ಮಗುವಿಗೆ ಜನ್ಮ ನೀಡಿದ ತಾಯಿ ಕೋಮಾ ಸ್ಥಿತಿಯಲ್ಲಿ; ವೈದ್ಯರ ನಿರ್ಲಕ್ಷ್ಯ ಎಂದು ಪೋಷಕರ ಆರೋಪ

ಅನ್ನಪೂರ್ಣ ಹೆರಿಗೆಗೆ ಬಂದಾಗ ಬದುಕುಳಿಯುವ ಸಾಧ್ಯತೆ ತೀರಾ‌ ಕ್ಷೀಣಿಸಿತ್ತು.  ಕುಟುಂಬಸ್ಥರಿಗೆ ವಿಷಯ ತಿಳಿಸಿ, ಅವರ ಪರವಾನಗಿ ನಂತರವೇ ಆಪರೇಷನ್ ಮಾಡಲಾಗಿದೆ. ಈ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ದಾನರಡ್ಡಿ ಸ್ಪಷ್ಟಪಡಿಸಿದ್ಧಾರೆ.

news18-kannada
Updated:December 3, 2019, 11:36 AM IST
ಮಗುವಿಗೆ ಜನ್ಮ ನೀಡಿದ ತಾಯಿ ಕೋಮಾ ಸ್ಥಿತಿಯಲ್ಲಿ; ವೈದ್ಯರ ನಿರ್ಲಕ್ಷ್ಯ ಎಂದು ಪೋಷಕರ ಆರೋಪ
ಕೋಮಾ ಸ್ಥಿತಿಯಲ್ಲಿರುವ ಬಾಣಂತಿ
  • Share this:
ಕೊಪ್ಪಳ(ಡಿ.03): ಕೊಪ್ಪಳದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಕೋಮಾ ಸ್ಥಿತಿ ತಲುಪಿದ್ದಾಳೆ. ಕಳೆದ ಮೂರು ತಿಂಗಳಿಂದ ಪ್ರಜ್ಞೆ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಸುಗೂಸು ತಾಯಿ ಇದ್ದರೂ ತಬ್ಬಲಿಯಾಗಿದೆ. 

ಕೊಪ್ಪಳ ತಾಲೂಕಿನ ಲಾಚನಕೇರಿ ಗ್ರಾಮದ ಅನ್ನಪೂರ್ಣ ಕೋಮಾ ಸ್ಥಿತಿಯಲ್ಲಿರುವ ಬಾಣಂತಿ. ಮೊನ್ನೆ ತಾನೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಗರ್ಭಿಣಿಯೊಬ್ಬಳು ಸಾವನ್ನಪ್ಪಿದ್ದಳು. ಈ ಘಟನೆ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಹೆರಿಗೆಗಾಗಿ ಬಂದ ಮಹಿಳೆಯನ್ನು ವೈದ್ಯರು ಕೋಮಾ ಸ್ಥಿತಿಗೆ ತಲುಪುವ ಹಾಗೆ ಮಾಡಿದರಾ ಎಂಬ ಅನುಮಾನ ಮೂಡಿದೆ. ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿದ ವೈದ್ಯರ ಎಡವಟ್ಟು ಎಂದು ಬಾಣಂತಿಯ ಪೋಷಕರು ಆರೋಪ ಮಾಡುತ್ತಿದ್ದಾರೆ. ವೈದ್ಯ ಶಿವಗಂಗಾ ವಿರುದ್ಧ ಅನ್ನಪೂರ್ಣ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿದ್ರಿಸುತ್ತಿದ್ದ ಗಂಡ, ಹೆಂಡತಿ, ಮಗುವಿನ ಬರ್ಬರ ಹತ್ಯೆ; ಶವದ ಜೊತೆ 3 ಗಂಟೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನ ಬಂಧನ

ಗಂಡು ಮಗುವಿಗೆ ಜನ್ಮ ನೀಡಿದ್ದರೂ ಮುದ್ದಾಡದ ಸ್ಥಿತಿಯಲ್ಲಿ ತಾಯಿ ಇದ್ಧಾಳೆ. ತಾಯಿ ಇದ್ದರೂ ಹಸುಗೂಸು ತಬ್ಬಲಿಯಂತಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಗೆ ಬಾಣಂತಿಯ ಪೋಷಕರು ದೂರು ಸಲ್ಲಿಸಿದ್ಧಾರೆ.

ಕೊಪ್ಪಳ ಜಿಲ್ಲಾಸ್ಪತ್ರೆಗೆ  ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ವೈದ್ಯರ ನಿರ್ಲಕ್ಷ್ಯ‌ಕ್ಕೆ  ಬಾಣಂತಿ ಕೋಮಾ ಸ್ಥಿತಿಗೆ ತಲುಪಿದ್ದಾಳೆ ಎಂದು ಆಕೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ನಪೂರ್ಣ ಹೆರಿಗೆಗೆ ಬಂದಾಗ ಬದುಕುಳಿಯುವ ಸಾಧ್ಯತೆ ತೀರಾ‌ ಕ್ಷೀಣಿಸಿತ್ತು.  ಕುಟುಂಬಸ್ಥರಿಗೆ ವಿಷಯ ತಿಳಿಸಿ, ಅವರ ಪರವಾನಗಿ ನಂತರವೇ ಆಪರೇಷನ್ ಮಾಡಲಾಗಿದೆ. ಈ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ದಾನರಡ್ಡಿ ಸ್ಪಷ್ಟಪಡಿಸಿದ್ಧಾರೆ.
Loading...

ಮಹಿಳೆಯರ ರಕ್ಷಣೆಗಾಗಿ ಅಸ್ಥಿತ್ವಕ್ಕೆ ಬಂದ ನಿರ್ಭಯಾ ಹೆಲ್ಪ್ ಲೈನ್ ಅಸ್ಥಿತ್ವದಲ್ಲೇ ಇಲ್ಲ, ಇನ್ನೂ ಸುರಕ್ಷಾ ಆ್ಯಪ್​ ಎಷ್ಟು ದಿನ?
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...