ತನ್ನ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ನರ್ಸ್: ಆ್ಯಂಟಿಜನ್ ಟೆಸ್ಟ್ ಬಸ್ ನಲ್ಲಿ ಅಮ್ಮನೊಂದಿಗೆ ಕಂದನ ಸಂಚಾರ

ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವವರು ಯಾರು ಇಲ್ಲ. ಮನೆಯಲ್ಲಿ ಮಗು ಬಿಟ್ಟು ಬರುವುದು ಕಷ್ಟವಾದ ಹಿನ್ನೆಲೆ ಮಗುವಿನ ಜೊತೆಯೇ ಟೆಸ್ಟಿಂಗ್ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ನರ್ಸ್ ‌ಹೇಳುತ್ತಾರೆ.

news18-kannada
Updated:August 3, 2020, 8:24 PM IST
ತನ್ನ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ನರ್ಸ್: ಆ್ಯಂಟಿಜನ್ ಟೆಸ್ಟ್ ಬಸ್ ನಲ್ಲಿ ಅಮ್ಮನೊಂದಿಗೆ ಕಂದನ ಸಂಚಾರ
ತಾಯಿಯೊಂದಿಗೆ ಮಗು
  • Share this:
ಧಾರವಾಡ(ಆ.03): ರಾಜ್ಯದಲ್ಲಿ ಕೊರೋನಾ ವೈರಸ್​ನ ಅಟ್ಟಹಾಸ ಮುಂದುವರೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಧಾರವಾಡ ಜಿಲ್ಲೆ ಸಹ ಹೊರತಾಗಿಲ್ಲ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ. ಇದರಿಂದ ಜಿಲ್ಲೆಯ ನಗರ ಪ್ರದೇಶದಲ್ಲಿ  ಆ್ಯಂಟಿಜನ್ ಟೆಸ್ಟ್  ವಾಹನದ ಮೂಲಕ ಕೊರೋನಾ ಟೆಸ್ಟ್​​ ಮಾಡಲಾಗುತ್ತಿದೆ. ಆದರೆ ಈ ಆ್ಯಂಟಿಜನ್ ಟೆಸ್ಟ್ ಮಾಡಲು ನರ್ಸ್ ತನ್ನ ಪುಟ್ಟ ಮಗಳೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾಳೆ.

ಧಾರವಾಡ ನಗರದ ವಿವಿಧ ಬಡಾವಣೆಗಳಲ್ಲಿ ಕೊರೋನಾ ಸೋಂಕಿತರ ಪತ್ತೆಗಾಗಿ ಆ್ಯಂಟಿಜನ್ ಟೆಸ್ಟ್ ಬಸ್ ಸಂಚರಿಸುತ್ತಿದೆ. ಈ ಬಸ್ ನಲ್ಲಿ ಕರ್ತವ್ಯ ಮಾಡುವ ನರ್ಸ್ ತನ್ನೊಂದಿಗೆ ಪುಟ್ಟ‌ ಮಗುವನ್ನು ಕರೆ ತಂದಿದ್ದಾರೆ. ಈ ಆ್ಯಂಟಿಜನ್ ಬಸ್ ಹತ್ತಿರಕ್ಕೆ ಪುಟ್ಟ ಮಕ್ಕಳು ಹೋಗುವುದು ಸಹ ಅಪಾಯ. ಇಂತಹ ಸಂದರ್ಭದಲ್ಲಿ ಬಸ್‌ ನೊಳಗೆ ಎರಡೂವರೆ ವರ್ಷದ ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ನರ್ಸ್.

ಈ ಆ್ಯಂಟಿಜನ್ ಟೆಸ್ಟ್ ಬಸ್ ನಿಂದ  ವ್ಯಕ್ತಿಗೆ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಲಾಗುತ್ತದೆ. ಆದರೆ ಪಾಸಿಟಿವ್ ಬಂದರೆ ಬಸ್ ನಲ್ಲಿನ ಈ ಮಗು ಸಹ ಪ್ರಥಮ ಸಂಪರ್ಕ ಬರುವ ಸಾಧ್ಯತೆ ಇದೆ‌ ಎಂಬುದನ್ನು ಸಹ ಅರಿಯದೇ ತನ್ನೊ ಮಗುವೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದು ಅಪಾಯಕಾರಿ ಸಂಗತಿ.

Karti P Chidambaram: ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂಗೆ ಕೊರೋನಾ ಪಾಸಿಟಿವ್​​

ತಾಯಿ ( ನರ್ಸ್ ) ತನ್ನ‌ಪಾಡಿಗೆ ತಾನು ಆ್ಯಂಟಿಜನ್ ಟೆಸ್ಟ್​​ ಮಾಡುತ್ತಿದ್ದರೆ, ಪುಟ್ಟ ಮಗು ತನ್ನ ಪಾಡಿಗೆ ತಾನು ಬಸ್​​ನಲ್ಲಿ ಆಟವಾಡುತ್ತದೆ. ಏನೂ ಅರಿಯದ ಮಗು ಕೊರೋನಾ ಸೋಂಕಿತರನ್ನು ಪತ್ತೆ ಮಾಡುವ ಆ್ಯಂಟಿಜನ್ ಬಸ್ ನಲ್ಲಿ ಸಂಚಾರ ಮಾಡುತ್ತಿದೆೆ.

ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವವರು ಯಾರು ಇಲ್ಲ. ಮನೆಯಲ್ಲಿ ಮಗು ಬಿಟ್ಟು ಬರುವುದು ಕಷ್ಟವಾದ ಹಿನ್ನೆಲೆ ಮಗುವಿನ ಜೊತೆಯೇ ಟೆಸ್ಟಿಂಗ್ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ನರ್ಸ್ ‌ಹೇಳುತ್ತಾರೆ.
ಸರ್ಕಾರ ಮಾತ್ರ ಕೊರೋನಾ ವೈರಸ್ ತಡೆಗೆ ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್​​​​ ಧರಿಸುವುದು ಹಾಗೂ ಸ್ಯಾನಿಟೈಜರ್ ಬಳಕೆ ಮಾಡುವುದರ ಜೊತೆಗೆ ವೃದ್ಧರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಿಂದ ಆಚೆ ಬರದಂತೆ‌ ನೋಡಿಕೊಳ್ಳಬೇಕೆಂದು ಹೇಳಿದೆ. ಆದರೆ ಕರ್ತವ್ಯಕ್ಕೆ ಅಡ್ಡಿಯಾಗಬಾರದೆಂದು ಮಗುವಿನೊಂದಿಗೆ ಆ್ಯಂಟಿಜನ್‌ ಟೆಸ್ಟ್ ಕರ್ತವ್ಯಕ್ಕೆ‌ ಮಗುವನ್ನು ಕರೆತಂದಿದ್ದು ಮಾತ್ರ ಆತಂಕದ ಸಂಗತಿ.
Published by: Latha CG
First published: August 3, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading