Bank Notice: ಬೆಳೆ ಹಾಳು ಮಾಡಿದ ನೆರೆ, ಬ್ಯಾಂಕ್‌ ನೋಟಿಸ್‌ನ ಬರೆ! ತಲೆ ಮೇಲೆ ಕೈಹೊತ್ತು ಕುಳಿತ ಅನ್ನದಾತ

ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವಾಗಲೇ ಸಾಲ ಮರುಪಾವತಿಗಾಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡ್ತಿದಾರೆ ಅಂತಾ ಗ್ರಾಮದ ರೈತ್ರು ಆರೋಪಿಸ್ತಿದಾರೆ.. ಪೂರ್ಣ ಪ್ರಮಾಣದ ಹಣ ನೀಡ್ದಿದ್ರೆ, ಜಪ್ತಿ, ಹರಾಜು ಪ್ರಕ್ರಿಯೆ ನಡೆಸೋದಾಗಿ ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಬೆಳೆಹಾನಿಯಿಂದ ಕಂಗಾಲಾಗಿರುವ ಅನ್ನದಾತರು

ಬೆಳೆಹಾನಿಯಿಂದ ಕಂಗಾಲಾಗಿರುವ ಅನ್ನದಾತರು

  • Share this:
ಗದಗ: ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ (Rain) ಅನ್ನದಾತರನ್ನ ಕಂಗಾಲು ಮಾಡಿದೆ. ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ ನೆಲ ಕಚ್ಚಿವೆ. ಬೆಳೆಹಾನಿಯಿಂದ (Crop Loss) ಸಂಕಷ್ಟದಲ್ಲಿರುವಾಗಲೇ ರೈತರಿಗೆ (Farmer) ಸಾಲ ಮರುಪಾವತಿಗಾಗಿ (Loan repayment) ಬ್ಯಾಂಕ್ ನಿಂದ ನೋಟಿಸ್ (Bank Notice) ಬಂದಿದ್ದು, ಅನ್ನದಾತರ ನಿದ್ದೆ ಕೆಡಿಸಿದೆ. ಗದಗ (Gadag) ಜಿಲ್ಲೆ ಮುಂಡರಗಿ (Mundaragi) ತಾಲೂಕಿನ ರೈತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಸಾಲ ಮರುಪಾವತಿ ನೋಟಿಸ್ ನೀಡಿದೆ. ಡೋಣಿ ಗ್ರಾಮದ ರೈತರು 2010 ರಿಂದ ಪಿಎಲ್  ಬ್ಯಾಂಕ್ ನಿಂದ ಬೆಳೆ ಸಾಲ ಪಡೆದಿದ್ರು.. 2016 ರಿಂದ ಸರಿಯಾಗಿ ಹಣ ಮರುಪಾವತಿ ಮಾಡಿರಲಿಲ್ವಂತೆ.. ಅತಿವೃಷ್ಟಿ, ಅನಾವೃಷ್ಟಿಯಿಂದ ಹಣ ಮರುಪಾವತಿ ಸಾಧ್ಯವಾಗಿರಲಿಲ್ಲ.. ಡೋಣಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿ ಸಂಭವಿಸ್ತಾನೆ ಬಂದಿದೆ.. ಈ ಬಾರಿ ಅತಿಯಾದ ಮಳೆಯಿಂದಾಗಿ ಗ್ರಾಮದಲ್ಲಿ ಹರಿಯುವ ಮೂರು ಹಳ್ಳಗಳು ತುಂಬಿ 500 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ.. ನೀರಿನ ಮಟ್ಟ ಇಳಿಯುವ ಲಕ್ಷಣ ಹಾಕ್ತಿಲ್ಲ.. ಇಂಥದ್ರಲ್ಲಿ ಬ್ಯಾಂಕ್ ಸಿಬ್ಬಂದಿ ಅಂತಿಮ ನೋಟಿಸ್ ನೀಡಿ, ರೈತರ ಜೀವನದ ಜೊತೆ ಆಟವಾಡೋದಕ್ಕೆ ಮುಂದಾಗಿದೆ..

ವಾರದೊಳಗೆ ಹಣ ಪಾವತಿಸಲು ಬ್ಯಾಂಕ್ ಸೂಚನೆ

ಡೋಣಿ ಗ್ರಾಮದ ವ್ಯಾಪ್ತಿಯ ರೈತರಿಗೆ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಿಂದ ನೋಟಿಸ್ ನೀಡಲಾಗಿದೆ. ವಾರದಲ್ಲಿ ಹಣ ಪಾವತಿಸ್ಬೇಕು. ಇಲ್ದಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ತೀವಿ ಅಂತಾ ನೋಟಿಸ್ ನಲ್ಲಿ ಹೇಳಲಾಗಿದೆ.. ಅಧಿಕ ಮಳೆಯಿಂದ ಕಂಗಾಲಾದ ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದ ಅನುಭವವಾಗಿದೆ.

ಬೆಳೆ ಕಳೆದುಕೊಂಡ ಅನ್ನದಾತರು


ಆಸ್ತಿ ಜಪ್ತಿ, ಹರಾಜು ಮಾಡುವುದಾಗಿ ಎಚ್ಚರಿಕೆ

ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವಾಗಲೇ ಸಾಲ ಮರುಪಾವತಿಗಾಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡ್ತಿದಾರೆ ಅಂತಾ ಗ್ರಾಮದ ರೈತ್ರು ಆರೋಪಿಸ್ತಿದಾರೆ.. ಪೂರ್ಣ ಪ್ರಮಾಣದ ಹಣ ನೀಡ್ದಿದ್ರೆ, ಜಪ್ತಿ, ಹರಾಜು ಪ್ರಕ್ರಿಯೆ ನಡೆಸೋದಾಗಿ ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ರೈತರಿಗೆ ಬ್ಯಾಂಕ್‌ನಿಂದ ನೋಟಿಸ್


ಇದನ್ನೂ ಓದಿ: Heavy Rain: ರಾಮನಗರ ಜಿಲ್ಲೆಯಲ್ಲಿ ಅತಿವೃಷ್ಟಿ, ರೈತರ ಜಮೀನಿನಲ್ಲೇ ಏಕಾಏಕಿ ಹಳ್ಳ ಸೃಷ್ಟಿ!

ನೋಟಿಸ್‌ನಿಂದ ಕಂಲಾಗಾದ ರೈತರು

ಗದಗ ಜಿಲ್ಲೆ 3 ಲಕ್ಷ 17 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದೆ.. ಈ ಪೈಕಿ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.. 73 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ನಿರಂತರ ಮಳೆಗೆ ನೆಲ ಕಚ್ಚಿದೆ.. ಇಂಥದ್ರಲ್ಲಿ ರೈತ್ರು, ಸಾಲದ ಹಣ ಮರು ಪಾವತಿಸಲು ಸಾಧ್ಯವಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಭಾರೀ ಮಳೆಗೆ ಹಾಳಾದ ಬೆಳೆ


ನಮಗೆ ಮಾಹಿತಿ ಇಲ್ಲ ಅಂತಾರೆ ಅಧಿಕಾರಿಗಳು

ಲಕ್ಷಾಂತರ ರೂಪಾಯಿ ಲಾಭ ನಿರೀಕ್ಷೆ ಮಾಡಿದ್ದ ಅನ್ನದಾತನಿಗೆ ಬೆಳೆನಾಶ ಹೊಡೆತ ಕೊಟ್ಟಿದೆ.. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲರೇ, ರೈತರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾನಿಯಾದ ಬಗ್ಗೆ ವಿವರ ನೀಡಿದ್ರು.. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರೈತರಿಗೆ ಬ್ಯಾಂಕ್ ನೋಟಿಸ್ ನೀಡ್ಲಾಗಿದ್ದು, ಅಧಿಕಾರಿಗಳಿಗೆ ಮಾಹಿತಿ ಇಲ್ಲ ಅಂತಿದಾರೆ..

ಇದನ್ನೂ ಓದಿ: Elephant: ಕಾಡಾನೆಗಳಿಗೆ ಆಟ, ರೈತರಿಗೆ ಪ್ರಾಣ ಸಂಕಟ! ಆನೇಕಲ್‌ ಭಾಗದಲ್ಲಿ ಗಜಪಡೆಯಿಂದ ಆತಂಕ

ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ರೈತರು

ಬೆಳೆಯಿಂದ ಲಾಭನೂ ಇಲ್ಲ, ಸರಕಾರದಿಂದ ಪರಿಹಾರವೂ ಇಲ್ಲ, ಈ ನಡುವೆ ಬ್ಯಾಂಕ್ ನೋಟಿಸ್ ನೀಡಿದ್ದು ರೈತರನ್ನ ಅಕ್ಷರಶಃ ಕಂಗಾಲಾಗಿಸಿದೆ.. ಬ್ಯಾಂಕ್ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರ ಹಿಡಿಶಾಪ ಹಾಕುವಂತೆ ಮಾಡಿದೆ.. ಸರ್ಕಾರ ಈ ಬಗ್ಗೆ ಗಮನ ಹರಿಸಿ ನೋಟಿಸ್ ವಾಪಾಸ್ ನಡೆದು ರೈತರಿಗೆ ಕಾಲಾವಕಾಶ ಕೊಡುವಂತೆ ಮಾಡ್ಬೇಕಿದೆ.. ಈ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಿದೆ.
Published by:Annappa Achari
First published: