Student Death: ಈಜಲು ಹೋಗಿದ್ದ ಮೆಡಿಕಲ್​ ಸ್ಟೂಡೆಂಟ್ ಸಾವು​! ಕಾಪಾಡಲು ಹೋಗಿದ್ದವನು ಸಹ ನೀರುಪಾಲು!

ಶಾಲೆಯಲ್ಲಿ ಮಲ–ಮೂತ್ರ ಮಾಡಿಕೊಂಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು ಚೆಲ್ಲಿದ್ದರಿಂದಾಗಿ ಗಾಯಗಳಾಗಿವೆ ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಿ, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವೀಕೆಂಡ್​ ಎಂಜಾಯ್​ ಮಾಡಲು ಬಂದಿದ್ದ ಮೆಡಿಕಲ್​ ಸ್ಟುಡೆಂಟ್ (Medical Student) ಸಾವನ್ನಪ್ಪಿರೋ ಘಟನೆ ಚಿಕ್ಕಬಳ್ಳಾಪುರದ (Chikkaballapura) ಶ್ರೀನಿವಾಸ ಸಾಗರ ಜಲಾಶಯದ ಬಳಿ ನಡೆದಿದೆ. ನೀರಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋಗಿದ್ದ ಗ್ರಾಮಸ್ಥ ಕೂಡ ನೀರು ಪಾಲಾಗಿರೋ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಚ್ಚಿದಾನಂದ ಸಾವನ್ನಪ್ಪಿರೋ ಮೃತ ದುರ್ದೈವಿಯಾಗಿದ್ದಾರೆ. ಮೆಡಿಕಲ್ ಕಾಲೇಜು ವಸತಿ ನಿಲಯದಲ್ಲಿದ್ದ (Hostel) ಸಚ್ಚಿದಾನಂದ, ಸ್ನೇಹಿತರ ಜೊತೆ ವೀಕೆಂಡ್ ಎಂಜಾಯ್​ ಮಾಡಲು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ತೆರಳಿದ್ದ.

ರಾಯಚೂರಲ್ಲಿ ವಿದ್ಯಾರ್ಥಿ ಮೇಲೆ ನೀರು ಎರಚಿದ ಶಿಕ್ಷಕ

ಶಾಲೆಯಲ್ಲಿ (School) ಮಲ–ಮೂತ್ರ ಮಾಡಿಕೊಂಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು (Hot Water) ಚೆಲ್ಲಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಸ್ಕಿ ತಾಲ್ಲೂಕಿನ‌ ಖಾಸಗಿ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿ ವಿದ್ಯಾರ್ಥಿಯೊಬ್ಬನ ಸೊಂಟದ ಸುತ್ತಲೂ ಸುಟ್ಟಗಾಯಗಳಾಗಿದ್ದು (Burn), ಆತ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಮೇಲೆ ಬಿಸಿ ನೀರು ಎರಚಿದ ಶಿಕ್ಷಕ

ಶಾಲೆಯಲ್ಲಿ ಮಲ–ಮೂತ್ರ ಮಾಡಿಕೊಂಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು ಚೆಲ್ಲಿದ್ದರಿಂದಾಗಿ ಗಾಯಗಳಾಗಿವೆ ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಿ, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗೆ ಸಮರ್ಪಕ ಚಿಕಿತ್ಸೆ ಕೊಡಿಸಬೇಕು ಎಂದು ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಸುದರ್ಶನ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದು ಕೋರಿದ್ದಾರೆ.

ಇದನ್ನೂ ಓದಿ: Drunken Teacher: ಎಣ್ಣೆ ಕಿಕ್​ನಲ್ಲಿ ಶಾಲೆಗೆ ಬರ್ತಿದ್ದ ಶಿಕ್ಷಕಿ! ಮದ್ಯದ ಮತ್ತಲ್ಲೇ ಮಕ್ಕಳು, ಸಹೋದ್ಯೋಗಿಗಳ ಜೊತೆ ಕಿರಿಕ್!

ಶಾಲೆಗೆ ಅಧಿಕಾರಿಗಳ ಭೇಟಿ

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿಶ್ವನಾಥ ಅವರು ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಬಾಲಕ ಮತ್ತು ಪಾಲಕರಿಂದ ಮಾಹಿತಿ ಪಡೆದಿದ್ದಾರೆ. ಪಾಲಕರು ಯಾರ ವಿರುದ್ಧವೂ ದೂರು ನೀಡದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಸ್ಕಿ ಪೊಲೀಸ್ ಠಾಣೆಗೆ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೋಷಕರು ದೂರು ನೀಡಿಲ್ಲ ಯಾಕೆ?

‌ಶೌಚಾಲಯಕ್ಕೆ ಹೋಗಿದ್ದ ವೇಳೆ ಸೋಲಾರ್‌ ಹೀಟರ್‌ನ ನಳದಿಂದ ಬಂದ ಬಿಸಿ ನೀರು ಗಮನಿಸದೆ ಮೈಮೇಲೆ ಹಾಕಿಕೊಂಡಿದ್ದರಿಂದ ನನ್ನ ಮಗನಿಗೆ ಗಾಯಗಳಾಗಿವೆ. ಇದರಲ್ಲಿ ನನ್ನ ಮಗನ ತಪ್ಪು ಇದೆ. ಹೀಗಾಗಿ, ನಾನು ಯಾರ ವಿರುದ್ಧವೂ ದೂರು ನೀಡಿಲ್ಲ ಎಂದು ವಿದ್ಯಾರ್ಥಿಯ ತಂದೆ ತಿಳಿಸಿದರು.

ಇದನ್ನೂ ಓದಿ: Crime News: ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ನಿ ಶವ, ಆತ್ಮಹತ್ಯೆಗೆ ಯತ್ನಿಸಿದ ಪತಿ

ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ

ಶೌಚಾಲಯದಲ್ಲಿ ವಿದ್ಯಾರ್ಥಿಗೆ ಸೋಲಾರ್‌ ಹೀಟರ್‌ನ ಬಿಸಿ ನೀರಿನ ಕೊಳ ಮತ್ತು ತಣ್ಣೀರಿನ ಕೊಳ ಗೊತ್ತಾಗಿರಲಿಕ್ಕಿಲ್ಲ. ಕೊಳದಿಂದ ಬಂದ ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡಿದ್ದರಿಂದ ಗಾಯಗಳಾಗಿವೆ, ವಿದ್ಯಾರ್ಥಿ ಇದೀಗ ಆರೋಗ್ಯದಿಂದ ಇದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು ಹಾಕಿದ್ದಾರೆ ಎಂದು ದೂರು ಬಂದಿದೆ. ತನಿಖೆ ಮಾಡುವಂತೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮನ್ಸೂರ ಆಹ್ಮದ್ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
Published by:ಪಾವನ ಎಚ್ ಎಸ್
First published: