Road Sign: ಸದ್ಯ ಸೋಶಿಯಲ್ ಮೀಡಿಯಾ ತುಂಬಾ ಚಾಲ್ತಿಯಲ್ಲಿರೋದು ಈ ಸೂಚನಾ ಫಲಕ

ಇತ್ತೀಚೆಗೆ, ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರು ಅಸಾಮಾನ್ಯ ರಸ್ತೆ ಚಿಹ್ನೆಯನ್ನು ಗುರುತಿಸಿದ್ದಾರೆ. ಇದು ಬಿಳಿ ಹಿನ್ನೆಲೆಯಲ್ಲಿ ನಾಲ್ಕು ಕಪ್ಪು ಚುಕ್ಕೆಗಳನ್ನು ಹೊಂದಿದೆ. ಕುತೂಹಲಭರಿತ ಪ್ರಯಾಣಿಕ ಅನಿರುದ್ಧ ಮುಖರ್ಜಿ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಹೊಸ ಸೈನ್ ಬೋರ್ಡ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದ್ಯಾವುದು ಅದರ ಅರ್ಥವೇನು ಇಲ್ಲಿದೆ ನೋಡಿ.

ಹೊಸ ಸೂಚನಾ ಫಲಕ

ಹೊಸ ಸೂಚನಾ ಫಲಕ

  • Share this:
ಸಾಮಾನ್ಯವಾಗಿ ನಾವು ರಸ್ತೆಯ (Road) ಮೇಲೆ ಬೈಕ್, ಕಾರಿನಲ್ಲಿ ಅಥವಾ ಬಸ್ ನಲ್ಲಿ ಕೂತು ಹೋಗುವಾಗ ರಸ್ತೆಗೆ ಅಂಟಿಕೊಂಡಂತೆ ಒಂದು ಬದಿಯಲ್ಲಿರುವ ಟ್ರಾಫಿಕ್ ಸೂಚನಾ ಫಲಕಗಳು (Traffic Sign board) ನಮ್ಮ ಕಣ್ಣಿಗೆ ಬೀಳುತ್ತವೆ. ನಾವು ರಸ್ತೆಯ ಮೇಲೆ ಓಡಾಡುವಾಗ ಈ ಸೂಚನಾ ಫಲಕಗಳು ನಮಗೆ ತುಂಬಾನೇ ಸಹಾಯಕಾರಿಯಾಗಿರುತ್ತವೆ, ಏಕೆಂದರೆ ನಮಗೆ ಮುಂದೆ ರಸ್ತೆಯಲ್ಲಿ ಹಂಪ್ ಗಳಿರುವುದನ್ನು, ಮುಂದೆ ಅಡ್ಡ ರಸ್ತೆಗಳು ಇರುವುದನ್ನು, ಮುಂದಿನ ರಸ್ತೆ ಒನ್ ವೇ ಇರುವುದನ್ನು ಹೀಗೆ ಅನೇಕ ಸೂಚನೆಗಳನ್ನು (notice) ನೀಡುವ ಕೆಲಸ ಮಾಡುತ್ತವೆ. ಎಷ್ಟೋ ಅಪಘಾತಗಳು ಈ ಸೂಚನಾ ಫಲಕಗಳನ್ನು ಸರಿಯಾಗಿ ಗಮನಿಸದೆ ಇರುವುದರಿಂದ ಆಗುತ್ತವೆ ಅಂತ ಹೇಳಿದರೆ ಸುಳ್ಳಲ್ಲ.

ಅರೇ.. ಈಗ ಈ ಟ್ರಾಫಿಕ್ ಸೂಚನಾ ಫಲಕಗಳ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಇಲ್ಲೊಂದು ಹೊಸ ಸೂಚನಾ ಫಲಕ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ನಿದ್ದೆ ಕೆಡಿಸಿತ್ತು. ಎಂದರೆ ಆ ಸೂಚನಾ ಫಲಕದಲ್ಲಿರುವ ಚಿತ್ರ ವಾಹನ ಸವಾರರಿಗೆ ಏನು ಸೂಚನೆ ನೀಡುತ್ತದೆ ಅಂತ ಎಲ್ಲರೂ ತಲೆ ಕೆಡೆಸಿಕೊಂಡಿದ್ದರು.

ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಹೊಸ ಸೈನ್ ಬೋರ್ಡ್ ಶೇರ್

ಬೆಂಗಳೂರು ಸಂಚಾರ ಪೊಲೀಸರು ಯಾವಾಗಲೂ ಸೈನ್ ಬೋರ್ಡ್ ಗಳು ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಂದೇಹಗಳು ಮತ್ತು ಪ್ರಶ್ನೆಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೂಡಲೇ ಪ್ರತಿಕ್ರಿಯಿಸುತ್ತಾರೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರು ಅಸಾಮಾನ್ಯ ರಸ್ತೆ ಚಿಹ್ನೆಯನ್ನು ಗುರುತಿಸಿದ್ದಾರೆ.

A new signboard appeared at Bangalores White Field Know what that means
ಸಾಂದರ್ಭಿಕ ಚಿತ್ರ


ಇದು ಬಿಳಿ ಹಿನ್ನೆಲೆಯಲ್ಲಿ ನಾಲ್ಕು ಕಪ್ಪು ಚುಕ್ಕೆಗಳನ್ನು ಹೊಂದಿದೆ. ಕುತೂಹಲಭರಿತ ಪ್ರಯಾಣಿಕ ಅನಿರುದ್ಧ ಮುಖರ್ಜಿ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಹೊಸ ಸೈನ್ ಬೋರ್ಡ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಹೊಸ ಸೂಚನಾ ಫಲಕದ ಅರ್ಥ ಇಲ್ಲಿದೆ ನೋಡಿ

ಈ ಸೈನ್ ಬೋರ್ಡ್ ನ ಫೋಟೋವನ್ನು ಪೋಸ್ಟ್ ಮಾಡುವಾಗ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ "ಇದು ಯಾವ ಟ್ರಾಫಿಕ್ ಸಂಕೇತ? ಇದನ್ನು ಹೋಪ್‌ಫಾರ್ಮ್ ಸಿಗ್ನಲ್ ಗೆ ಸ್ವಲ್ಪ ಹಿಂದೆ ಇಡಲಾಗಿದೆ" ಎಂದು ಬರೆದಿದ್ದರು.

ಮುಖರ್ಜಿ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ, ವೈಟ್‌ಫೀಲ್ಡ್ ಏರಿಯಾದ ಸಂಚಾರ ಪೊಲೀಸರು ಈ ಸೂಚನಾ ಫಲಕದ ಅರ್ಥವನ್ನು ಬಹಿರಂಗಪಡಿಸಿದರು. ಪೊಲೀಸರ ಪ್ರಕಾರ, ಅಂಧ ವ್ಯಕ್ತಿಯು ರಸ್ತೆಯಲ್ಲಿ ಇರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರಿಕೆ ವಹಿಸುವಂತೆ ಒತ್ತಾಯಿಸುತ್ತಿರುವ ಅರ್ಥವನ್ನು ಈ ಸೂಚನಾ ಫಲಕ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hindi Imposition: ಕನ್ನಡದ ವೆಬ್​​ಸೈಟ್​ನಲ್ಲೂ ಹಿಂದಿ ಪ್ರೇಮ, ಸರ್ಕಾರದಿಂದ ಯಡವಟ್

"ಸರ್, ಇದು ಎಚ್ಚರಿಕೆಯ ಸೂಚನಾ ಫಲಕವಾಗಿದ್ದು, ಇದು ಅಂಧ ವ್ಯಕ್ತಿಯು ರಸ್ತೆಯಲ್ಲಿರಬಹುದು ಮತ್ತು ಆದ್ದರಿಂದ ನೀವು ವಾಹನ ಚಲಾಯಿಸುವಾಗ ಸ್ವಲ್ಪ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡುತ್ತದೆ. ಹೋಪ್ ಫಾರ್ಮ್ ಜಂಕ್ಷನ್ ನಲ್ಲಿ (ಅಂಧರಿಗಾಗಿ) ಒಂದು ಶಾಲೆ ಇದೆ, ಅಲ್ಲಿ ಈ ಬೋರ್ಡ್ ಅನ್ನು ಇರಿಸಲಾಗಿದೆ. ವಂದನೆಗಳು" ಎಂದು ಸಂಚಾರಿ ಪೊಲೀಸರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

A new signboard appeared at Bangalores White Field Know what that means
ಸಾಂದರ್ಭಿಕ ಚಿತ್ರ


ಪೊಲೀಸರ ಟ್ವೀಟ್ ಗೆ ನೆಟ್ಟಿಗರು ಹೇಳಿದ್ದು ಹೀಗೆ

ವೈಟ್‌ಫೀಲ್ಡ್ ಪ್ರದೇಶದ ಟ್ರಾಫಿಕ್ ಪೊಲೀಸರ ಟ್ವೀಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು "ಮಾಹಿತಿ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನನಗೆ ಇದರ ಬಗ್ಗೆ ತಿಳಿದಿರಲಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಇದರ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ! ನಮ್ಮಲ್ಲಿ ಹೆಚ್ಚಿನವರಿಗೆ ಈ ರಸ್ತೆ ಚಿಹ್ನೆಗಳು ಮತ್ತು ಅವುಗಳ ಅರ್ಥದ ಬಗ್ಗೆ ತಿಳಿದಿಲ್ಲ" ಎಂದು ಹೇಳಿ ಬರೆದಿದ್ದಾರೆ.

ಇದನ್ನೂ ಓದಿ:  Karnataka: ಪ್ರತಿಭಾ ಕಾರಂಜಿಯಲ್ಲಿ ಧರ್ಮ ಪಠಣೆಗೆ ಈ ಭಾಷೆಗೆ ಮಾತ್ರ ಅವಕಾಶ! ಶಿಕ್ಷಕರಿಂದ ವಿರೋಧ

ಇನ್ನೊಬ್ಬ ನೆಟ್ಟಿಗರು “ಬೆಂಗಳೂರು ಸಂಚಾರ ಪೊಲೀಸರು ಪ್ರತಿದಿನ ಟ್ವಿಟ್ಟರ್ ನಲ್ಲಿ ಇತರ ನಿಯಮಗಳಲ್ಲಿ ಟ್ರಾಫಿಕ್ ಚಿಹ್ನೆಗಳ ಬಗ್ಗೆ ಇನ್ನೂ ಸ್ವಲ್ಪ ಮಾಹಿತಿ ನೀಡಿದರೆ ಒಳ್ಳೆಯದು" ಎಂದು ಅವರು ಹೇಳಿದರು. ಆದಾಗ್ಯೂ ಟ್ವಿಟರ್ ಬಳಕೆದಾರರಲ್ಲಿ ಒಬ್ಬರು ಎಂವಿ ಕಾಯ್ದೆಯಡಿ ಅಂತಹ ಯಾವುದೇ ಸೂಚನಾ ಫಲಕವಿಲ್ಲ ಎಂದು ಹೇಳಿದ್ದಾರೆ.
Published by:Ashwini Prabhu
First published: