Fraud Case: ಮಣಿಪುರದಿಂದ ಬಂದು ಕನ್ನಡಿಗರಿಗೆ ಮೋಸ, ಸಿಎಂ ಬೊಮ್ಮಾಯಿ ಹೆಸರು ಹೇಳಿ ಮಹಾ ವಂಚನೆ!

ಇಲ್ಲೊಬ್ಬ ಭೂಪ ಇವ್ರೆಲ್ಲರಿಗಿಂತ ಒಂದು ಹೆಜ್ಜೆ ಮುಂದೇನೆ ಹೋಗಿದ್ದಾನೆ. ನನಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತುಂಬಾ ಚೆನ್ನಾಗಿ ಗೊತ್ತು, ನಾನು ಸಿಎಂ ಅವರ ಪ್ರಧಾನ ಕಾರ್ಯದರ್ಶಿ (Principal Secretary) ಅಂತ ಜನರನ್ನು ನಂಬಿಸಿದ. ಅವರಿಗೆ ವಿವಿಧ ಕೆಲಸ ಮಾಡಿಕೊಡುವ ಆಮಿಷವೊಡ್ಡಿ ವಂಚಿಸಿದ್ದಾನೆ.

ಬಂಧಿತ ವಂಚಕ

ಬಂಧಿತ ವಂಚಕ

  • Share this:
ಬೆಂಗಳೂರು: ನಂಗೆ ಅವರು ಗೊತ್ತು, ಇವರು ಚೆನ್ನಾಗಿ ಗೊತ್ತು. ಆ ಅಧಿಕಾರಿಯಂತೂ (Officer) ನಾನು ಫೋನ್ (Phone) ಮಾಡಿದ್ರೆ ಕೆಲ್ಸ ಮಾಡಿ ಕೊಡ್ತಾನೆ. ಈ ಅಧಿಕಾರಿ ನಾ ಮಿಸ್ ಕಾಲ್ (Missed Call) ಕೊಟ್ರೆ ನಾನ್ ಹೇಳಿದ ಕೆಲ್ಸ ಮಾಡ್ತಾನೆ.. ಹೀಗಂತ ಅನೇಕರು ಬಿಲ್ಡಪ್ (Build Up) ಕೊಡ್ತಾನೇ ಇರ್ತಾನೆ. ಈ ಕೆಲ್ಸ ಮಾಡಿಕೊಡ್ತೀನಿ, ಈ ಕೆಲ್ಸ ಮಾಡಿಸಿ ಕೊಡ್ತೀನಿ ಅಂತ ಜನರಿಂದ ಹಣ (Money) ಪೀಕಿ, ಟಾಟಾ ಬಾಯ್ ಬಾಯ್ (Tata By By) ಮಾಡ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಇವ್ರೆಲ್ಲರಿಗಿಂತ ಒಂದು ಹೆಜ್ಜೆ ಮುಂದೇನೆ ಹೋಗಿದ್ದಾನೆ. ನನಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತುಂಬಾ ಚೆನ್ನಾಗಿ ಗೊತ್ತು, ನಾನು ಸಿಎಂ ಅವರ ಪ್ರಧಾನ ಕಾರ್ಯದರ್ಶಿ (Principal Secretary) ಅಂತ ಜನರನ್ನು ನಂಬಿಸಿದ. ಅವರಿಗೆ ವಿವಿಧ ಕೆಲಸ ಮಾಡಿಕೊಡುವ ಆಮಿಷವೊಡ್ಡಿ ವಂಚಿಸಿದ್ದಾನೆ.

ಬೆಂಗಳೂರಲ್ಲಿ ಬಲೆಗೆ ಬಿದ್ದ ಮಣಿಪುರ ವಂಚಕ

ಬೆಂಗಳೂರಲ್ಲಿ ಖತರ್‌ನಾಕ್ ವಂಚಕ  ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಣಿಪುರ ಮೂಲದ ವಾಹೆಂಗಬಮ್ ಲಲಿತ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಕನ್ನಡ ಬಾರದಿದ್ದರೂ ಕನ್ನಡಿಗರಿಗೆ ಪಂಗನಾಮ ಹಾಕಿದ್ದಾನೆ.

ಸಿಎಂ ಬಸವರಾಜ ಬೊಮ್ಮಾಯಿ ಹೆಸರು ಹೇಳಿಕೊಂಡು ವಂಚನೆ

ಬಸವರಾಜ್ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹೆಸರು ಹೇಳಿಕೊಂಡು ಈ ವಾಹೆಂಗಬಮ್ ಲಲಿತ್ ಸಿಂಗ್ ಮೋಸ ಮಾಡಿದ್ದಾನೆ.

ಇದನ್ನೂ ಓದಿ: Congress Protest: ಸೋನಿಯಾಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಹೋರಾಟ, ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಆಕ್ರೋಶ

ಬರಿಗೈನಲ್ಲಿ ಬೆಂಗಳೂರಿಗೆ ಬಂದವನು ಈಗ ಕೋಟಿ ಕೋಟಿ ಒಡೆಯ

ಈ ವಾಹೆಂಗಬಮ್ ಲಲಿತ್ ಸಿಂಗ್ ಮೊದಲು ಮಣಿಪುರದಿಂದ ಬರಿಗೈಲಿ ಬೆಂಗಳೂರಿಗೆ ಬಂದವನು. ಆದರೆ ಈಗ ಕೋಟಿ ಕೋಟಿ ರೂಪಾಯಿ ಆಸ್ತಿಯ ಒಡೆಯ. ವಂಚನೆಯನ್ನೇ ವೃತ್ತಿ ಆಗಿಸಿಕೊಂಡವನು ಈಗ ಕೋಟ್ಯಾಧೀಶನಾಗಿದ್ದಾನೆ.

ಒಂದೇ ಪ್ಲ್ಯಾಟ್‌ ಹಲವರಿಗೆ ಮಾರಾಟ ಮಾಡಿ ವಂಚನೆ

ಈತ ಫ್ಲ್ಯಾಟ್ ಮಾರಾಟದಲ್ಲಿ ಕನ್ನಡಿಗರಿಗೆ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಒಂದೇ ಪ್ಲ್ಯಾಟ್ ಹಲವರಿಗೆ ಮಾರಾಟ ಮಾಡಿ ವಂಚನೆ ಮಾಡ್ತಿದ್ದ. ಪ್ಲ್ಯಾಟ್ ಮಾರಾಟ ಮಾಡುವದಾಗಿ ಹೇಳಿ ಕೋಟಿ ಕೋಟಿ ಪಡೆದು ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದ. ಈ ಖದೀಮ ವ್ಯವಹಾರದ ವೇಳೆ ಚೆಕ್ ಬೇಡ ಹಣ ಕೊಡಿ. ನಾನು ಎಲ್ಲರಿಗೂ ಲಂಚ ಕೊಡಬೇಕು. ಲಂಚ ಕೊಡಲು ಚೆಕ್ ನಡಿಯಲ್ಲ ಹಣವೇ ಬೇಕು ಎನ್ನುತ್ತಿದ್ದ.

ಸಿಎಂಗೆ ಲಂಚ ಕೊಡಬೇಕು ಎನ್ನುತ್ತಿದ್ದನಂತೆ ಖದೀಮ

ಬ್ಲ್ಯಾಕ್ ಮನಿ ಮೂಲಕ ವ್ಯವಹಾರ ನಡೆಸುತ್ತಿದ್ದ ಈ ಚಾಲಾಕಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಂಜುನಾಥ್ ಪ್ರಸಾದ್‌ಗೆ ಲಂಚ ನೀಡಬೇಕು ಅಂತ ಹೇಳುತ್ತಿದ್ದ.

ಜಯನಗರ ಪೊಲೀಸರಿಂದ ವಂಚಕ ಲಲಿತ್ ಸಿಂಗ್ ಬಂಧನ

ಬೊಮ್ಮಾಯಿ, ಮಂಜುನಾಥ್ ಪ್ರಸಾದ್‌ಗೆ ಲಂಚ ನೀಡಬೇಕು ಅಂತ ಹೇಳುತ್ತಿದ್ದನಂತೆ. ವಕೀಲ ಎಂ.ಸಿ. ನಾಣಯ್ಯ ಮೂಲಕ ಸಿಎಂ ಹಾಗೂ ಸಿಎಂ ಪ್ರ.ಕಾರ್ಯದರ್ಶಿಗೆ ಲಂಚ ಕೊಡುತ್ತೀನಿ ಅಂತ ಹೇಳಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Terrorists in Bengaluru: ಶಂಕಿತ ಉಗ್ರನ ಸಂಪರ್ಕದಲ್ಲಿದ್ದವರಿಗೆ ಶಾಕ್! ಸಿಸಿಬಿಯಿಂದ ನಾಲ್ವರ ವಿಚಾರಣೆ

ಕೊನೆಗೂ ಪೊಲೀಸರ ಬಲೆಗೆ ಬಿದ್ದ ಲಲಿತ್ ಸಿಂಗ್

ಹೀಗೆ ದೊಡ್ಡವರ ಹೆಸರು ಹೇಳಿ ಅಮಾಯಕರಿಗೆ ಮಹಾಮೋಸ ಮಾಡಿದ್ದಾನೆ. ಲಕ್ಷ ಲಕ್ಷ ಹಣ ಪೀಕಿ, ಕೋಟ್ಯಾಧೀಶನಾಗಿದ್ದಾನೆ. ಹೀಗೆ ನೂರಾರು ಜನರಿಗೆ ವಂಚಿಸಿದ್ದ ಲಲಿತ್ ಸಿಂಗ್ ಕೊನೆಗೂ ಅಂದರ್ ಆಗಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು, ಇದೀಗ ವಿವಿಧ ಆಯಾಮಗಳಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ.
Published by:Annappa Achari
First published: