ಹೆತ್ತ ತಾಯಿಯನ್ನೇ ಬೀದಿಗೆ ತಳ್ಳಿದ ಮಗ ; ಪಾಪಿ ಮಗನ ನೆನೆದು ಕಣ್ಣೀರು ಹಾಕುತ್ತಿರುವ ತಾಯಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ, ಕೆಂಭಾವಿಯ ಶಿವಾಜಿನಗರದ ಹೊನ್ಮಮ್ಮಳನ್ನು ಆಕೆಯ ಮಗ ಸಿದ್ದಪ್ಪ ಎಪಿಎಂಸಿ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ.

G Hareeshkumar | news18-kannada
Updated:December 12, 2019, 4:22 PM IST
ಹೆತ್ತ ತಾಯಿಯನ್ನೇ ಬೀದಿಗೆ ತಳ್ಳಿದ ಮಗ ; ಪಾಪಿ ಮಗನ ನೆನೆದು ಕಣ್ಣೀರು ಹಾಕುತ್ತಿರುವ ತಾಯಿ
ವಯೋವೃದ್ದ ಮಹಿಳೆ
  • Share this:
ಯಾದಗಿರಿ(ಡಿ.12) : ಹೆತ್ತ ತಾಯಿಯನ್ನು ದೇವರೆನ್ನುತ್ತಾರೆ ಆದರೆ, ಇಲ್ಲೊಬ್ಬ ಪಾಪಿ ಮಗನೊಬ್ಬ ಹೆತ್ತಮ್ಮಳನ್ನೆ ಬೀದಿಯಲ್ಲಿ ತಳ್ಳಿದ್ದಾನೆ. ಹೀಗಾಗಿ ಹೊನ್ಮಮ್ಮ ಎನ್ನುವ ವಯೋವೃದ್ದ ಮಹಿಳೆ ಕೊರೆಯುವ ಚಳಿಯಲ್ಲಿಯೇ ಕಣ್ಣೀರು ಹಾಕುತ್ತಾ ನೋವಿನ ಜೀವನ ಸಾಗಿಸುತ್ತಿದ್ದಾಳೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ, ಕೆಂಭಾವಿಯ ಶಿವಾಜಿನಗರದ ಹೊನ್ಮಮ್ಮಳನ್ನು ಆಕೆಯ ಮಗ ಸಿದ್ದಪ್ಪ ಎಪಿಎಂಸಿ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ. ಕೆಂಭಾವಿಯ ಎಪಿಎಂಸಿಯಲ್ಲಿ ನಾಲ್ಕು ತಿಂಗಳಿನಿಂದ ಹೊನ್ನಮ್ಮ ಆಶ್ರಯ ಪಡೆದಿದ್ದಾಳೆ.

yadagiri
ವಯೋವೃದ್ಧ ಮಹಿಳೆಯನ್ನು ಆರೈಕೆ ಮಾಡುತ್ತಿರುವ ರೈತರು


ಕಳೆದ ನಾಲ್ಕು ತಿಂಗಳಿನಿಂದ ವೃದ್ಧೆ ಮೈಕೊರೆಯುವ ಚಳಿಯಲ್ಲಿ ವಾಸ ಮಾಡುತ್ತಿದ್ದಾಳೆ. ನಿತ್ಯವು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ಮಕ್ಕಳಿಗಾಗಿ ತಾಯಿ ಹಂಬಲಿಸುತ್ತಿದ್ದು ಆದರೆ, ಮಗ ಮಾತ್ರ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಎಪಿಎಂಸಿ ಆವರಣದಲ್ಲಿ ಸುತ್ತಲಿನ ರೈತರು ಉಪಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ :  ಒಂದೂವರೆ ತಿಂಗಳಿಂದ ಹಳ್ಳದ ಗಲೀಜು ನೀರು ಕುಡಿದು ಬದುಕುತ್ತಿರುವ ಹೆಬ್ಬಾಳ ಗ್ರಾಮಸ್ಥರು; ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

ಹೆತ್ತಮ್ಮಳನ್ನು ಮನೆಯಲ್ಲಿ ಇಟ್ಟುಕೊಂಡು ತಾಯಿಯ ಅರೈಕೆ ಮಾಡಬೇಕಾದ ಮಗ ಮಾನವೀಯತೆ ಮರೆತು ಬೀದಿಗೆ ತಳ್ಳಿದ್ದಾನೆ.

(ವರದಿ : ನಾಗಪ್ಪ ಮಾಲಿಪಾಟೀಲ) 
Published by: G Hareeshkumar
First published: December 12, 2019, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading