ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚಿ ಪೊಲೀಸರ ಸ್ನೇಹಿಯಾಗಿದ್ದ ಬೆಳಗಾವಿ ಶ್ವಾನ ಸಾವು

ಸಕಲ ಸರ್ಕಾರಿ ಗೌರವದೊಂದಿಗೆ ನಗರ ಪೊಲೀಸ್​ ಆಯುಕ್ತ ಬಿ.ಎಸ್​.ಲೋಕೇಶ್​ ಕುಮಾರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 

Latha CG | news18
Updated:August 24, 2019, 4:44 PM IST
ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚಿ ಪೊಲೀಸರ ಸ್ನೇಹಿಯಾಗಿದ್ದ ಬೆಳಗಾವಿ ಶ್ವಾನ ಸಾವು
ಮೃತಪಟ್ಟ ಪೊಲೀಸ್​ ಶ್ವಾನ ನಯನಾ
  • News18
  • Last Updated: August 24, 2019, 4:44 PM IST
  • Share this:
ಬೆಳಗಾವಿ(ಆ.24): ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶ್ವಾನ ಅನಾರೋಗ್ಯದಿಂದ ಇಂದು ಸಾವನ್ನಪ್ಪಿದೆ.

ನಯನಾ ಮೃತಪಟ್ಟ ಪೊಲೀಸ್​ ಇಲಾಖೆಯ ಶ್ವಾನ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಶ್ವಾನ ಮೃತಪಟ್ಟಿದೆ.

ಸಕಲ ಸರ್ಕಾರಿ ಗೌರವದೊಂದಿಗೆ ನಗರ ಪೊಲೀಸ್​ ಆಯುಕ್ತ ಬಿ.ಎಸ್​.ಲೋಕೇಶ್​ ಕುಮಾರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಎಂದು ಹೇಳಿಕೊಂಡು ಮಂಗಳೂರಿಗೆ ಬಂದಿದ್ದ ಕಾಶ್ಮೀರಿ ವ್ಯಕ್ತಿ ಸೇರಿ ಇಬ್ಬರ ಬಂಧನ

ಪೋಲಿಸ್ ಇಲಾಖೆಯ ಶ್ವಾನ ನಯನಾ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ವರ್ಷಗಳ ಕಾಲ ಪೊಲೀಸರಿಗೆ ಸ್ನೇಹಿಯಾಗಿ ಕೆಲಸ ನಿರ್ವಹಿಸಿತ್ತು. 8 ವರ್ಷಗಳಲ್ಲಿ 4 ವರ್ಷ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸ್ಪೋಟಕ ವಸ್ತುಗಳನ್ನು ಪತ್ತೆ ಮಾಡಿತ್ತು.

ಹಿಂದಿನ ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ ಅವರ ಅವಧಿಯಲ್ಲಿ ನಯನಾಗೆ ವಯಸ್ಸಾದ ಹಿನ್ನೆಲೆ ಅದಕ್ಕೆ ನಿವೃತ್ತಿ ನೀಡಿದ್ದರು. ಶ್ವಾನ ನಯನಾ ಪೊಲೀಸ್ ಆಯುಕ್ತರ ಕ್ವಾರ್ಟರ್ಸ್ ನಿವಾಸದಲ್ಲೇ ಆಶ್ರಯ ಪಡೆಯುತ್ತಿತ್ತು.(ವರದಿ: ಚಂದ್ರಕಾಂತ್​ ಸುಗಂಧಿ)
First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading