• Home
  • »
  • News
  • »
  • state
  • »
  • Missing Boy: ಹೆತ್ತ ಮಗನನ್ನೇ ಮಾರಿದ ಮಹಾತಾಯಿ! 4 ವರ್ಷದ ಬಳಿಕ ತಂದೆ ಕೈ ಸೇರಿತು ಕಂದ!

Missing Boy: ಹೆತ್ತ ಮಗನನ್ನೇ ಮಾರಿದ ಮಹಾತಾಯಿ! 4 ವರ್ಷದ ಬಳಿಕ ತಂದೆ ಕೈ ಸೇರಿತು ಕಂದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆತ್ತ ತಾಯಿಗೆ ಮಗ ಬೇಡವಾಗಿದ್ದಾನೆ ಹೀಗಾಗಿ ಆಕೆಯೇ ಮಾರಾಟ ಮಾಡಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. 4 ವರ್ಷದ ಬಳಿಕ ಇದೀಗ ಮಗ ತಂದೆಯ ಕೈ ಸೇರಿದ್ದಾನೆ.

  • Share this:

ಆನೇಕಲ್ (ನ.15): ತಾಯಿ ಮಕ್ಕಳಿಗಾಗಿ ಸರ್ವಸ್ವವನ್ನು ಮುಡಿಪಾಗಿಡುತ್ತಾಳೆ. ಹೀಗಾಗಿ ತಾಯಿಯನ್ನು (Mother) ದೇವರ ಸ್ಥಾನದಲ್ಲಿಟ್ಟು ಪೂಜೆ (Pooje) ಮಾಡುವ ಸಂಸ್ಕೃತಿ (Culture) ನಮ್ಮಲಿದೆ. ಆದ್ರೆ  ಇಲ್ಲೊಬ್ಬ ಮಹಾತಾಯಿ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾಳೆ ಎಂದು ಮಗುವಿನ ತಂದೆಯೇ ಆರೋಪಿಸಿದ್ದಾರೆ.  ಬಾಲಮಣಿ (Balamani) ಮಗನಿಗಾಗಿ (Son) ಹುಡುಕುತ್ತಿದ್ರು. ಕೊನೆಗೂ ಮಗ ತಂದೆಯ (Father) ಮಡಿಲು ಸೇರಿದ್ದಾನೆ.


2012ರಲ್ಲೇ ಬೇರ್ಪಟ್ಟಿದ್ದ ದಂಪತಿ


ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿದೆ. ಈ ಸಂಸಾರದ ಗಲಾಟೆಯಲ್ಲಿ ಈ ಗಾದೆ ಮಾತು ಸತ್ಯವಾಗ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ನಿವಾಸಿ ಬಾಲಮಣಿ ಹಾಗೂ ಮಮತಾ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ರು. ಈ ದಂಪತಿಗೆ ಇಬ್ಬರು ಮಕ್ಕಳಿದ್ರು. 2ನೇ ಗಂಡು ಮಗುವಿಗೆ ಒಂದೂವರೆ ವರ್ಷವಿದ್ದಾಗ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿದೆ.


A mother who sold her son The incident happened at Anekal pvn
ಸಾಂದರ್ಭಿಕ ಚಿತ್ರ


ಮಗನನ್ನು ಮಾರಿದ ಮಹಾತಾಯಿ


ಹೆತ್ತ ತಾಯಿಗೆ ಮಗ ಬೇಡವಾಗಿದ್ದಾನೆ ಹೀಗಾಗಿ ಆಕೆಯೇ ಮಾರಾಟ ಮಾಡಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. 4 ವರ್ಷದ ಬಳಿಕ ಇದೀಗ ಮಗ ತಂದೆಯ ಕೈ ಸೇರಿದ್ದಾನೆ. ಈ ಬಗ್ಗೆ ಅತ್ತಿಬೆಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.


2018ರಲ್ಲೇ ಬೇರ್ಪಟ್ಟಿದ್ದ ದಂಪತಿ


2012 ರಲ್ಲಿ ಬಾಲಮಣಿ ಹಾಗೂ ಮಮತಾ ಮದುವೆಯಾಗಿದ್ದರು. ಮೊದಲು ಹುಟ್ಟಿದ್ದ ಹೆಣ್ಣು ಮಗು ವಿಕಲಚೇತನ ತದನಂತರ ಗಂಡು ಮಗು ಜನಿಸಿದೆ. ಗಂಡು ಮಗುವಿಗೆ ಒಂದೂವರೆ ವರ್ಷವಿದ್ದಾಗ ಗಂಡ- ಹೆಂಡತಿ ನಡುವೆ ಗಲಾಟೆಯಾಗಿತ್ತು. ಬಳಿಕ ಮಕ್ಕಳೊಂದಿಗೆ 2018ರಲ್ಲಿ ಮಮತಾ  ತವರು ಮನೆ ಸೇರಿದ್ದರು.


ಗಂಡನ ವಿರುದ್ಧವೇ ಪೊಲೀಸರಿಗೆ ದೂರು


ಒಂದೂವರೆ ತಿಂಗಳ ಹಿಂದೆ ಹೆಂಡತಿ ಮಕ್ಕಳನ್ನು ನೋಡಲು ಬಾಲಮಣಿ ಹೋಗಿದ್ದಾರೆ. ಈ ವೇಳೆ ಗಂಡು ಮಗು ಮನೆಯಲ್ಲಿ ಇರಲಿಲ್ಲ. ಹೆಂಡತಿಯನ್ನು ಪ್ರಶ್ನೆ ಮಾಡಿದಾಗ ಮಗು ಹಾಸ್ಟೆಲ್ ನಲ್ಲಿ ಇರುವುದಾಗಿ ಹೇಳಿದ್ದಾರೆ. ಆದರೆ ಮಗು ಎಲ್ಲಿದೆ ಎನ್ನುವುದನ್ನು ಮಮತಾ ತೋರಿಸುತ್ತಿರಲಿಲ್ಲ. ಪದೇ ಪದೇ ಮಗುವನ್ನು ಪತಿ ಕೇಳಿದಾಗ ಗಂಡನ ವಿರುದ್ಧವೇ ಪೊಲೀಸರಿಗೆ ಮಮತಾ ದೂರು ನೀಡಿದ್ದಾರೆ.


ಬೆಂಗಳೂರಿನಿಂದ ಜಯನಗರಕ್ಕೆ ಬಾಲಮಣಿ ಶಿಫ್ಟ್


ತಮಿಳುನಾಡಿನ ಹೊಸೂರು ಸಮೀಪದ ಸಿಪ್ ಕಾಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಮತಾ, ಇದೇ ಸಂದರ್ಭದಲ್ಲಿ ವಿಕಲಚೇತನ ಮಗುವನ್ನು ತಂದೆಯ ಬಳಿ ಬಿಟ್ಟು ಹೊರಟು ಹೋಗಿದ್ದಾರೆ. ಮಮತಾ ಹೊರಟು ಹೋಗುತ್ತಿದ್ದಂತೆ ಮಗುವಿನ ಜೊತೆ ಬೆಂಗಳೂರಿನಿಂದ ಜಯನಗರಕ್ಕೆ ಬಾಲಮಣಿ ಶಿಫ್ಟ್​ ಆಗಿದ್ದಾರೆ.


ಮಗನಿಗಾಗಿ ತಮಿಳುನಾಡಿನಲ್ಲಿ ಹುಡುಕಾಟ


ಬೆಂಗಳೂರಿಗೆ ಬಂದ ನಂತರ ಬಾಲಮಣಿ ಮಗನಿಗಾಗಿ ತಮಿಳುನಾಡಿನಲ್ಲಿ ಹುಡುಕಾಟ ನಡೆಸಿದ್ರು. ಹುಡುಕಾಡಿದರು ಮಗು ಪತ್ತೆ ಆಗಿರಲಿಲ್ಲ. ಇದೇ ಸಂದರ್ಭದಲ್ಲಿ ಬಾಲಮಣಿ ಅವರು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಾರ್ಟಿಯವರಿಗೆ ವಿಚಾರ ತಿಳಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಭಾಸ್ಕರ್ ರಾವ್ ಅವರು  ಅತ್ತಿಬೆಲೆ ಪೊಲೀಸ್ರಿಗೆ ಮಾಹಿತಿ ನೀಡಿದ್ದು, ಮಗುವನ್ನು ಹುಡುಕಿಕೊಂಡುವಂತೆ ಹೇಳಿದ್ದಾರೆ.


ಇದನ್ನೂ ಓದಿ:  Murder: ಮರ್ಮಾಂಗಕ್ಕೆ ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ; ಕೊಲೆಗೆ ಬೆಚ್ಚಿಬಿದ್ದ ಕಲಬುರಗಿ


ತಂದೆ ಕೈ ಸೇರಿದ ಕಂದ


ಅತ್ತಿಬೆಲೆ ಪೊಲೀಸರು ಮಗುವು ತಮಿಳುನಾಡಿನ ಈರೋಡ್ ಬಳಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ತಾಯಿಯಿಂದ ಬೇರ್ಪಟ್ಟ ಮಗು ಐದಾರು ಕೈ ಬದಲಿಸಿ ಕುಟುಂಬವೊಂದರ ಬಳಿ ಸೇರಿತ್ತು. ಸದ್ಯ ಅತ್ತಿಬೆಲೆ ಪೊಲೀಸರ ನೆರವಿನಿಂದ ಮಗು ತಂದೆ ಕೈ ಸೇರಿದೆ. ನಾಲ್ಕೂವರೆ ವರ್ಷದ ಬಳಿಕ ಮಗುವನ್ನು ನೋಡಿ ತಂದೆ ಬಾಲಮಣಿ ಸಂತಸ ವ್ಯಕ್ತಪಡಿಸಿದ್ದಾರೆ.

Published by:ಪಾವನ ಎಚ್ ಎಸ್
First published: