ಆಗಸದಲ್ಲಿ ಜನ್ಮತಾಳಿದ ಮಗು; ಬೆಂಗಳೂರಿನ ಕೆಂಪೇಗೌಡ ಏರ್​​​ಪೋರ್ಟ್​​​ನಲ್ಲೊಂದು ಅಪರೂಪದ ಘಟನೆ

ಇಂಡಿಗೋ  ಸಂಸ್ಥೆ  ವಿಮಾನದಲ್ಲಿ  ಜನಸಿದ ನವಜಾತ ಗಂಡು ಮಗುವಿಗೆ ಜೀವನ ಪರ್ಯಂತ  ಉಚಿತ ಟಿಕೆಟ್​​ನ್ನು ಕೊಡುಗೆಯಾಗಿ ನೀಡಲಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸಂಸ್ಥೆ ಖಚಿತ ಪಡಿಸಬೇಕಿದೆ.

ವಿಮಾನದಲ್ಲಿ ಜನಿಸಿದ ಮಗು

ವಿಮಾನದಲ್ಲಿ ಜನಿಸಿದ ಮಗು

  • Share this:
ದೇವನಹಳ್ಳಿ(ಅ.08): ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಹೊರಟ ಇಂಡಿಗೋ  ವಿಮಾನಯಾನ  ಸಂಸ್ಥೆಯ ಫ್ಲೈಟ್​ ನಂಬರ್ 6E 122 ವಿಮಾನದಲ್ಲಿ ಗಂಡು  ಮಗುವಿನ ಜನನವಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿರುವ ವೇಳೆ ಮಹಿಳೆಗೆ ಆಗಸದಲ್ಲಿ ಪ್ರಸವ ವೇದನೆ ಶುರುವಾಗಿದೆ. ವಿಮಾನ ಟೇಕ್ ಆಫ್ ಆಗಿ ಬಾನಂಗಳದಲ್ಲಿ ಹಾರಾಡುತ್ತಿರುವಾಗ ಹೆರಿಗೆ ನೋವು ಶುರುವಾಗಿದೆ. ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಇನ್ನೂ ಹೆಚ್ಚಾದಾಗ ವಿಮಾನಯಾನ ಸಿಬ್ಬಂದಿ ವಿಮಾನದಲ್ಲೇ ಹೆರಿಗೆ ಮಾಡಿಸಿರುವ ಘಟನೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ. ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು ಇನ್ನೂ ತಡವಾಗುತ್ತದೆ ಎಂದ ಅರಿತ ವಿಮಾನಯಾನ ಸಿಬ್ಬಂದಿ ಕೂಡಲೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

ಹೆರಿಗೆ ನೋವು ತಡೆಯಲಾರದೆ ನೋವಿನಿಂದ ಮಹಿಳೆ ಬಳಲುತ್ತಿರುವುದನ್ನ ಗಮನಿಸಿದ ವಿಮಾನಯಾನ ಸಿಬ್ಬಂದಿ ಆಗಸದಲ್ಲೆ ಮಹಿಳೆಗೆ ಹೆರಿಗೆ ಮಾಡಿಸಿದ್ದು ಗಂಡು ಮಗು ಜನನ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 7-40 ಕ್ಕೆ  ವಿಮಾನ ಲ್ಯಾಂಡ್  ಆಗಿದೆ.  ತಾಯಿ ಮತ್ತು  ಮಗು ಆರೋಗ್ಯ ವಾಗಿದ್ಧು ಆಸ್ಪತ್ರೆಗೆ  ದಾಖಲು ಮಾಡಲಾಗಿದೆ. ಇಂಡಿಗೋ  ಸಂಸ್ಥೆ ಸಿಬ್ಬಂದಿ ಶ್ರಮದಿಂದ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆಯಾಗದೆ ವಿಮಾನದಲ್ಲಿ ಸುಸೂತ್ರವಾಗಿ ಹೆರಿಗೆಯಾಗಿದೆ.2 ತಿಂಗಳ ಕಂದಮ್ಮನಿಗೆ ಹಾರ್ಟ್​​ ಆಪರೇಷನ್; ಕೇವಲ 3 ಗಂಟೆಯಲ್ಲಿ ಶಿವಮೊಗ್ಗ-ಬೆಂಗಳೂರು ತಲುಪಿದ ಆ್ಯಂಬುಲೆನ್ಸ್​

ಏರ್ ಪೋರ್ಟ್  ನಲ್ಲಿ ತಾಯಿ ಮತ್ತು  ಮಗುವನ್ನು ಇಂಡಿಗೋ  ಸಂಸ್ಥೆ ಸಿಬ್ಬಂದಿ  ಭವ್ಯ ಸ್ವಾಗತ  ನೀಡಿದ್ದಾರೆ. ಇಂಡಿಗೋ  ಸಂಸ್ಥೆ  ವಿಮಾನದಲ್ಲಿ  ಜನಸಿದ ನವಜಾತ ಗಂಡು ಮಗುವಿಗೆ ಜೀವನ ಪರ್ಯಂತ  ಉಚಿತ ಟಿಕೆಟ್​​ನ್ನು ಕೊಡುಗೆಯಾಗಿ ನೀಡಲಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸಂಸ್ಥೆ ಖಚಿತ ಪಡಿಸಬೇಕಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಯಿ ಮಗುವಿಗೆ ಸ್ವಾಗತ ಕೋರಿ  ಆ್ಯಂಬುಲೆನ್ಸ್​​​ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನಯಾನ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಮಹಿಳೆಯ ಪೋಷಕರೂ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಹಾರಾಡುತ್ತಿದ್ದ ವಿಮಾನದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದು, ಇಬ್ಬರು ಕ್ಷೇಮವಾಗಿದ್ದು ಅಪರೂಪದ ಘಟನೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿನ್ನೆ ರಾತ್ರಿ ಸಾಕ್ಷಿಯಾಗಿದೆ.
Published by:Latha CG
First published: