ಚಿತ್ರದುರ್ಗ(ಜೂ.01): ಮಹಾತ್ಮ ಗಾಂಧಿ (Mahatma Gandhi) ಹತ್ಯೆ ವೇಳೆ ಸಿಹಿ ಹಂಚಿದ್ದು ಯಾರು, ಯಾವ ದಾಖಲೆಯಿವೆ ಕಾಂಗ್ರೆಸ್ (Congress) ಹೇಳಲಿ, RSS ದೇಶ ವಿರೋಧಿ ಆಗಿದ್ದರೆ ಜನ ಬಿಜೆಪಿಗೆ (BJP) ಮತ ಹಾಕುತ್ತಿದ್ದರೇ, ಗಾಂಧೀಜಿ ಸಿದ್ಧಾಂತ ಒಪ್ಪಿಕೊಂಡಿದ್ದೇವೆಂದು ಪ್ರಧಾನಿ ಮೋದಿ ಹೇಳಿದ್ದಾರೆ, ಮಸೀದಿ ಸ್ಥಳಗಳಲ್ಲಿ ದೇಗುಲಗಳ (Temple) ಕುರುಹು ಪತ್ತೆ ಕುರಿತು ಸ್ವತಂತ್ರ್ಯ ಪೂರ್ವದಲ್ಲೇ ಇತಿಹಾಸದ ಪುಟಗಳಲ್ಲಿದೆ, ದೇಶದಲ್ಲಿ ಬಿಜೆಪಿ (BJP) ಸರ್ಕಾರ ಬಂದ ಬಳಿಕ ಅದು ಬಯಲಾಗುತ್ತಿದೆ, ಚರ್ಚೆ ಆಗುತ್ತಿದೆ, ಆದರೆ, ಸಂಘ ಸಂಸ್ಥೆ, ರಾಜಕಾರಣದಿಂದ ಸಾಮರಸ್ಯ ಕದಡುವ ಕೆಲಸ ಬೇಡ, ಪ್ರಧಾನಿ, ಸಿಎಂ ರಿಂದ ಸಾಮರಸ್ಯ ನಿರ್ಮಾಣಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ, ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬ್ರಿಟಿಷರ ಕಾಲದಲ್ಲೇ ಆರ್ಯರು, ದ್ರಾವಿಡರು ಚರ್ಚೆ ಸೃಷ್ಠಿ ಆಗಿದೆ, ಆರ್ಯರು ಹೊರಗಿನವರಲ್ಲ ಎಂಬ ವೈಜ್ಞಾನಿಕ ಪುರಾವೆಯಿದೆ, ಆರ್ಯರು, ದ್ರಾವಿಡರು ಚರ್ಚೆ ಹುಟ್ಟು ಹಾಕುವುದು ಸಿದ್ಧರಾಮಯ್ಯಗೆ ಶೋಭೆ ತರಲ್ಲ, ಹೆಡ್ಗೆವಾರ್ ಸಿದ್ಧಾಂತದ ಮೇಲೆ ರೂಪುಗೊಂಡ ರಾಜಕೀಯ ಪಕ್ಷ ಬಿಜೆಪಿ, 18 ರಾಜ್ಯಗಳಲ್ಲಿ ನಮ್ಮ ಪಕ್ಷ, ಸಮ್ಮಿಶ್ರ ಸರ್ಕಾರಗಳಿವೆ.
ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ, ಆದ್ದರಿಂದದೇಶದ ಜನರು, ಒಪ್ಪಿದ ಸಿದ್ಧಾಂತವನ್ನ ತಿರಸ್ಕರಿಸುವುದು ಅವರಿಗೆ ಶೋಭೆ ತರೋಲ್ಲ, ಹೀಗೆ ಮಾತನಾಡುವ ಅವರಿಗೆ ಮಹಾತ್ಮ ಗಾಂಧಿ ಹತ್ಯೆ ವೇಳೆ ಸಿಹಿ ಹಂಚಿದ್ದು ಯಾರು, ಯಾವ ದಾಖಲೆಯಿವೆ ಕಾಂಗ್ರೆಸ್ ಹೇಳಲಿ, ಆರ್ ಎಸ್ ಎಸ್ ದೇಶ ವಿರೋಧಿ ಆಗಿದ್ದರೆ ಜನ ಬಿಜೆಪಿಗೆ ಮತ ಹಾಕುತ್ತಿದ್ದರೇ, ಗಾಂಧೀಜಿ ಸಿದ್ಧಾಂತ ಒಪ್ಪಿಕೊಂಡಿದ್ದೇವೆಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Gold Mine: ಭಾರತದ ಈ 3 ಹಳ್ಳಿಗಳಲ್ಲಿ ಇರುವೆಗಳ ಬಾಯಲ್ಲೂ ಚಿನ್ನ! 23 ಕೋಟಿ ಟನ್ ಚಿನ್ನದ ಗಣಿ ಪತ್ತೆ ಮಾಡಿದ್ದು ಇರುವೆಗಳು
ಇನ್ನೂ ಯಾರು ವಿದೇಶದಿಂದ ಹಣ ಪಡೆದು ಹಿಜಾಬ್ ಬಗ್ಗೆ ಚರ್ಚೆ ಮಾಡಿದರು, ಪಿಯುಸಿ ಮಕ್ಕಳು ಹಿಜಾಬ್ ಚರ್ಚೆ ಮಾಡಲು ಯಾರ ಮಾರ್ಗದರ್ಶನವಿದೆ, ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಮಸೀದಿ ಸ್ಥಳಗಳಲ್ಲಿ ದೇಗುಲಗಳ ಕುರುಹು ಪತ್ತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅದು ಸ್ವತಂತ್ರ್ಯ ಪೂರ್ವದಲ್ಲೇ ಇತಿಹಾಸದ ಪುಟಗಳಲ್ಲಿದೆ.
ಸಿದ್ಧರಾಮಯ್ಯ ಟ್ವೀಟ್ಗೆ ಪ್ರತಿಕ್ರಿಯೆ
ಬಿಜೆಪಿ ಸರ್ಕಾರ ಬಂದ ಬಳಿಕ ಬಯಲಾಗುತ್ತಿದೆ, ಚರ್ಚೆ ಆಗುತ್ತಿದೆ, ಆದರೆ, ಸಂಘ ಸಂಸ್ಥೆ, ರಾಜಕಾರಣದಿಂದ ಸಾಮರಸ್ಯ ಕದಡುವ ಕೆಲಸ ಬೇಡ, ಪ್ರಧಾನಿ, ಸಿಎಂರಿಂದ ಸಾಮರಸ್ಯ ನಿರ್ಮಾಣಕ್ಕೆ ಸೂಕ್ತ ಮಾರ್ಗದರ್ಶನ, ನೀಡಿದ್ದಾರೆ. ಮೋದಿಗೆ ಪಾಕ್ ಮೇಲೆ ವಿರಾವೇಶ, ಚೀನಾ ಬಗ್ಗೆ ಅಂಜಿಕೆ ಎಂದು ಸಿದ್ಧರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Kolar: ರೈಲ್ವೆ ಕೋಚ್ ಫ್ಯಾಕ್ಟರಿಯೂ ಇಲ್ಲ ರೈಲ್ವೆ ವರ್ಕ್ ಶಾಪ್ ಕೈಗಾರಿಕೆಯೂ ಇಲ್ಲ! ಎಲ್ಲವೂ ಘೋಷಣೆಯಲ್ಲಿ ಮಾತ್ರ
ಚೀನಾ ಯದ್ಧದ ವೇಳೆ ಕಾಂಗ್ರೆಸ್ ಭೂಮಿ ಬಿಟ್ಟುಕೊಟ್ಟಿದ್ದೇಕೆ?ಪಾಕ್ ಸೋತಾಗಲೂ ಭೂಮಿ ಬಿಟ್ಟುಕೊಟ್ಟರು, ಸೈನಿಕರನ್ನು ಬಿಟ್ಟು ಕಳುಹಿಸಿದ್ದರು ಏಕೆ?, ಕಾಂಗ್ರೆಸ್ ಪಕ್ಷ ಮೊದಲು ಈ ಬಗ್ಗೆ ಉತ್ತರ ನೀಡಲಿ ಎಂದಿದ್ದು, ಅನುಭವ ಮಂಟಪ ಹೌದು, ಹಿಂದುಗಳಿಗೆ ಮಾರಾಟಕ್ಕೆ ಸಿದ್ಧ ಎಂದಿದ್ದಾರೆಂಬ ಮಾಹಿತಿಯಿದೆ, ಈ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಾರ್ಯ ಮಾಡಲಾಗುತ್ತದೆ, ಆದರೇಸಾಮರಸ್ಯ ಕಡಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ