ತಿಪ್ಪೆ ಆಹಾರವೇ ಈತನಿಗೆ ಮೃಷ್ಟಾನ್ನವಾಯ್ತು; ಕೊಪ್ಪಳದಲ್ಲಿ ವೈರಲ್ ಆಗುತ್ತಿದೆ ಈ ಮನಕಲಕುವ ದೃಶ್ಯ!

ವ್ಯಕ್ತಿಯೋರ್ವ ಹಸಿವು ತಾಳಲಾರದೆ ತಿಪ್ಪೆ ಆಹಾರವನ್ನೇ ಸೇವಿಸಿರುವ ಘಟನೆಗೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಬಸವಣ್ಣ ಸರ್ಕಲ್​ ಸಾಕ್ಷಿಯಾಗಿದ್ದು, ಈ ಮನಕಲಕುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

MAshok Kumar | news18
Updated:June 26, 2019, 11:35 AM IST
ತಿಪ್ಪೆ ಆಹಾರವೇ ಈತನಿಗೆ ಮೃಷ್ಟಾನ್ನವಾಯ್ತು; ಕೊಪ್ಪಳದಲ್ಲಿ ವೈರಲ್ ಆಗುತ್ತಿದೆ ಈ ಮನಕಲಕುವ ದೃಶ್ಯ!
ತಿಪ್ಪೆ ಆಹಾರವನ್ನು ಸೇವಿಸುತ್ತಿರುವ ವ್ಯಕ್ತಿ.
  • News18
  • Last Updated: June 26, 2019, 11:35 AM IST
  • Share this:
ಕೊಪ್ಪಳ (ಜೂನ್​.26); ಎಲ್ಲವೂ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬುದು ನಾಡ್ನುಡಿ. ಮನುಷ್ಯ ತನ್ನ ದುಡಿಮೆಯ ಒಂದು ಭಾಗವನ್ನು ಆಹಾರಕ್ಕಾಗಿಯೇ ಮೀಸಲಿಡುತ್ತಾನೆ. ಆಹಾರ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕ ಅಂಶಗಳಲ್ಲೊಂದು. ಇದರ ಮಹತ್ವವನ್ನು ಕೇವಲ ಬರವಣಿಗೆಯಲ್ಲಿ ಅರ್ಥೈಸುವುದು ಅಸಾಧ್ಯವೇ ಸರಿ. ಆದರೆ, ಇಲ್ಲೊಬ್ಬ ವ್ಯಕ್ತಿ ಹೊಟ್ಟೆ ಹಸಿವು ತಾಳಲಾರದೆ ಹಂದಿಗಳು ಮಿಂದೇಳುವ ತಿಪ್ಪೆಯ ಆಹಾರವನ್ನೇ ಮೃಷ್ಟಾನ್ನವೆಂಬಂತೆ ಸೇವಿಸಿರುವ ದೃಶ್ಯ ಮೊಬೈಲ್​ನಲ್ಲಿ ದಾಖಲಾಗಿದ್ದು ಮನಕಲಕುವಂತಿದೆ.

ಈ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಬಸವಣ್ಣ ಸರ್ಕಲ್​ನಲ್ಲಿ ಸಾಕ್ಷಿಯಾಗಿದ್ದು, ಈ ಮನಕಲಕುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ತಿಪ್ಪೆಯ ಎಂಜಲನ್ನು ತಿಂದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡರು ಆತನಿಗೆ ಎಲ್ಲವೂ ಅರ್ಥವಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಈತನನ್ನು ಕಂಡು ಕೆಲವರು ಕನಿಕರದಿಂದ ಉತ್ತಮ ಆಹಾರ ನೀಡಲು ಮುಂದಾದರೂ ಅದನ್ನು ತ್ಯಜಿಸಿ ತಿಪ್ಪೆಯ ಆಹಾರವನ್ನೇ ಸೇವಿಸಿದ್ದಾನೆ. ಈ ಮನಕಲಕುವ ದೃಶ್ಯ ಇದೀಗ ಕೊಪ್ಪಳದಾದ್ಯಂತ ಎಲ್ಲೆಡೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ : 'ಮುಸ್ಲಿಮರು ಮೋರಿಯಲ್ಲಿ ಬದುಕಲಿ'; ರಾಜೀವ್ ಗಾಂಧಿ ಸರ್ಕಾರದ ಸಚಿವರು ಸಂಸತ್ತಿನಲ್ಲಿ ಮಾಡಿದ್ದ ಭಾಷಣ ಉಲ್ಲೇಖಿಸಿದ ಪ್ರಧಾನಿ ಮೋದಿ

First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ