ಕುಡಿದ ಅಮಲಿನಲ್ಲಿ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ತಾಯಿ; ಕಾರವಾರದಲ್ಲೊಂದು ಅಮಾನವೀಯ ಘಟನೆ

news18
Updated:September 5, 2018, 5:28 PM IST
ಕುಡಿದ ಅಮಲಿನಲ್ಲಿ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ತಾಯಿ; ಕಾರವಾರದಲ್ಲೊಂದು ಅಮಾನವೀಯ ಘಟನೆ
news18
Updated: September 5, 2018, 5:28 PM IST
-ಮಂಜುನಾಥ ಗಾಣಿಗ, ನ್ಯೂಸ್ 18 ಕನ್ನಡ

ಕಾರವಾರ, (ಸೆ.05): ಕುಡಿದ ಅಮಲಿನಲ್ಲಿ ತಾಯಿಯೊಬ್ಬಳು ತನ್ನ ಮಗುವಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕಾರವಾರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದೆ.

ನಗರದ ಪಿಂಗೆ ರಸ್ತೆಯಲ್ಲಿ ವಾಸವಾಗಿರುವ ರೇಣುಕಾ ಹಲ್ಲೆ ಮಾಡಿದ ಮಹಿಳೆ. ತನ್ನ 12 ವರ್ಷದ ಐಶ್ವರ್ಯ ಎನ್ನುವ ಮಗಳ ಮೇಲೆ ಕಳೆದ ಎರಡು ದಿನದ ಹಿಂದೆ ರಾತ್ರಿ ವೇಳೆ ಕಾಲಿನಿಂದ ಒದ್ದು ಮನ ಬಂದಂತೆ ರೇಣುಕಾ ಹಲ್ಲೆ ಮಾಡಿದ್ದಳು. ಬಳಿಕ ಬಾಲಕಿ ಪಕ್ಕದ ಮನೆಗೆ ಬಂದು ರಕ್ಷಣೆಗೆ ಗೋಗರೆದಿದ್ದಳಾದರೂ, ಅಲ್ಲಿಗೂ ಬಂದು ಹಲ್ಲೆ ನಡೆಸಿದ್ದಳು. ಇದನ್ನು ಪಕ್ಕದ ಮನೆಯವರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೆ ವಿಡಿಯೋ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತಾಯಿಯ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ರೇಣುಕಾ, ತಾನು ಬಾಡಿಗೆ ಮನೆಯಲ್ಲಿದ್ದು ಎರಡು ತಿಂಗಳಿನಿಂದ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಇದರಿಂದ ಮನೆ ಬಿಡುವಂತೆ ಹೇಳುತ್ತಿದ್ದಾರೆ. ಎರಡು ದಿನ ಸಮಯ ಕೇಳಿದ್ದೇನೆ. ಜತೆಗೆ ನನ್ನ ಮಗಳು ಕದ್ದಿದ್ದಾಳೆ ಎಂದು ದೂರಿದ ಹಿನ್ನೆಲೆಯಲ್ಲಿ ಸಿಟ್ಟಾಗಿ ಹೊಡೆದಿದ್ದು ನನ್ನ ತಪ್ಪಾಗಿದೆ ಎಂದು ಹೇಳಿದ್ದಾಳೆ. ಇನ್ನು ರೇಣುಕಾ ಪತಿಯನ್ನು ಬಿಟ್ಟಿದ್ದು, ಹಿಂದಿನಿಂದಲೂ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾಳೆ ಎನ್ನುವ ದೂರನ್ನು ಸ್ಥಳೀಯರು ಹೇಳಿದ್ದು, ಮಗಳು ಸಹ ಸದ್ಯ ಮನೆಯಲ್ಲಿಯೇ ಇದ್ದಾಳೆ.

ಘಟನೆ ಸಂಬಂಧ ಕಾರವಾರ ನಗರ ಠಾಣಾ ಪೊಲೀಸರು ಮಹಿಳೆಯ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇನ್ನೊಂದೆಡೆ ತನ್ನದು ತಪ್ಪಿಲ್ಲ ತಾನು ನನ್ನ ಮಗಳಿಗೆ ಹೊಡೆದಿದ್ದೇನೆ ಎಂದು ಹೊಡೆದಿರುವುದಕ್ಕೆ ಸಮರ್ಥಿಸಿಕೊಂಡಿದ್ದಾಳೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...