Kolar: ಈ ಮುಸ್ಲಿಂ ಶಿಲ್ಪಿಯ ಕೈಯಲ್ಲಿ ರೂಪುಗೊಳ್ಳುತ್ತವೆ ಹಿಂದೂ ದೇವರು! ಎಲ್ಲರಿಗೂ ಇವರೇ ಅಚ್ಚುಮೆಚ್ಚು

ಹಿಂದೂ  ಮುಸಲ್ಮಾನ್ ಧರ್ಮ ಬೇದವಿಲ್ಲದೆ ವೃತ್ತಿ ಮಾಡುತ್ತಿರುವ ಸಯ್ಯದ್ ಮುನಾವರ್, ಗಣೇಶ, ಆಂಜನೇಯ, ಶಕ್ತಿದೇವತೆ, ನಾಗರಕಲ್ಲುಗಳನ್ನು ಸೇರಿದಂತೆ ಬೇರೆ ಬೇರೆ ದೇವರುಗಳ  ವಿಗ್ರಹಗಳ ಕೆತ್ತನೆ ಮಾಡುವುದರಲ್ಲಿ ಪರಿಣಿತರು,

ಮೂರ್ತಿ ಕೆತ್ತನೆಯಲ್ಲಿ ನಿರತನಾಗಿರುವ ಶಿಲ್ಪಿ

ಮೂರ್ತಿ ಕೆತ್ತನೆಯಲ್ಲಿ ನಿರತನಾಗಿರುವ ಶಿಲ್ಪಿ

  • Share this:
ಕೋಲಾರ: ರಾಜ್ಯದಲ್ಲಿ ಇತ್ತೀಚಿಗೆ  ಹಿಜಾಬ್ (Hijab),  ಹಲಾಲ್ (Halal) ಹಾಗೂ ಆಜಾನ್ (Ajaan) ವಿವಾದಗಳು (Controversy)  ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ಮುಸ್ಲಿಂ ಶಿಲ್ಪಿಗಳು (Sculptor) ಮಾಡಿದ ಹಿಂದೂ ದೇವರ ವಿಗ್ರಹಗಳನ್ನು (Hindu Gods idol) ಖರೀದಿಸದಂತೆ ಅಭಿಯಾನ ನಡೆಯುತ್ತಿದೆ. ಆದ್ರೆ ಇಲ್ಲೊಬ್ಬ ಮುಸ್ಲಿಂ (Muslim) ವ್ಯಕ್ತಿ, ಹಿಂದೂ ದೇವರ ವಿಗ್ರಹಗಳ ಕೆತ್ತನೆ ಮಾಡುವ ಕಾಯಕವನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಕೋಲಾರ (Kolar) ಜಿಲ್ಲೆಯ ಮಾಲೂರು (Malur) ತಾಲೂಕಿನ ಶಿವಾರಪಟ್ಟಣ ಗ್ರಾಮ, ಶಿಲ್ಪಿ ಗ್ರಾಮ ಎಂತಲೇ ಪ್ರಸಿದ್ದ, ಇಲ್ಲಿನ ಮುಸ್ಲಿಂ ಶಿಲ್ಪಿ ಹಲವು ವರ್ಷಗಳಿಂದ, ಕೆತ್ತನೆ ಕೆಲಸವನ್ನು ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. 30 ವರ್ಷಗಳಿಂದ ಶಿಲ್ಪಿ ವೃತ್ತಿ ಮಾಡಿಕೊಂಡಿರುವ  ಸಯ್ಯದ್ ಮುನಾವರ್, ತಂದೆ ಪೀರುಸಾಬ್ ರಂತೆ ಶಿಲ್ಪಿ  ವೃತ್ತಿ ಮಾಡಿಕೊಂಡು ಮುಂದುವರೆದಿದ್ದಾರೆ.

ಹಿಂದೂ ದೇವರುಗಳ ವಿಗ್ರಹ ಕೆತ್ತನೆ

ಹಿಂದೂ  ಮುಸಲ್ಮಾನ್ ಧರ್ಮ ಬೇದವಿಲ್ಲದೆ ವೃತ್ತಿ ಮಾಡುತ್ತಿರುವ ಸಯ್ಯದ್ ಮುನಾವರ್, ಗಣೇಶ, ಆಂಜನೇಯ, ಶಕ್ತಿದೇವತೆ, ನಾಗರಕಲ್ಲುಗಳನ್ನು ಸೇರಿದಂತೆ ಬೇರೆ ಬೇರೆ ದೇವರುಗಳ  ವಿಗ್ರಹಗಳ ಕೆತ್ತನೆ ಮಾಡುವುದರಲ್ಲಿ ಪರಿಣಿತರು,  ಇದುವರೆಗೆ ಮುನಾವರ್  ಸಾವಿರಾರು ವಿಗ್ರಹಗಳನ್ನು  ಕೆತ್ತನೆ ಮಾಡಿದ್ದು, ಅಚ್ಚು ಮೆಚ್ಚಿನ ಕೆತ್ತನೆ ಕಾರನಾಗಿ ಬೆಳೆದಿದ್ದಾರೆ.

ವಿವಾದಗಳ ಬಗ್ಗೆ ಮುನಾವರ್ ಬೇಸರ

ಗ್ರಾಮದ ತಮ್ಮ ಗುರುಗಳಾದ ಶ್ರೀಧರಾಚಾರಿ ಮಗನಾದ, ನರೇಂದ್ರ ಶಿಲ್ಪಿ ಬಳಿಯೇ ಇಂದಿಗೂ ದಿನಗೂಲಿ ನೌಕರನಾಗಿ ಕೆಲಸ ಮಾಡ್ತಿರುವ ಮುನಾವರ್,  ಮುಸ್ಲಿಮರ ವ್ಯಾಪಾರ ನಿಷೇಧ ಕುರಿತು ಬೇಸರ ಹೊರ ಹಾಕಿದ್ದಾರೆ,  ಆದರೆ  ಹಲಾಲ್ ವಿಚಾರವನ್ನು ತಲೆಕೆಡಿಸಿಕೊಳ್ಳದೆ ವಿಗ್ರಹಗಳ ಕೆತ್ತನೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Bengaluru Karaga: ನಾಳೆಯಿಂದ ಬೆಂಗಳೂರು ಕರಗ ಮಹೋತ್ಸವದ ಸಂಭ್ರಮ, ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ

ದೇವರೊಬ್ಬನೇ ನಾಮ ಹಲವು

ಇನ್ನು ಕೋಲಾರ ಶಿವಾರಪಟ್ಟಣದ ಮುಸ್ಲಿಂ ಶಿಲ್ಪಿಗಳ  ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ವ್ಯಕ್ತಿಯಾದರು ತಾವು ಮಾಡ್ತಿರುವ ಕಲೆಯ ಕೆಲಸದ ಬಗ್ಗೆ ಹೆಮ್ಮೆ ಇದೆ ಎಂದಿರುವ ಮುನಾವರ್, ದೇವರೆಂದರೆ ಎಲ್ಲರು ಒಂದೇ, ನಾಮ ಹಲವು, ಯಾರೂ ಯಾವ ದೇವರನ್ನು ನೋಡಿಲ್ಲ, ಯಾರದ್ದೊ ಪ್ರಚೋದನೆಯಿಂದ ಮುಸ್ಲಿಂ ವ್ಯಾಪಾರಿಗಳ ಮೇಲಿನ ನಿರ್ಬಂದ ಸರಿಯಲ್ಲ, ಎಲ್ಲರು ಈ ಹಿಂದಿನಂತೆ ಒಟ್ಟಿಗೆ ಸೌಹಾರ್ಧತೆಯಿಂದ ಇರುವ ವಾತಾವರಣ ನಿರ್ಮಾಣ ಆಗಬೇಕು ಎಂದು ಮನವಿ ಮಾಡಿದ್ದಾರೆ

ಶಿಲ್ಪಿಗಳಿಗೆ ಶುರುವಾಯ್ತು ಆತಂಕ

ಅನ್ಯ ಧರ್ಮದ ವ್ಯಕ್ತಿಗಳು ಕೆತ್ತನೆ ಮಾಡಿರುವ ಮೂರ್ತಿಗಳು ಪೂಜೆಗೆ ಬಳಸಬೇಡಿ ಎಂದು ಮಂಡ್ಯದ ಮೇಲುಕೋಟೆ ಸ್ವಾಮೀಜಿಗಳು ನೀಡಿರುವ ಹೇಳಿಕೆಯಿಂದ, ಶಿವಾರಪಟ್ಟಣ ಗ್ರಾಮದಲ್ಲಿ ಶಿಲ್ಪ ಕಲಾ ಕೆತ್ತನೆಕಾರರಿಗೆ ಹೊಸದೊಂದು ಆತಂಕ ಶುರುವಾಗಿದೆ, ಸಯ್ಯದ್ ಮುನಾವರ್,  ವಿಗ್ರಹ ಕೆತ್ತನೆ ಮಾಡುವ ದೃಶ್ಯಗಳು ಲಭ್ಯವಿದ್ದರು, ಇದೀಗ ಗ್ರಾಮದ ಹಿಂದೂ ಶಿಲ್ಪಿಗಳು, ಮುಸ್ಲಿಂ ವ್ಯಕ್ತಿಗಳು ಹಿಂದೂ ದೇವರ ವಿಗ್ರಹಗಳ ಕೆತ್ತನೆ ಮಾಡುತ್ತಾರೆ ಎಂಬುದು ಸುಳ್ಳು, ಕುಮಾರಸ್ವಾಮಿ ಸೇರಿದಂತೆ ಕೆಲ ಮಾದ್ಯಮಗಳು ಹೀಗೆ ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿರುವುದು ಸುಳ್ಳು ಎಂದಿದ್ದಾರೆ.

ಅವರು ಶಿಲ್ಪಿಗಳಲ್ಲ, ಕೂಲಿಗಳು

ಮುಸ್ಲಿಮರು ಕೆತ್ತನೆ ಮಾಡಲ್ಲ,  ಬದಲಾಗಿ ಶಿಲ್ಪಿಗಳ ಬಳಿ ಕೂಲಿ ಮಾಡುತ್ತಾರೆ,  ಅಷ್ಟೆ ಅನ್ನೋದು ಶಿವಾರಪಟ್ಟಣ ಗ್ರಾಮದ ಶಿಲ್ಪಿಗಳ ಮಾತಾಗಿದೆ,  ಅಮರ ಶಿಲ್ಪಿ ಜಕ್ಕಣಾ ಚಾರಿಗಳ ವಂಶಸ್ಥರು ಸಹ ಇಲ್ಲಿ ಶಿಲ್ಪಕಲೆ ಮಾಡುತ್ತಿದ್ದು, ಶಿಲ್ಪಿಗಳ ಗ್ರಾಮ ಎಂದೆ ಶಿವಾರಪಟ್ಟಣವನ್ನ ಕರೆಯಲಾಗುತ್ತೆ. ಗಣೇಶ, ಆಂಜನೇಯ, ಶಕ್ತಿದೇವತೆ, ನಾಗರಕಲ್ಲುಗಳನ್ನು ಸೇರಿದಂತೆ ಬೇರೆ ಬೇರೆ ದೇವರುಗಳು ಮಹಾನ್ ವ್ಯಕ್ತಿಗಳ ವಿಗ್ರಹಗನ್ನ ಇಲ್ಲಿ ಕೆತ್ತನೆ ಮಾಡಲಾಗುತ್ತೆ. ಆದ್ರೆ ಇಲ್ಲಿ 30 ಮುಸ್ಲಿಂ ಕುಟುಂಬಗಳು ಹಿಂದೂ ದೇವರುಗಳ ವಿಗ್ರಹಳ ಕೆತ್ತನೆ ಮಾಡುತ್ತಿದ್ದಾರೆ ಎಂಬುದು ಸುಳ್ಳು ಎಂದಿದ್ದಾರೆ.

ಮುಸ್ಲಿಂ ಮುಖಂಡರು ಹೇಳುವುದೇನು?

ನಮ್ಮ ಬಳಿ ಕಲ್ಲು ಒಡೆಯೋದು, ಇಲ್ಲಿ ಕೆಲಸ ಮಾಡುತ್ತಿದ್ದಾರೆ ಅದು ಬಿಟ್ಟು ಕೆತ್ತನೆ ಮಾಡುವುದು ಸುಳ್ಳು, ಎಂದು ನರೇಂದ್ರ ಶಿಲ್ಪಿ ಆಚಾರಿ ಮಾತು. ಇನ್ನೂ ಒಬ್ಬರೋ ಇಬ್ಬರು ಕೂಲಿ ಕೆಲಸ ಮಾಡುವುದು, ಪೀಠದ ಕೆಲಸ ಮಾಡುತ್ತಾರೆ, ಒಬ್ಬ ಮಾತ್ರ ಮತ್ತೊಬ್ಬರ ಬಳಿ ವಿಗ್ರಹ ಕೆತ್ತನೆ ಮಾಡುತ್ತಿದ್ದಾನೆ, ಆದರೆ ನಮ್ಮ ಇಸ್ಲಾಂ ಧರ್ಮದಲ್ಲಿ ವಿಗ್ರಹ ಕೆತ್ತನೆ ಮಾಡುವುದು ಇಲ್ಲ, 30 ಕುಟುಂಬ ವಿಗ್ರಹ ಕೆತ್ತನೆ ಮಾಡುವುದು ಸುಳ್ಳು ಎಂದು ಗ್ರಾಮದ ದರ್ಗಾ ಅಧ್ಯಕ್ಷ ಸಯ್ಯದ್ ಆಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Chamarajanagar: ಅಪ್ಪಟ ಗಣಪನ ಭಕ್ತ ರೆಹಮಾನ್; ಗಣೇಶನ ಗುಡಿ ಕಟ್ಟಿ ಅರ್ಚಕರನ್ನು ನೇಮಿಸಿದ

ನ್ಯೂಸ್ 18 ಜೊತೆಗೆ ದೂರವಾಣಿ ಮೂಲಕ ಮಾತನಾಡಿದ, ನರೇಂದ್ರ ಶಿಲ್ಪಿಗಳು,  ಸಯ್ಯದ್ ಮುನಾವರ್ ಅವರು ನಮ್ಮ ಬಳಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ, ಇಷ್ಟಕ್ಕೆಲ್ಲಾ ಕಾರಣ,  ರಾಜ್ಯದಲ್ಲಿ ಹೊಸದಾಗಿ ಸದ್ದು ಮಾಡುತ್ತಿರುವ,  ವಿಗ್ರಹ ವಿವಾದದಿಂದ, ಗ್ರಾಮದಲ್ಲಿನ ವಿಗ್ರಹಗಳನ್ನ ಯಾರು  ಕೊಳ್ಳೋದಿಲ್ಲ ಎನ್ನುವ ಆತಂಕಕ್ಕೆ ಸಿಲುಕಿರುವ ಶಿಲ್ಪಿಗಳು ಪಜೀತಿಗೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Annappa Achari
First published: