• Home
  • »
  • News
  • »
  • state
  • »
  • Naked Man: ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! ಈ ಯುವಕನ ಬಗ್ಗೆ ಹುಷಾರ್ ಹುಷಾರ್

Naked Man: ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! ಈ ಯುವಕನ ಬಗ್ಗೆ ಹುಷಾರ್ ಹುಷಾರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಗ್ರಾಮದಲ್ಲಿ ರಾತ್ರಿಯಾದ್ರೆ ಸಾಕು ಯುವಕನೋರ್ವ ಟಾರ್ಚ್ ಹಿಡಿದು ಯುವಕನೊಬ್ಬ ಬರ್ತಾನೆ. ಹಾಗೆ ಸುಮ್ಮನೆ ಬಂದರೆ ಪರ್ವಾಗಿರಲಿಲ್ಲ. ಆದ್ರೆ ಆತ ಮೈಮೇಲೆ ಎಳೆ ನೂಲೂ ಇಲ್ಲದಂತೆ ಬೆತ್ತಲಾಗಿ ಬರುತ್ತಾನೆ. ಅದೇ ಅವತಾರದಲ್ಲಿ ಗ್ರಾಮದ ಬೀದಿ ಬೀದಿ ಸುತ್ತುತ್ತಾನಂತೆ!

  • News18 Kannada
  • Last Updated :
  • Bangalore [Bangalore], India
  • Share this:

ದೇವನಹಳ್ಳಿ, ಬೆಂಗಳೂರು ಗ್ರಾಮಂತರ: ಈ ಗ್ರಾಮದಲ್ಲಿ (Village) ಸುಮಾರು ದಿನಗಳಿಂದ ಗ್ರಾಮಸ್ಥರೆಲ್ಲ (Villagers) ಭಯಗೊಂಡಿದ್ದರು. ರಾತ್ರಿಯಾದ್ರೆ ಸಾಕು ಆ ಗ್ರಾಮದಲ್ಲಿ ವಿಚಿತ್ರ ಆತಂಕ, ಭಯ ಆವರಿಸಿಕೊಳ್ಳುತ್ತಿತ್ತು. ಯಾಕೆಂದ್ರೆ ರಾತ್ರಿಯಾಗಿ, ಎಲ್ಲರೂ ಮನೆ ಸೇರಿದ ಮೇಲೆ ಆ ಒಬ್ಬ ವ್ಯಕ್ತಿ (Unknown Person) ಬರ್ತಿದ್ದ. ಹಾಗೆ ಆತ ಸಾದಾ ಸೀದ ಬರ್ತಾ ಇರಲಿಲ್ಲ. ಮೈಮೇಲೆ ಒಂದೇ ಒಂದು ಬಟ್ಟೆಯ ನೂಲೂ ಇಲ್ಲದಂತೆ ಬೆತ್ತಲೆಯಾಗಿ (Naked) ಬರುತ್ತಿದ್ದ. ಹಾಗೆ ಬಂದವ ಸುಮ್ಮನೆ ಇರುತ್ತಿರಲಿಲ್ಲ, ಮನೆಯ ಕಿಟಕಿಯಲ್ಲಿ ಒಳಗೆ ಬಗ್ಗಿ ನೋಡ್ತಿದ್ದ. ಸಾಲದ್ದಕ್ಕೆ ಮನೆ ಮುಂದೆ ಒಣಗಿಸಿದ್ದ ಬಟ್ಟೆಗಳನ್ನ (Cloths) ಕದ್ದುಕೊಂಡು ಓಡುತ್ತಿದ್ದ. ಹಾಗಿದ್ರೆ ಆತ ಯಾರು? ಆತ ಬೆತ್ತಲೆಯಾಗಿ ಬರುವುದು ಏಕೆ? ಮನೆಯಲ್ಲಿ ಬಗ್ಗಿ ನೋಡುವುದು ಏಕೆ? ಕೊನೆಗೆ ಏನಾಯ್ತು? ಅಷ್ಟಕ್ಕೂ ಬೆತ್ತಲೆ ಮನುಷ್ಯನ ಕಾಟದಿಂದ ತತ್ತಿರಿಸಿದ ಆ ಗ್ರಾಮ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕಾರಿ ಉತ್ತರ…


ರಾತ್ರಿ ಬೆತ್ತಲೆಯಾಗಿ ಗ್ರಾಮಕ್ಕೆ ಬರುವ ಬೆತ್ತಲೆ ಮನುಷ್ಯ!


ಈ ಗ್ರಾಮದಲ್ಲಿ ರಾತ್ರಿಯಾದ್ರೆ ಸಾಕು ಯುವಕನೋರ್ವ ಟಾರ್ಚ್ ಹಿಡಿದು ಯುವಕನೊಬ್ಬ ಬರ್ತಾನೆ. ಹಾಗೆ ಸುಮ್ಮನೆ ಬಂದರೆ ಪರ್ವಾಗಿರಲಿಲ್ಲ. ಆದ್ರೆ ಆತ ಮೈಮೇಲೆ ಎಳೆ ನೂಲೂ ಇಲ್ಲದಂತೆ ಬೆತ್ತಲಾಗಿ ಬರುತ್ತಾನೆ. ಅದೇ ಅವತಾರದಲ್ಲಿ ಗ್ರಾಮದ ಬೀದಿ ಬೀದಿ ಸುತ್ತುತ್ತಾನಂತೆ!


ಮನೆ ಮನೆಯ ಕಿಟಕಿಯಲ್ಲಿ ಬಗ್ಗಿ ನೋಡುವ ವಿಚಿತ್ರ ವ್ಯಕ್ತಿ


ಇನ್ನು ಈ ಬೆತ್ತಲೆ ಯುವಕ ಬರೀ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುವುದಿಲ್ಲ. ಅದರ ಜೊತೆಗೆ ಅಕ್ಕ ಪಕ್ಕದ ಮನೆ ಬಳಿಯೂ ಹೋಗುತ್ತಾನಂತೆ. ಅಲ್ಲಿ ಕಿಟಕಿಯಲ್ಲಿ ಬಗ್ಗಿ ಬಗ್ಗಿ ನೋಡುತ್ತಾನಂತೆ! ಈತನನ್ನು ಕಂಡು ಜನ ಭಯಭೀತರಾಗುತ್ತಿದ್ದು ಯುವಕನ ವರ್ತನೆಗೆ ಬೇಸತ್ತಿದ್ದಾರೆ. ಈಗ ಈ ಯುವಕನ ವರ್ತನೆಯ ವಿಡಿಯೋ ವೈರಲ್ ಆಗಿದೆ.


ಇದನ್ನೂ ಓದಿ: Leg Cut: ಅಜ್ಜಿ ಕಾಲನ್ನೇ ಕತ್ತರಿಸಿ ಚಿನ್ನದ ಕಡಗ ಕದ್ದೊಯ್ದ ಕಳ್ಳರು! ಗಾಯಾಳು ವೃದ್ಧೆಯ ಸ್ಥಿತಿ ಗಂಭೀರ


ಮನೆ ಮುಂದೆ ಒಣಗಿಸಿದ್ದ ಬಟ್ಟೆ ಕದಿಯುವ ಸೈಕೋ


ಈ ಸೈಕೋ ವ್ಯಕ್ತಿ ಮನೆ ಮುಂದೆ ಒಣಗಿ ಹಾಕಿದ ಬಟ್ಟೆಗಳನ್ನ ಕದಿಯುತ್ತಿದ್ದ. ಬಳಿಕ ಮತ್ತೆ ಬಂದು ಮನೆಗಳಿಗೆ ಇಣುಕಿ ನೋಡುತ್ತಿದ್ದ. ಇದನ್ನು ಸಿಸಿಟಿವಿಯಲ್ಲಿ ಕಂಡು ಶಾಕ್ ಆಗಿದ್ದಾರೆ. . ಇದಾದ ಬಳಿಕ ಯುವಕನ ಪುಂಡಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಗ್ರಾಮದಲ್ಲಿ ರಾತ್ರಿ ಓಡಾಡುವುದನ್ನು ನೋಡಿ ಜನ ಭಯ ಬಿದ್ದಿದ್ದಾರೆ.


ಯುವಕನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು


ಇಂಥದ್ದೊಂದು ಘಟನೆ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಬೆಟ್ಟಹಲಸೂರು ಗ್ರಾಮದಲ್ಲಿ ನಡೆದಿದೆ. ಇನ್ನು ಈ ಬೆತ್ತಲೆ ಯುವಕನ ವರ್ತನೆಯಿಂದ ಜನರೆಲ್ಲ ಆತಂಕಕ್ಕೆ ಒಳಗಾಗಿದ್ದರು. ಅವರ ಕಾಟದಿಂದ ಬೇಸತ್ತು, ಅವನಿಗೆ ಪಾಠ ಕಲಿಸಲು ಪ್ಲಾನ್ ಮಾಡಿದ್ದರು. ಅದರಂತೆ ಆತ ಮತ್ತೊಮ್ಮೆ ಗ್ರಾಮಕ್ಕೆ ಬೆತ್ತಲೆಯಾಗಿ ಎಂಟ್ರಿ ಕೊಟ್ಟಾಗ ಗ್ರಾಮಸ್ಥರೆಲ್ಲ ಸೇರಿ ಹಿಡಿದಿದ್ದಾರೆ.


ಇದನ್ನೂ ಓದಿ: Vidhana Soudha: ಇಬ್ಬರು ಹುಡುಗಿಯರು ಕೈಕೊಟ್ಟಿದ್ದಕ್ಕೆ ಸರ್ಕಾರದ ಮೇಲೆ ಸಿಟ್ಟು! ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದಾರೆ ಅಂತ ಕಾಲ್ ಮಾಡಿದ ಟೆಕ್ಕಿ!


ಬಟ್ಟೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು


ಇನ್ನು ಆತನನ್ನು ವಶಕ್ಕೆ ಪಡೆದ ಪೊಲೀಸರು, ಆತನ ಪೂರ್ವಾಪಕ ವಿಚಾರಿಸಿದ್ದಾರೆ. ಬಳಿಕ ಆ ಯವಕನಿಗೆ ಬಟ್ಟೆ ಕೊಡಿಸಿ ಮಾನ ಮುಚ್ಚಿ ಕರೆದುಕೊಂಡು ಹೋಗಿದ್ದಾರೆ. ಒಂದು ವಾರದ ಹಿಂದೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ಇದಾಗಿದೆ. ಆದರೆ ಹಾಗೆ ಪೊಲೀಸರು ಕರೆದೊಯ್ದ ಯುವಕ ಬಳಿಕ ಎಲ್ಲಿಹೋದ ಅನ್ನೋದೆ ಗ್ರಾಮದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Published by:Annappa Achari
First published: