• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hassan: ಹಿಂದೂ ಸಂಘಟನೆಗಳ ಪ್ರತಿಭಟನೆಯಲ್ಲಿ ಕುರಾನ್ ಜಿಂದಾಬಾದ್ ಎಂದು ಕೂಗಿದ ಮುಸ್ಲಿಂ ಯುವಕ

Hassan: ಹಿಂದೂ ಸಂಘಟನೆಗಳ ಪ್ರತಿಭಟನೆಯಲ್ಲಿ ಕುರಾನ್ ಜಿಂದಾಬಾದ್ ಎಂದು ಕೂಗಿದ ಮುಸ್ಲಿಂ ಯುವಕ

ಕುರಾನ್ ಜಿಂದಾಬಾದ್ ಎಂದು ಕೂಗಿದ ಯುವಕ

ಕುರಾನ್ ಜಿಂದಾಬಾದ್ ಎಂದು ಕೂಗಿದ ಯುವಕ

ಭಜರಂಗದಳ ಕಾರ್ಯಕರ್ತರು ಮುಸ್ಲಿಂ ಯುವಕನನ್ನು ಅಟ್ಟಾಡಿಸಿದ್ದಾರೆ. ಗಲಾಟೆ ಜೋರು ಆಗ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ.

 • News18 Kannada
 • 3-MIN READ
 • Last Updated :
 • Hassan, India
 • Share this:

ಹಾಸನ: ಬೇಲೂರು ಚನ್ನಕೇಶವ ಜಾತ್ರೆ (Beluru Channakeshava Temple) ಸಂದರ್ಭ ಕುರಾನ್ ಪಠಣಕ್ಕೆ (Quran) ವಿರೋಧ ವ್ಯಕ್ತಪಡಿಸಿ ಇಂದು ಹಿಂದೂಪರ ಸಂಘಟನೆ (Hindu Organizations) ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಿಭಟನೆ ಕರೆ ಹಿನ್ನೆಲೆ ಬೇಲೂರಿನ ದೇವಾಲಯ ರಸ್ತೆಯಲ್ಲಿ  ಸೇರಿದ ನೂರಾರು ಕಾರ್ಯಕರ್ತರು ಜಾತ್ರೆ ವೇಳೆ ಕುರಾನ್ ಪಠಣೆ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.  ಏಪ್ರಿಲ್ 4 ಮತ್ತು ‌5 ರಂದು ಚನ್ನಕೇಶವ ರಥೋತ್ಸವ ನಡೆಯಲಿದೆ.  ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಣೆ ಮಾಡಲಾಗುತ್ತದೆ. ಪ್ರತಿಭಟನಾ ಸ್ಥಳಕ್ಕೆ ಮುಸ್ಲಿಂ ಯುವಕ (Muslim Youth) ಬೈಕ್​ನಲ್ಲಿ ಬಂದು ‘ಕುರಾನ್ ಜಿಂದಾಬಾದ್​’ ಎಂದು ಕೂಗಿದ್ದಾನೆ.


ಈ ಘೋಷಣೆ ಕೂಗುತ್ತಿದ್ದಂತೆ ಭಜರಂಗದಳ ಕಾರ್ಯಕರ್ತರು ಮತ್ತು ಮುಸ್ಲಿಂ ಯುವಕನ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಭಜರಂಗದಳ ಕಾರ್ಯಕರ್ತರು ಮುಸ್ಲಿಂ ಯುವಕನನ್ನು ಅಟ್ಟಾಡಿಸಿದ್ದಾರೆ. ಗಲಾಟೆ ಜೋರು ಆಗ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ.
ಯುವಕ ಪೊಲೀಸರ ವಶಕ್ಕೆ


ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಎಂದು ಕೂಗಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನು ಪ್ರತಿಭಟನಾಕಾರು ರಸ್ತೆ ತಡೆದು ಆಕ್ರೋಶ ಹೊರ ಹಾಕುತ್ತಿದ್ದಾರೆ.


ಇದನ್ನೂ ಓದಿ:  Karnataka Elections 2023: ಹಳೆ ಮೈಸೂರು ಭಾಗದಲ್ಲಿ ಹಿಂದೂ ಮತ ಸೆಳೆಯಲು ಅಶ್ವತ್ಥ್ ನಾರಾಯಣ್ ತಂತ್ರಗಾರಿಕೆ
ಕಳೆದ ವರ್ಷವೂ ಗಲಾಟೆ


ಕಳೆದ ವರ್ಷವ ಚನ್ನಕೇಶವ ದೇವಾಲಯ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಅಭಿಯಾನ ಶುರು ಮಾಡಲಾಗಿತ್ತು. ಮುಸ್ಲಿಮರು ಅಂಗಡಿ ಹಾಕಲು ಬಂದರೆ ದೇವಾಲಯದಿಂದ 100 ಅಡಿ ದೂರದಲ್ಲಿ ಜಾಗ ನೀಡುವಂತೆ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಸೂಚಿಸಿದ್ದರು.

First published: