ವರದಕ್ಷಿಣೆ ಪಿಡುಗಿಗೆ ಬಲಿಯಾದ ಕೊರೋನಾ ವಾರಿಯರ್; ಗುಮ್ಮಟ ನಗರಿಯಲ್ಲೊಂದು ದಾರುಣ ಘಟನೆ

ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪತಿ ಕಡೆಯವರು ಸುಳ್ಳು ಹೇಳುತ್ತಿದ್ದಾರೆ. ತಮ್ಮ ಮಗಳನ್ನು ಆಕೆಯ ಗಂಡನ ಮನೆಯವರೇ ಬಲವಂತದಿಂದ ಗುಳಿಗೆ ನುಂಗಿಸಿ ಕೊಲೆ ಮಾಡಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ನಿಕರತಕೌಸರ ಕುಟುಬಂಸ್ಥರು ಆಗ್ರಹಿಸಿದ್ದಾರೆ.

news18-kannada
Updated:May 23, 2020, 6:13 PM IST
ವರದಕ್ಷಿಣೆ ಪಿಡುಗಿಗೆ ಬಲಿಯಾದ ಕೊರೋನಾ ವಾರಿಯರ್; ಗುಮ್ಮಟ ನಗರಿಯಲ್ಲೊಂದು ದಾರುಣ ಘಟನೆ
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ (ಮೇ 23); ಕೊರೋನಾ ಎಮರ್ಜೆನ್ಸಿ ಸಮಯದಲ್ಲಿಯೇ ಕೊರೋನಾ ವಾರಿಯರ್​ ಒಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಶಿಯಲ್ಲಿ ನರ್ಸ್ ಆಗಿದ್ದ 30 ವರ್ಷದ ನಿಕಹತಕೌಸರ ರಿಯಾಜ್ ಅಹ್ಮದ ಚಪ್ಪರಬಂದ್ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಕೊರೋನಾ ವಾರಿಯರ್. ಗದಗ ಮೂಲದ ಈ ಶುಶ್ರೂಷಕಿ 2018ರಲ್ಲಿ ವಿಜಯಪುರದ ರಿಯಾಜ ಅಹ್ಮದ ಅಲ್ಲಾಭಕ್ಷ ಚಪ್ಪರಬಂದ ಅವರನ್ನು ಮದುವೆಯಾಗಿದ್ದರು.  8 ತಿಂಗಳ ಗಂಡು ಮಗೂ ಕೂಡ ಇದೆ. ಈ ಮಧ್ಯೆ ನಿಕಹತಕೌಸರಗೆ ಆಕೆಯ ಗಂಡನ ಮನೆಯವರು ರೂ. 5 ಲಕ್ಷ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಈ ಕುರಿತು ಹಲವಾರು ಬಾರಿ ಸಂಧಾನವೂ ನಡೆದಿತ್ತು.

ಮೇ 14 ರಂದು ನಿಕಹತಕೌಸರ ಕೊರೋನಾಗೆ ನೀಡುವ ಹೈಡ್ರಾಕ್ಸಿಕ್ಲೋರೋಫಿನ್ ನ 10 ಮಾತ್ರೆಗಳನ್ನು ಸೇವಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಬಂದ ನಿಕಹತಕೌಸರ ತಮ್ಮ ಆಸ್ಪತ್ರೆಗೆ ಧಾವಿಸಿದ್ದಾರೆ. ಚಿಕಿತ್ಸೆ ಫಲಿಸದೆ ಕೌಸರ್ ಕೊನೆಯುಸಿರೆಳೆದಿದ್ದಾರೆ.

ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣವಾಗಿದ್ದು, ಆಕೆಯ ಗಂಡನ ಮನೆಯವರೇ ಮಗಳಿಗೆ ಬಲವಂತವಾಗಿ ಗುಳಿಗೆಗಳನ್ನು ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ನಿಕಹತಕೌಸರ ಚಪ್ಪರಬಂದ ತಂದೆ ರಾಜೇಸಾಬ ಚಪ್ಪರಬಂದ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಿಕಹತಕೌಸರ ಚಪ್ಪರಬಂದ ಅತ್ತೆ ಆಕೆಯ ಅತ್ತೆ ಬಾನುಬಿ ಚಪ್ಪರಬಂದ, ಪತಿ ರಿಯಾಜ ಅಹ್ಮದ ಚಪ್ಪರಬಂದ, ಮಾವ ಅಲ್ಲಾಭಕ್ಷ ಚಪ್ಪರಬಂದ, ಮೈದುನ ನಿಸಾರಅಹ್ಮದ ಚಪ್ಪರಬಂದ, ನಾದಿನಿ ನಹಿದಾ ಚಪ್ಪರಬಂದ, ಅತ್ತೆಯ ಸಂಬಂಧಿಕರಾದ ಮೌಲಾಲಿ ಗಾಜುಸಾಬ ಚಪ್ಪರಬಂದ ಮತ್ತು ಮಹಬೂಬಸಾಬ ಗಾಜುಸಾಬ ಶೇಖ ಎಂಬುವರ ವಿರುದ್ಧ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪತಿ ರಿಯಾಜಅಹಮ್ಮದ ಚಪ್ಪರಬಂದ ಮತ್ತು ಅತ್ತೆ ಬಾನುಬಿ ಚಪ್ಪರಬಂದ ಅವರನ್ನು ವಿಜಯಪುರ ನಗರದ ಜಲನಗರ ಪೊಲೀಸರು ಬಂಧಿಸಿದ್ದಾರೆ.  ಅಲ್ಲದೇ, ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಇದನ್ನು ಓದಿ: ಗೋರಖ್ ಪುರಕ್ಕೆ ಹೊರಟಿದ್ದ ರೈಲು ತಲುಪಿದ್ದು ಮಾತ್ರ ಒರಿಸ್ಸಾಗೆ; ಅತಂತ್ರ ಸ್ಥಿತಿಯಲ್ಲಿ ವಲಸೆ ಕಾರ್ಮಿಕರು

ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪತಿ ಕಡೆಯವರು ಸುಳ್ಳು ಹೇಳುತ್ತಿದ್ದಾರೆ. ತಮ್ಮ ಮಗಳನ್ನು ಆಕೆಯ ಗಂಡನ ಮನೆಯವರೇ ಬಲವಂತದಿಂದ ಗುಳಿಗೆ ನುಂಗಿಸಿ ಕೊಲೆ ಮಾಡಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ನಿಕರತಕೌಸರ ಕುಟುಬಂಸ್ಥರು ಆಗ್ರಹಿಸಿದ್ದಾರೆ.

 
First published: May 23, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading