಲಾರದು. 108 ಕೆತನೆಗಳುಳ್ಳ ಮೆಟ್ಟಿಲುಗಳ ಶಿಲ್ಪಕಲೆಯನ್ನು ಹೊತ್ತಿರುವ ಈ ಕೋಟಿ ತೀರ್ಥ ತಾಲಿಯು ಕಳೆದ ಇತಿಹಾಸದ ಗತ ವೈಭವಕ್ಕೆ ಸಾಕ್ಷಿಯಾಗಿ ಇಂದಿಗೂ ಸದೃಢವಾಗಿ ನಿಂತಿದೆ. ಇತಿಹಾಸಕಾರರು ಹೇಳುವಂತೆ ಈ ಕಲ್ಯಾಣಿಯು 10-14 ನೇ ಶತಮಾನದಲ್ಲಿ ಇಲ್ಲಿ ಆಡಳಿತ ನಡೆಸುತ್ತಿದ್ದ ಕದಂಬರ ಮನೆದೇವತೆಯಾದ ಸಪ್ತಕೋಟಿಶ್ವರ ದೇವಾಲಯಕ್ಕೆ ಸಂಬಂಧಿಸಿದ ಕಲ್ಯಾಣಿ ಇದಾಗಿದೆ ಎಂದು. ಒಂದೊಮ್ಮೆ ಕಲ್ಯಾಣಿಯ ಪಕ್ಕದಲ್ಲೇ ಇದ್ದ ದೇವಾಲಯವು ಇಂದು ನಾಶವಾಗಿ ಹೋಗಿದೆ.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಹುತಾತ್ಮನಾದ ವ್ಯಕ್ತಿಗೆ ಭಾರತದ ಮೊದಲ ಸಂತ ಪದವಿ ಸಿಗುತ್ತಿರುವುದೇಕೆ?

ಕದಂಬರ ಉಪಸ್ಥಿತಿ
ಈ ಕಲ್ಯಾಣಿಯು ಹಿಂದೊಮ್ಮೆ ಗೋವಾದಲ್ಲಿ ಕದಂಬರ ಉಪಸ್ಥಿತಿ ಇದ್ದಿತೆಂಬ ವಾದಕ್ಕೆ ಬಲವಾದ ಸಾಕ್ಷಿಯಾಗಿ ನಿಲ್ಲುತ್ತದೆ. ಗೋವಾ ಮೂಲದ ಇತಿಹಾಸಕಾರರಾಗಿರುವ ರೋಹಿತ್ ಫಲ್ಗಾಂವಕರ್ ಹೇಳುತ್ತಾರೆ ದೀವಾರ್ ದ್ವೀಪದಲ್ಲಿ ಎರಡು ಪ್ರಮುಖ ದೇವಾಲಯಗಳಿದ್ದವು, ಒಂದು ಸಪ್ತಕೋಟೀಶ್ವರ ದೇವಾಲಯವಾಗಿದ್ದರೆ ಇನ್ನೊಂದು ಗಣಪತಿಯ ದೇವಾಲಯ. ಬಹಮನಿ ಸುಲ್ತಾನನಾದ ಅಲ್ಲಾವುದ್ದೀನ್ ಹಸನ್ ಆಡಳಿತ ಕಾಲದಲ್ಲಿ ಸಪ್ತಕೋಟೀಶ್ವರ ದೇವಾಲಯವನ್ನು ನಾಶಪಡಿಸಲಾಯಿತು. ತದನಂತರ ವಿಜಯನಗರ ಸಾಮ್ರಾಜ್ಯದಲ್ಲಿ ಮಂತ್ರಿಯಾಗಿದ್ದ ಮಾಧವ ಮಂತ್ರಿಯವರಿಂದ ಕ್ರಿ.ಶ. 1391 ರಲ್ಲಿ ಮತ್ತೆ ಈ ದೇವಾಲಯವನ್ನು ಮರು ನಿರ್ಮಿಸಲಾಯಿತು. ಈ ವಿಷಯವನ್ನು ವಿಜಯನಗರದಲ್ಲಿ ದೊರಕಿರುವ ತಾಮ್ರ ಪತ್ರಗಳಲ್ಲಿ ಉಲ್ಲೇಖಿಸಲಾಗಿರುವುದಾಗಿ ರೋಹಿತ್ ಹೇಳುತ್ತಾರೆ.

ಪೊರ್ಚುಗೀಸರಿಂದ ನಾಶ
ಆದರೆ, ಕ್ರಿ.ಶ. 1540 ರಲ್ಲಿ ಇಲ್ಲಿಗೆ ವ್ಯಾಪಾರಕ್ಕೆಂದು ಬಂದಿದ್ದ ಪೊರ್ಚುಗೀಸರು ಈ ದೇವಾಲಯವನ್ನು ಮತ್ತೆ ಸಂಪೂರ್ಣವಾಗಿ ನಾಶ ಮಾಡಿದರು. 1558 ರಲ್ಲಿ ಈ ದೇವಾಲಯದ ಮೂಲ ಸಪ್ತಕೋಟೀಶ್ವರನ ವಿಗ್ರಹವನ್ನು ಬಿಚೋಲಿಮ್ ಗೆ ಸ್ಥಳಾಂತರಿಸಲಾಯಿತು ಹಾಗೂ 1668 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಲ್ಲಿ ಸಪ್ತಕೋಟೀಶ್ವರನ ದೇವಾಲಯ ನಿರ್ಮಾಣ ಮಾಡಿದರು. ಆದರೆ ಇಲ್ಲಿರುವ ಆ ಕಲ್ಯಾಣಿಯು ಹಾಗೆಯೆ ಉಳಿದುಕೊಂಡು ಬಂದಿದೆ. ಏಕೆಂದರೆ ಇದು ಕುಡಿಯುವ ನೀರಿನ ಮೂಲವಾಗಿತ್ತು. ಈಗ ಈ ಕಲ್ಯಾಣಿಯ ಕೆಲ ಭಾಗಗಳು ಶಿಥಿಲಗೊಂಡಿರುವುದನ್ನು ಕಾಣಬಹುದಾಗಿದೆ. ಆದರೂ ಅಸಮಂಜಸವಾದ ಆಕೃತಿಯಲ್ಲಿರುವ ಈ ಕಲ್ಯಾಣಿಯು ಸದಾ ನೀರಿನಿಂದ ತುಂಬಿದ್ದು ನೋಡಲು ಸುಂದರವಾಗಿದೆ. 2015 ರಿಂದ ಸ್ಥಳೀಯರು ಇಲ್ಲಿ 108 ದೀಪಗಳನ್ನು ಬೆಳಗಿ ಸರಸ್ವತಿ ವಿಸರ್ಜನವನ್ನು ಆಚರಿಸುತ್ತ ಬಂದಿದ್ದಾರೆ.

ಖಾಂಡೇಪರ್ ಗೆ ಸ್ಥಳಾಂತರ
ಇನ್ನು, ಗಣಪತಿ ದೇವಾಲಯದ ವಿಚಾರಕ್ಕೆ ಬಂದರೆ ಆ ದೇವಾಲಯವು, ಸಾವೋ ಮಥಿಯಾಸ್ ಗುಡ್ಡದ ಬಳಿಯಿರುವ ಚರ್ಚ್ ಆಫ್ ಅವರ್ ಲೇಡಿ ಆಫ್ ಪಿಟಿ ಬಳಿ ಸ್ಥಿತವಿದೆ. ಈ ದೇವಾಲಯದ ಕೆತ್ತನೆಗಳು ಕದಂಬ ವಾಸ್ತುಶೈಲಿಯನ್ನೇ ಹೋಲುತ್ತದೆ.

ಇದನ್ನೂ ಓದಿ: FireCrackers Ban: ಪಟಾಕಿ ನಿಷೇಧಕ್ಕೆ 350 ವರ್ಷಗಳ ಇತಿಹಾಸ: ಮೊಘಲ್​ ದೊರೆ ಔರಂಗಜೇಬನೇ ಮೊದಲಿಗ!

ಇಲ್ಲಿಯೂ ಮೂಲ ವಿಗ್ರಹದ ಸ್ಥಳಾಂತರ ಮಾಡುವ ಸಂದರ್ಭ ಬಂದಾಗ ಮೊದಲಿಗೆ ಅದನ್ನು ಪೋಂಡಾ ತಾಲ್ಲೂಕಿನ ಖಾಂಡೇಪರ್ ಗೆ ಸ್ಥಳಾಂತರಿಸಲಾಯಿತು. ನಂತರ ಮತ್ತೆ ಅದನ್ನು ಖಂಡೋಲಾ ಹಳ್ಳೀಗೆ ತರಲಾಯಿತು ಎನ್ನಲಾಗುತ್ತದೆ. ಈ ದಿವಾರ್ ದ್ವೀಪವು ಮೂರು ಹಳ್ಳಿಗಳಿಂದ ಕೂಡಿದೆ ಹಾಗೂ ಅವುಗಳೆಂದರೆ ಪಿಯ್ಡೇಡ್, ಮಲಾರ್ ಮತ್ತು ನರೋವಾ. ನರೋವಾದಲ್ಲಿ ಸಾವೋ ಮಥಿಯಾಸ್ ಹಾಗೂ ಕೋಟಿ ತೀರ್ಥವಿದೆ. ಒಟ್ಟಾರೆಯಾಗಿ ಗೋವಾದಲ್ಲಿಯೂ ಸಹ ಕರ್ನಾಟಕದಲ್ಲಿ ಆಡಳಿತ ನಡೇಸುತ್ತಿದ್ದ ಕದಂಬರ ನಂಟು ಇರುವುದನ್ನು ಇಲ್ಲಿ ಕಾಣಬಹುದಾಗಿದೆ.
Published by:vanithasanjevani vanithasanjevani
First published: