ಶಿವಮೊಗ್ಗ(ಡಿಸೆಂಬರ್. 28): ಶಿವಮೊಗ್ಗ ಜಿಲ್ಲೆಯ ಜನರಿಗೆ ಕೊರೋನಾ ಭಯಕ್ಕಿಂತ ಮಂಗನ ಕಾಯಿಲೆ ಭಯವೇ ಹೆಚ್ಚು. ಅದರಲ್ಲೂ ಡಿಸೆಂಬರ್ ತಿಂಗಳಲ್ಲಿ ಈ ಭಯ ಇನ್ನು ಹೆಚ್ಚು. ಬಿಸಿಲಿನ ವಾತಾವರಣ ಹೆಚ್ಚಾದಂತೆ ಕಾಯಿಲೆ ಹರಡುವ ಪ್ರಮಾಣ ಸಹ ಅಧಿಕ. ಶಿವಮೊಗ ಜಿಲ್ಲೆಯ್ಯಾದಂತ ಈ ಕಾಯಿಲೆ ಹರಡುವ ಸಾಧ್ಯತೆ ಇದ್ದರೂ, ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಇದರ ಪ್ರಮಾಣ ಹೆಚ್ಚು. ನವೆಂಬರ್ ತಿಂಗಳಲ್ಲೇ ಕಾಡಿನಲ್ಲಿ ಉಣ್ಣೆಗಳ ಚಟುವಟಿಕೆ ಆರಂಭವಾಗುತ್ತವೆ. ಅವುಗಳ ಸಂಖ್ಯೆ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗುತ್ತೇ. ಕಾಡಂಚಿನ ಪ್ರದೇಶದಲ್ಲಿ ವಾಸ ಮಾಡುವ ಜನರು ಕಾಡಿಗೆ ತೆರಳಿದಾಗ ಉಣ್ಣೆಗಳು ಮನುಷ್ಯರಿಗೆ ಕಡಿದರೆ ಮಂಗನ ಕಾಯಿಲೆ ಬರುತ್ತೇ. ಈಗಾಗಲೇ ಜುಲೈ ತಿಂಗಳಿನಿಂದಲೇ ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳ್ನು ಕೈಗೊಳ್ಳಲಾಗಿದೆ. ಬರೋಬ್ಬರಿ ಈಗಾಗಲೇ ಜಿಲ್ಲೆಯ 1 ಲಕ್ಷದ 10 ಸಾವಿರ ಜನರಿಗೆ ಕೆಎಫ್ ಡಿ ಚುಚ್ಚು ಮದ್ದು ಹಾಕಲಾಗಿದೆ. ಅದರ ಜೊತೆಗೆ ಎರಡೇ ಬಾರಿಗೆ ಬೂಸ್ಟರ್ ಡೋಸ್ ಗಳನ್ನು ನೀಡಲಾಗುತ್ತಿದೆ. ಕಾಡಿಗೆ ತೆರಳುವಂತವರಿಗೆ ಡಿಎಂಪಿ ಆಯಿಲ್ ನೀಡಲಾಗುತ್ತಿದೆ.
ಇದನ್ನು ಮೈಗೆ ಹಚ್ಚಿಕೊಂಡು ಹೋದರೆ. ಉಣ್ಣೆ ಕಚ್ಚಿದರೂ, ಏನು ಆಗುವುದಿಲ್ಲ. ಇದರ ಸಂಗ್ರಹವನ್ನು ಸಹ ಸಾಕಷ್ಟು ಮಾಡಿಟ್ಟು ಕೊಳ್ಳಲಾಗಿದೆ. ಸುಮಾರು 35 ಸಾವಿರ ಡಿಎಂಪಿ ಆಯಿಲ್ ಬಾಟಲ್ ಗಳು ಅನ್ನು ಸಂಗ್ರಹಿಸಿಟ್ಟಕೊಳ್ಳಲಾಗಿದೆ.
ಈಗಾಗಲೇ ಇಲಾಖೆಯೂ ಕೆಎಫ್ ಡಿ ಲಸಿಕೆ ಹಾಗೂ ಡಿಎಂಪಿ ಆಯಿಲ್ ಬಳಕೆಯ ಕುರಿತು ವ್ಯಾಪಕ ಪ್ರಚಾರ ಮಾಡಿದೆ. ಜಿಲ್ಲೆಯಲ್ಲಿ ಲಸಿಕೆ, ಮತ್ತು ಡಿಎಂಪಿ ಆಯಿಲ್ ಸಾಕಷ್ಟು ದಾಸ್ತು ಇದೆ. ಒಬ್ಬ ವ್ಯಕ್ತಿ ಮಂಗನ ಕಾಯಿಲೆ ಲಸಿಕೆಯನ್ನು ಮೂರು ಬಾರಿ ಪಡೆಯಬೇಕು, ಆಗ ಅವರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಮೊದಲ ಚುಚ್ಚು ಮದ್ದು ಪಡೆದ ಒಂದುವರೆ ತಿಂಗಳ ನಂತರ ಎರಡನೇ ಮತ್ತು ಆ ನಂತರ ಒಂದು ತಿಂಗಳ ಬಳಿಕ ಮತ್ತೋಂದು ಚುಚ್ಚು ಮದ್ದು ಪಡೆಯಬೇಕು.
ಮೊದಲ ಚುಚ್ಚು ಮದ್ದು ಪಡೆದ 30 ದಿನಗಳ ನಂತರ ಆ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಸೂಕ್ತ ರೀತಿಯಲ್ಲಿ ಚುಚ್ಚು ಮದ್ದು ಪಡೆಯದೇ ಹೋದರ ಅದು ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಈಗಾಗಲೇ ಕೆಎಫ್ ಡಿ ಕಾಯಿಲೆ ಹರಡುವಂತ ಪ್ರದೇಶಗಳಲ್ಲಿ ಚುಚ್ಚುಗಳನ್ನು ನೀಡಲಾಗಿದೆ.
20 ದಿನದಲ್ಲಿ ಕೋಲಾರದ ವಿಸ್ಟ್ರಾನ್ ಕಂಪನಿ ಪುನರ್ ಆರಂಭ: ಸಚಿವ ಶಿವರಾಮ್ ಹೆಬ್ಬಾರ್ ವಿಶ್ವಾಸ
ಆಶಾ ಕಾರ್ಯಕರ್ತೆಯರು ಸಹ ಪ್ರತಿ ಮನೆಗೆ ತೆರಳಿ ಡಿಎಂಪಿ ಆಯಿಲ್ ಬಳಕೆ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಕಾಡಿನಲ್ಲಿ ಮಂಗಗಳ ಸಾವು ಹೆಚ್ಚಾದರೆ ಕೆಎಫ್ ಡಿ ಕಾಯಿಲೆ ಹರಡುವ ಭೀತಿ ಹೆಚ್ಚು. ಜಿಲ್ಲೆಯಲ್ಲಿ ನವೆಂಬರ್ ನಂತರ 5 ಮಂಗಳು ಸಾವು ಕಂಡಿವೆ. ಆದರೆ ಅವುಗಳಲ್ಲಿ ಕೆಎಫ್ ಡಿ ವೈರಾಣು ಇಲ್ಲ ಎಂಬುದು ಪರೀಕ್ಷೆಯಿಂದ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ