Accident: ಹುಲಿಗೆಮ್ಮನ ಸನ್ನಿಧಿ ಬಳಿಯೇ ಘೋರ ದುರಂತ, ಮಲಗಿದ್ದ ಭಕ್ತರ ಮೇಲೆ ಲಾರಿ ಹರಿದು ಓರ್ವ ಸಾವು

ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ‌ಆದಾಯ ಬರುವ ಹುಲಿಗೆಮ್ಮ ದೇವಸ್ಥಾನದಲ್ಲಿ ಬರುವ ಭಕ್ತರಿಗೆ ಉಳಿಕೊಳ್ಳಲು ಸೂಕ್ತ ವ್ಯವಸ್ಥೆ ‌ಇಲ್ಲ. ಇದರಿಂದಾಗಿ ಈ ಬಡ ಭಕ್ತರು ರಸ್ತೆ ಮೇಲೆ ‌ಮಲಗಿ ಪ್ರಾಣ ಕೊಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ: ಅವರೆಲ್ಲ ದೇವಿ (Devi) ಭಕ್ತರು (Devotees). ಅದರಲ್ಲಿ ದೇವಿ ಆರಾಧನೆ ಮಾಡುವ ಜೋಗತಿಯರು (Jogati). ಅವರು ಯಾವುದೇ ಶುಭ ಕಾರ್ಯ ಮಾಡುವ ಮುನ್ನ ದೇವಿಗೆ ನಮಿಸೋದು ವಾಡಿಕೆ. ಹೀಗೆ ನಮಿಸಲು ಆಗಮಿಸದವರ ಮೇಲೆ ಮಿನಿ ಲಾರಿಯೊಂದು (Mini Lorry) ಏಕಾಏಕಿಯಾಗಿ ಹಾಯ್ದು ಹೋಯಿತು. ಕ್ಷಣ ಮಾತ್ರದಲ್ಲಿ ಬಂದೆರಗಿದ ಅಪಘಾತದಿಂದ (Accident) ತಪ್ಪಿಸಿಕೊಳ್ಳಲು ಕೆಲವರು ಓಡಿದರು. ಅದರಲ್ಲಿ ವೃದ್ದರಿಗೆ ಓಡಲು ಆಗಲಿಲ್ಲ. ಇದರಿಂದ ಸ್ಥಳದಲ್ಲಿ ಒಬ್ಬರ ಸಾವಾಯಿತು. ಮೂರು ಜನರಿಗೆ ಗಾಯವಾಗಿ ಕೊಪ್ಪಳ (Koppal) ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಗಾಯಾಳುಗಳು ಮುಂದಿನ ಬದುಕು ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಹುಲಿಗೆಮ್ಮನ ಸನ್ನಿಧಿ ಬಳಿ ಅಪಘಾತ

ಕೊಪ್ಪಳ ಜಿಲ್ಲೆ ಭಾನಾಪೂರ ಬಳಿ ಮೊನ್ನೆಯಷ್ಟೇ ಭೀಕರ ರಸ್ತೆ ಅಪಘಾತ ನಡೆದಿತ್ತು. ಘಟನೆಯಲ್ಲಿ ಕುಕನೂರು ತಾಲೂಕು ಬಿನ್ನಾಳ ಗ್ರಾಮದ ಕೊಪ್ಪದ ಕುಟುಂಬದ 5 ಜನ ಮೃತಪಟ್ಟಿದ್ದರು. ಘಟನೆ ನಡೆದ ಬರೋಬ್ಬರಿ 24 ಗಂಟೆಗೆ ಕೊಪ್ಪಳದಲ್ಲಿ ಅಂಥದ್ದೇ ಮತ್ತೊಂದು ಅಪಘಾತ ನಡೆದಿದೆ. ರಾಜ್ಯದ ಶಕ್ತಿ ದೇವತೆಗಳ ದೇವಸ್ಥಾನದಲ್ಲಿ ಒಂದಾದ ಹುಲಿಗೆಮ್ಮನ‌ ಸನ್ನಿದಾನದಲ್ಲಿ ಭಾರಿ ಅನಾಹುತ ನಡೆದು ಹೋಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಈ ಅಪಘಾತ ನಡೆದಿದ್ದು ರಸ್ತೆ‌ ಮೇಲಲ್ಲ. ಬದಲಿಗೆ ಶಕ್ತಿ ‌ದೇವತೆ ಹುಲಿಗೆಮ್ಮ ದೇವಿಯ ಸನ್ನಿದಾನದಲ್ಲಿ.

ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ


ಮಲಗಿದ್ದ ಭಕ್ತರ ಮೇಲೆ ಹರಿದ ಮಿನಿ ಲಾರಿ

ಹೌದು! ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಭಕ್ತರ ಮೇಲೆ‌ ಚಾಲಕ ಟೆಂಪೋ ಹರಿಸಿದ್ದಾನೆ. ಈ ದೃಶ್ಯ‌ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ. ಘಟನೆಯಲ್ಲಿ ಕಾರಟಗಿ ತಾಲೂಕಿನ ನಂದಿಹಹಳ್ಳಿ ಗ್ರಾಮದ 75 ವರ್ಷದ ತಿಪ್ಪಣ್ಣ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಳ್ಳಾರಿಯ ಮಲ್ಲಮ್ಮ, ಕುಕನೂರಿನ ಹನುಮವ್ವ ಜೋಗತಿ, ಕಾರಟಗಿ ಪಟ್ಟಣದ ತುಕಾರಂ ಎಂಬುವರಿಗೆ ಗಾಯಗಳಾಗಿವೆ. ಬಳ್ಳಾರಿ ಜಿಲ್ಲೆಯ ಯರಂಗಳಿಗಿಯ ಚಾಲಕ ಶ್ರೀನಿವಾಸ, ಅಚಾತುರ್ಯದಿಂದ ಅಪಘಾತ ಮಾಡಿದ್ದಾನೆ.

ಇದನ್ನೂ ಓದಿ: Terrorists in Bengaluru: ಶಂಕಿತ ಉಗ್ರನ ಸಂಪರ್ಕದಲ್ಲಿದ್ದವರಿಗೆ ಶಾಕ್! ಸಿಸಿಬಿಯಿಂದ ನಾಲ್ವರ ವಿಚಾರಣೆ

ಕನ್ಯೆ ನೋಡಲು ಬಂದಿದ್ದ ಜನರು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರುದ್ರಪಾದ ಗ್ರಾಮದ 9 ಜನ ಕನ್ಯೆ ನೋಡುವ ಕಾರ್ಯಕ್ರಮಕ್ಕೆ ಬಂದಿದ್ದರು. ಕೊಪ್ಪಳ ಸಮೀಪದ ಗ್ರಾಮ ವೊಂದಕ್ಕೆ ಹೊರಟಿದ್ದ ಅವರು ರಾತ್ರಿಯೇ ಬಂದು ಹುಲಿಗಿ ಗ್ರಾಮದಲ್ಲಿ ತಂಗಿದ್ದಾರೆ. ಬೆಳಗ್ಗೆಯೇ ಎದ್ದು ಹುಲಿಗೆಮ್ಮ ದೇವಿ ದರ್ಶನ ಪಡೆದು ಶುಭ ಕಾರ್ಯಕ್ಕೆ ಹರಡುವ ಯೋಜನೆಯಲ್ಲಿದ್ದ ಬಡ ಕುಟುಂಬಕ್ಕೆ ಚಾಲಕ ಯಮನ ಸ್ವರೂಪಿಯಾಗಿ ಬಂದಿದ್ದಾನೆ.‌ ಅವರೆಲ್ಲ ತೀರಾ ಬಡತನದಲ್ಲಿರುವವರು ಅವರಿಗೆ ಕುಳಿತಲ್ಲಿಗೆ ವಾಹನ ಬರುತ್ತೆ ಎಂಬ ಕಲ್ಪನಯಿಲ್ಲ. ಲಾರಿ ಚಾಲಕನ ಅಚಾತುರ್ಯದಿಂದಾಗಿ ಇವರು ನೋವು ಅನುಭವಿಸುವಂತಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ


ಪೊಲೀಸರಿಂದ ಆರೋಪಿ ಚಾಲಕ ಬಂಧನ

ಎಡಭಾಗದಿಂದ ಹೊರಟವನು ಎದುರಿಗೆ ಕಾರು ಬಂದಿದ್ದರಿಂದ ತಪ್ಪಿಸುವಾಗ ಬ್ರೇಕ್ ಮೇಲೆ ಕಾಲಿಡಬೇಕಾದವನು  ಎಕ್ಸಲೇಟರ್ ಮೇಲೆ ಕಾಲಿಟ್ಟು ಈ ಘಟನೆಗೆ ಕಾರಣವಾಗಿದ್ದಾನೆ. ಘಟನೆ ಹಿನ್ನೆಲೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಗಾಯಾಳುಗಳು ಕುಟುಂಬ ಪರಿಹಾರಕ್ಕೆ ಒತ್ತಾಯಿಸಿದೆ.

ಇದನ್ನೂ ಓದಿ: PSI Death: ಪಂಚಮಿ ಹಬ್ಬಕ್ಕೆ ಬರುತ್ತೀನಿ ಎಂದಿದ್ದ ಅಣ್ಣ ಬರಲೇ ಇಲ್ಲ! ಪಿಎಸ್ಐ ಅವಿನಾಶ್ ಮನೆಯಲ್ಲಿ ಆಕ್ರಂದನ

ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ‌ಆದಾಯ ಬರುವ ಹುಲಿಗೆಮ್ಮ ದೇವಸ್ಥಾನದಲ್ಲಿ ಬರುವ ಭಕ್ತರಿಗೆ ಉಳಿಕೊಳ್ಳಲು ಸೂಕ್ತ ವ್ಯವಸ್ಥೆ ‌ಇಲ್ಲ. ಇದರಿಂದಾಗಿ ಈ ಬಡ ಭಕ್ತರು ರಸ್ತೆ ಮೇಲೆ ‌ಮಲಗಿ ಪ್ರಾಣ ಕೊಟ್ಟಿರೋದು ದುರಂತವೇ ಸರಿ.
Published by:Annappa Achari
First published: