• Home
  • »
  • News
  • »
  • state
  • »
  • Actor Arrest: ತಾನು ಹುಡುಗಿ ಅಂತ ನಂಬಿಸಿ ಉದ್ಯಮಿಗೆ ಮೋಸ, ಬಯಲಾಯ್ತು ನವನಟನ ನವರಂಗಿ ಆಟ!

Actor Arrest: ತಾನು ಹುಡುಗಿ ಅಂತ ನಂಬಿಸಿ ಉದ್ಯಮಿಗೆ ಮೋಸ, ಬಯಲಾಯ್ತು ನವನಟನ ನವರಂಗಿ ಆಟ!

ಆರೋಪಿ ಯುವರಾಜ್ ಅಲಿಯಾಸ್ ಯುವ

ಆರೋಪಿ ಯುವರಾಜ್ ಅಲಿಯಾಸ್ ಯುವ

ಉದ್ಯಮಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ ಯುವ ನಟ, ಹುಡುಗಿಯರ ಹೆಸರಲ್ಲಿ ಅವರನ್ನು ಖೆಡ್ಡಾಕ್ಕೆ ಕೆಡವಿದ್ದ. ಬಳಿಕ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದ. ಇದೀಗ ಆತನನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

  • Share this:

ಬೆಂಗಳೂರು: ಹನಿಟ್ರ್ಯಾಪ್ (Honeytrap) ಮಾಡಿ ಉದ್ಯಮಿಯನ್ನು (Industrialist) ವಂಚಿಸಿದ (Fraud) ಆರೋಪದ ಮೇಲೆ ಸ್ಯಾಂಡಲ್‌ವುಡ್‌ನ (Sandalwood) ಯುವ ನಟನೊಬ್ಬನನ್ನು (New Actor) ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ ಯುವ ನಟ, ಹುಡುಗಿಯರ ಹೆಸರಲ್ಲಿ (Girls Name) ಅವರನ್ನು ಖೆಡ್ಡಾಕ್ಕೆ ಕೆಡವಿದ್ದ. ಬಳಿಕ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದ. ಯುವತಿ ಕಳುಹಿಸಿದ ಮೆಸೇಜ್‌ಗಳಿಗೆ (Message) ಪ್ರತಿಕ್ರಿಯಿಸಿದ್ದಲ್ಲದೆ ಆಕೆ ಕಳುಹಿಸಿದ್ದ 'ಹಾಟ್‌' ಫೋಟೋಗಳಿಗೆ ಉದ್ಯಮಿ ಪ್ರತಿಕ್ರಿಯಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ, ಪೊಲೀಸರ ಸೋಗಿನಲ್ಲಿ ಉದ್ಯಮಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ. ಈ ಬಗ್ಗೆ ಉದ್ಯಮಿ ದೂರು ನೀಡಿದ್ದರು. ಇದರ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕನ್ನಡ ಚಿತ್ರರಂಗದ ಯುವ ನಟನನ್ನು ಬಂಧಿಸಿದ್ದಾರೆ.


ಬಂಧಿತ ಯುವ ನಟ ಯಾರು?


ಬಂಧಿತ ಯುವ ನಟನನ್ನು ಯುವ ಅಲಿಯಾಸ್ ಯುವರಾಜ್ ಅಂತ ಗುರುತಿಸಲಾಗಿದೆ. ಬೆಂಗಳೂರಿನ ಜೆಪಿ ನಗರ ನಿವಾಸಿಯಾದ ಈತ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನೂ ಆಗಿದ್ದ.


ಸಿನಿಮಾಗಳಲ್ಲಿ ನಟಿಸಿದ್ದ ಆರೋಪಿ


ಹುಡುಗಿ ಹೆಸರಲ್ಲಿ ಉದ್ಯಮಿಗೆ ವಂಚನೆ


ಹೊಸೂರು ರಸ್ತೆಯಲ್ಲಿ ಉದ್ಯಮಿ ಸ್ವಂತ ಕಂಪೆನಿ ಹೊಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇನ್ಶೂರೆನ್ಸ್‌ ವಿಚಾರಕ್ಕೆ ಕವನಾ ಎಂಬುವವರು ಪರಿಚಯ ಆಗಿದ್ದರು. ಒಂದು ವಾರದ ಹಿಂದೆ ಕವನಾ, ನಿಧಿ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟಿದ್ದರು. ಅವರ ಜತೆ ಉದ್ಯಮಿ ವಾಟ್ಸಾಪ್ ಚಾಟ್‌ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದೇ ಉದ್ಯಮಿಯನ್ನು ಆರೋಪಿ ಖೆಡ್ಡಾಕ್ಕೆ ಕೆಡವಿದ್ದಾನೆ.


ಇದನ್ನೂ ಓದಿ: Arundhati Movie: ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ! ಈ ಯುವಕ ಹೇಳಿದ್ದು ಕೇಳಿದ್ರೆ ಎದೆ ನಡುಗುತ್ತೆ


ಉದ್ಯಮಿ ಜೊತೆ ಯುವತಿ ಹೆಸರಲ್ಲಿ ಚಾಟಿಂಗ್


ಯುವತಿ ಕಳುಹಿಸಿದ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಿದ್ದಲ್ಲದೆ ಆಕೆ ಕಳುಹಿಸಿದ್ದ 'ಹಾಟ್‌' ಫೋಟೋಗಳಿಗೆ ಉದ್ಯಮಿ ಪ್ರತಿಕ್ರಿಯಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ, ಪೊಲೀಸರ ಸೋಗಿನಲ್ಲಿ ಉದ್ಯಮಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ.


ಆರೋಪಿ ನಟಿಸಿದ್ದ ಸಿನಿಮಾ


ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪಿ


ಆಗಸ್ಟ್‌ 3ರಂದು ನಿಧಿ ಹೆಸರಿನ  ನಂಬರ್‌ನಿಂದ ಹೊಸೂರು ರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ಬರುವಂತೆ ಉದ್ಯಮಿಗೆ ಮೆಸೇಜ್‌ ಮಾಡಲಾಗಿತ್ತು. ಹೀಗಾಗಿ, ಉದ್ಯಮಿ ತಮ್ಮ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು.  ನಂತ್ರ ಉದ್ಯಮಿಗೆ ಭೇಟಿಯಾಗಿ ತಾವು ಕ್ರೈಮ್ ಪೊಲೀಸರು ಎಂದು ಹೇಳಿ ಹೆದರಿಸಿದ್ದ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿದ್ದ. ನಂತ್ರ ಕೇಸ್ ಮುಂದುವರೆಸದಿರಲು ಹಣ ಕೇಳಿದ್ದ.


ಒಟ್ಟು 14 ಲಕ್ಷ ರೂಪಾಯಿ ವಂಚನೆ


ಆರೋಪಿ ಯುವರಾಜ್ ಉದ್ಯಮಿಯಿಂದ ಮೊದಲಿಗೆ ಐವತ್ತು ಸಾವಿರ, ನಂತ್ರ ಬ್ಯಾಂಕ್ ನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಬಳಿಕ ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಹಲಸೂರು ಗೇಟ್ ಬಳಿ ಸಹ ಒಮ್ಮೆ  ಆರೋಪಿ ಹಣ ಪಡೆದಿದ್ದ.


ವಂಚಕನ ವಿರುದ್ಧ ದೂರು ನೀಡಿದ್ದ ಉದ್ಯಮಿ


ಇನ್ನು ಉದ್ಯಮಿಗೆ ಡೌಟ್ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: Supari Killers: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ತಮ್ಮನಿಗೆ ಮುಹೂರ್ತ, ಸುಪಾರಿ ಕೊಟ್ಟು ಕೊಲ್ಲಿಸಿದ ಅಕ್ಕಂದಿರು!


ಆರ್ಥಿಕ ಸಂಕಷ್ಟದಿಂದಾಗಿ ವಂಚನೆಗಿಳಿದ ನಟ


ಇನ್ನು ಆರೋಪಿ ಯುವರಾಜ ಜಿಮ್‌ ಟ್ರೇನರ್ ಕೂಡ ಆಗಿದ್ದ. ಇತ್ತೀಚೆಗೆ ಸಾಲದ ಸುಳಿಗೆ ಸಿಲುಕಿದ್ದ. ತನ್ನ ಸ್ನೇಹಿತೆ ನಿಧಿಗೆ ಉದ್ಯಮಿ ಮೆಸೇಜ್‌ ಮಾಡುವುದನ್ನು ಗಮನಿಸಿ ಮತ್ತೊಂದು ನಂಬರ್‌ನಿಂದ ಯುವತಿಯಂತೆಯೇ ಉದ್ಯಮಿಗೆ ಮೆಸೇಜ್‌ ಮಾಡಿದ್ದ. ಬಳಿಕ ಹಣ ದೋಚುವ ಸಲುವಾಗಿ ಪೊಲೀಸರ ರೈಡ್‌ ನೆಪದ ನಾಟಕವಾಡಿ ಸುಲಿಗೆ ಮಾಡಿದ್ದಾನೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Annappa Achari
First published: