• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hassan Politics: ಅರಕಲಗೂಡಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ ಮಂಜು ಕಣಕ್ಕೆ; ರೇವಣ್ಣ ವಿರುದ್ಧ ರಾಮಸ್ವಾಮಿ ವಾಗ್ದಾಳಿ

Hassan Politics: ಅರಕಲಗೂಡಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ ಮಂಜು ಕಣಕ್ಕೆ; ರೇವಣ್ಣ ವಿರುದ್ಧ ರಾಮಸ್ವಾಮಿ ವಾಗ್ದಾಳಿ

ಹೆಚ್​ ಡಿ ಕುಮಾರಸ್ವಾಮಿ ಮತ್ತು ಎ ಮಂಜು

ಹೆಚ್​ ಡಿ ಕುಮಾರಸ್ವಾಮಿ ಮತ್ತು ಎ ಮಂಜು

ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿಗಳ  ಕೊರತೆ ಇಲ್ಲ ಎಂದು ಶಾಸಕ ಶಿವಲಿಂಗೇಗೌಡರಿಗೆ ಟಾಂಗ್ ನೀಡಿದರು. ಎ.ಟಿ.ರಾಮಸ್ವಾಮಿ ಅವರ ಬದಲಾಗಿ ಎ.ಮಂಜು ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ಮುಂದಾಗಿದೆ. ಎ.ಮಂಜು ಸದ್ಯ ಬಿಜೆಪಿಯಲ್ಲಿದ್ದಾರೆ.

 • News18 Kannada
 • 3-MIN READ
 • Last Updated :
 • Hassan, India
 • Share this:

ಹಾಸನ: ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡರು (MLA Shivalingegowda) ಮತ್ತು ಎ.ಟಿ.ರಾಮಸ್ವಾಮಿ (AT Ramaswamy) ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಅರಕಲಗೂಡು (Arakalagudu) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಎ.ಮಂಜು (A Manju) ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಮಂಜು ಅವರ ಜೊತೆ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ. ಇನ್ನು ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿಗಳ  ಕೊರತೆ ಇಲ್ಲ ಎಂದು ಶಾಸಕ ಶಿವಲಿಂಗೇಗೌಡರಿಗೆ ಟಾಂಗ್ ನೀಡಿದರು. ಎ.ಟಿ.ರಾಮಸ್ವಾಮಿ ಅವರ ಬದಲಾಗಿ ಎ.ಮಂಜು ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ಮುಂದಾಗಿದೆ. ಎ.ಮಂಜು ಸದ್ಯ ಬಿಜೆಪಿಯಲ್ಲಿದ್ದಾರೆ.


ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿರುವ ಎ.ಟಿ.ರಾಮಸ್ವಾಮಿ ಶನಿವಾರ ಅರಕಲಗೂಡು ಪಟ್ಟಣದಲ್ಲಿ ಪರೋಕ್ಷವಾಗಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.


ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ,‌ ಮಾಡೋಲ್ಲ


ಚರ್ಚೆ ಮಾಡಲಿಕ್ಕೆ, ಸತ್ಯ ಹೇಳಲು ಹಿಂದು ಮುಂದು ನೋಡಲ್ಲ. ಸುಳ್ಳು ಹೇಳಲಿಕ್ಕೆ ತುಂಬಾ ಭಯ ಪಡ್ತಿನಿ ನಾನು, ಸತ್ಯ ಹೇಳಲಿಕ್ಕೆ ಏನು ಹಿಂಜರಿಯುವುದಿಲ್ಲ. ಮುಂದಿನ ದಿನಗಳಲ್ಲಿ ವಿವರವಾಗಿ ಚರ್ಚೆ ಮಾಡುವೆ. ಎಲ್ಲವನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದೀನಿ. ನಾನು ನೆಮ್ಮದಿಯಾಗಿ, ಸಂತೋಷದಿಂದ ಖುಷಿಯಾಗಿದ್ದೀನಿ. ಕಾರಣ ನಾನು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ,‌ ಮಾಡೋಲ್ಲ. ಜನರಿಗೋಸ್ಕರ ಮಾಡಿದ್ದೀನಿ, ತೀರ್ಮಾನ ಜನರಿಗೆ ಬಿಡುವೆ ಎಂದು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.


ನಾನು ಅವರ ಹೆಸರು ಹೇಳಿದ್ದನಾ?


ರಾಜಕಾರಣದಲ್ಲಿ ಖಂಡಿತವಾಗಿಯೂ ಮುಂದುವರಿಯುತ್ತೇನೆ. ಎಲ್ಲಿಯವರೆಗೆ ನನ್ನ ಶಕ್ತಿ ಇರುತ್ತದೆ ಅಲ್ಲಿಯವರೆಗೆ ಅನ್ಯಾಯ, ಅಸತ್ಯ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುತ್ತೇನೆ. ನನಗೆ ದೇವೇಗೌಡರು ಹಾಸನ ಜಿಲ್ಲೆಯಿಂದ ಬಿಟ್ಟು ತುಮಕೂರು ಜಿಲ್ಲೆಗೆ ಹೋಗುವುದು ಇಷ್ಟವಿರಲಿಲ್ಲ. ಯಾರನ್ನು ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ಚನ್ನಪಟ್ಟಣದಲ್ಲಿ ಒಂದು ಪೂರ್ವಭಾವಿ ಸಭೆ ನಡೆಯಿತು. ಎಲ್ಲರೂ ಕೂಡ ಪ್ರಜ್ವಲ್ ರೇವಣ್ಣ ಹೆಸರು ಹೇಳಿದರು. ನಾನು ಹೇಳಿದ್ನಾ ಅವರ ಹೆಸರು ಹೇಳಲಿಲ್ಲ, ನ‌ನಗೆ ಆ ಅಭಿಪ್ರಾಯ ಇರಲಿಲ್ಲ ಎಂದು ಲೋಕಸಭಾ ಚುನಾವಣೆಯಲ್ಲಿ ನಡೆದ ಘಟನೆಯನ್ನು ಹೇಳಿದರು.


ಆತ್ಮಗೌರವವನ್ನು ಕಳೆದುಕೊಂಡು ನಿಂತಿಲ್ಲ


ಅಂತಹ ಹಿರಿಯ ಮುತ್ಸದ್ದಿಯನ್ನ ಜಿಲ್ಲೆಯಿಂದ ಹೊರಗೆ ಕಳುಹಿಸಲು ನನ್ನ ಆತ್ಮ ಒಪ್ತಿರಲಿಲ್ಲ, ಆತ್ಮಸಾಕ್ಷಿಯಂತೆ ಪ್ರಜ್ವಲ್ ಹೆಸರು ಹೇಳಲಿಲ್ಲ. ಅದಕ್ಕೆ ಕೆಲವರಿಗೆ ಕೋಪ‌ ಇರಬಹುದು. ಅದಕ್ಕೆ ನಾನೇನು ಎದೆಗುಂದುವುದಿಲ್ಲ. ಅವರ ಮುಂದೆ ಹೋಗಿ ಯಾವಾಗಲೂ ಸ್ವಾಭಿಮಾನ, ಆತ್ಮಗೌರವವನ್ನು ಕಳೆದುಕೊಂಡು ನಿಂತಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಆತ್ಮಗೌರವವನ್ನು ಕಾಪಾಡಿಕೊಂಡು ಈ ಕ್ಷೇತ್ರದ ಘನತೆ, ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡ್ಕಂಡು ಬಂದಿದ್ದೀನಿ ಎಂದು ಹೇಳಿದರು.


ನಾನು ಕೆಟ್ಟವನಲ್ಲವಾ?


ರೇವಣ್ಣ ಅವರು ನಮ್ಮ ಮನೆಗೆ ಎರಡು ದಿನ ಬಂದಿದ್ದರು. ನಾನು ದೊಡ್ಡವರ ಜೊತೆ ಮಾತನಾಡೋಣ ಅಂತ ಹೇಳಿದೆ. ಮಾತಾಡಿ ಕೆಲವು ಗೊಂದಲಗಳು, ಸಮಸ್ಯೆಗಳಿವೆ ಅದನ್ನು ಬಗೆಹರಿಸಿಕೊಳ್ಳೋಣ‌ ಅಂತ ಹೇಳಿದೆ. ಆಯ್ತ ಅಂತ ಹೋದರು, ಜ.22 ರಂದು ದೊಡ್ಡ ಕಾರ್ಯಕ್ರಮ ಇತ್ತು, ಜ.21 ತಾರೀಖು ಏನು ಸಂಚು ನಡೀತು, ಯಾವ ರೀತಿ ಕೂಗಿದ್ರು. ಅವರೆಲ್ಲಾ ಒಳ್ಳೆಯವರು, ನಾನು ಕೆಟ್ಟವನಲ್ಲವಾ? ಕೆಟ್ಟೋನು ಒಳ್ಳೆಯವರ ಸಂಘ ಮಾಡಿ ಅವರ ಸಹವಾಸ ಮಾಡಿ ಅವರನ್ನು ಕೆಡ್ಸೋದು ಏಕೆ ಅಂತ ಹೇಳಿ ದೂರ ಇರಬೇಕಲ್ವಾ ಹೇಳಿ ಎಂದರು.


ನಾನು ರಾಜಕಾರಣ ಮಾಡಿಕೊಂಡು ಬಂದಿರುವುದು ನನಗಾಗಿ ಅಲ್ಲ. ರಾಜಕೀಯ ಕೆಟ್ಟಿದೆ, ನಾನು ಅನೇಕ ಸಂದರ್ಭಗಳಲ್ಲಿ ಹೇಳಿದ್ದೀನಿ. ಆಡಳಿತ ಚೆನ್ನಾಗಿಲ್ಲ, ರಾಜಕೀಯ ಚೆನ್ನಾಗಿಲ್ಲ, ಶಾಸಕಾಂಗನು ಕೂಡ ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಪವಿತ್ರ ಮೈತ್ರಿ ಮಾಡ್ಕೊಂಡು ಸ್ವಾರ್ಥ ರಾಜಕಾರಣ


ನಾನು ಸದನದಲ್ಲಿ ಮಾತನಾಡುವಾಗ ಹೇಳಿದೆ ನಮ್ಮ ನಾಯಕರಗಳ ಸಮಯ, ಶಕ್ತಿ ಎಲ್ಲಾ ವ್ಯರ್ಥವಾಗುತ್ತಿದೆ. ಅನವಶ್ಯಕವಾದಂತಹ ವಿಷಯಗಳಿಗೆ ಒಬ್ಬರ ಮೇಲೆ ಒಬ್ಬರು ಕೆಸರೆರೆಚಾಡುತ್ತಿದ್ದಾರೆ. ಇವತ್ತು ಅರಕಲಗೂಡು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು, ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲಿಕ್ಕೆ ಮುಂದಾಗಿದ್ದಾರೆ ಎಂದು ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಗೆದ್ದಂತಹ ಅಭ್ಯರ್ಥಿ ಮೇಲೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಆ ವಿಚಾರಣೆಯನ್ನು ತಣ್ಣನೆ ಮಾಡಬೇಕೆಂದು ದೂರುದಾರರೇ ಸುಮ್ಮನಾದ್ರೆ, ತಾಯಿಯೇ ತನ್ನ ಮಗುವಿಗೆ ಹಾಲು ಕೊಡದೆ ವಿಷ ಕೊಟ್ಟರೆ ಮಗು ಹೇಗೆ ಬದುಕುತ್ತೆ ಎಂದು ಕಿಡಿಕಾರಿದರು.
ಅಭಿವೃದ್ಧಿಗೆ ಒತ್ತು


ಸತ್ಯ, ನ್ಯಾಯ, ಧರ್ಮ, ಎಲ್ಲಿ ಉಳಿಯುತ್ತೆ. ಅಪವಿತ್ರ ಮೈತ್ರಿಗಾಗಿ, ಸ್ವಾರ್ಥಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಜನ ಇದನ್ನು ನೋಡುತ್ತಿದ್ದಾರೆ. ಬಹಳ ಕಾಲ ಅದು ಬಾಳಿಕೆಗೆ ಬರುವುದಿಲ್ಲ.ನೀವೇನಾದ್ರು ಕಂಡ ಹಾಗೆ, ನೀವು ಕೇಳಿದ ಹಾಗೇ, ಯಾರನ್ನು ಬೇಕಾದ್ರು ಕೇಳಿ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ಶಾಸಕನಾಗಿ, ಎರಡು ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ.


ಅನವಶ್ಯಕವಾಗಿ ಕಾಲ ಕಳೆಯಲಿಲ್ಲ. ಜನಸೇವೆಯೇ ಜನಾರ್ಧನ ಸೇವೆ ಅಂದುಕೊಂಡು ಬಂದವನು ನಾನು. ನನ್ನ ಕ್ಷೇತ್ರವೇ ದೇವಾಲಯ, ಜನರ ಸೇವೆ ಮಾಡೋದು ದೇವರ ಪೂಜೆ ಅನ್ಕಂಡು ಬಂದವನು. ಯಾರಾದ್ರು ಒಬ್ಬರು ಮೋಸ, ಅನ್ಯಾಯ, ಭ್ರಷ್ಟಾಚಾರ ಮಾಡಿದ್ರು ಅಂತ ಮಾತು ಹೇಳಿದ್ರೆ ನಾನು ಅವರ ಮುಂದೆ ಕ್ಷಮೆ ಕೇಳ್ತಿನಿ ಎಂದರು.


ಇದನ್ನೂ ಓದಿ:  Bhavani Revanna: ಭವಾನಿ ರೇವಣ್ಣಗೆ ಟಿಕೆಟ್​ ಕೊಡಿ, ಹಾಸನದಲ್ಲಿ ಜೆಡಿಎಸ್ ಉಳಿಸಿ; ದೇವೇಗೌಡರ ಎದುರೇ ರೇವಣ್ಣ ಆ್ಯಂಡ್ ಸನ್ ಡಿಮ್ಯಾಂಡ್?


ಜನರಿಗಾಗಿ ನಾನೇ ಹೊರತು, ನನಗಾಗಿ ಜನ ಅಲ್ಲ


ನನಗೆ ಆತ್ಮತೃಪ್ತಿ ಇದೆ, ಅತ್ಯಂತ ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ಜನರ ಸೇವೆ ಮಾಡ್ಕಂಡು ಬಂದಿದ್ದೀನಿ. ಅವರ ವಿಶ್ವಾಸಕ್ಕೆ ಎಂದು ಕೂಡ ಎರಡು ಬಗೆಯಲಿಲ್ಲ. ಜನರಿಗಾಗಿ ನಾನೇ ಹೊರತು, ನನಗಾಗಿ ಜನ ಅಲ್ಲ ಅಂತ ತಿಳಿದುಕೊಂಡು ಬಂದವನು ನಾನು. ನೇರವಾಗಿ ಮಾತನಾಡಿದ್ದೀನಿ ಅದು ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷದಲ್ಲಿ ಕೂತಿರಲಿ ತಪ್ಪನ್ನು ತಪ್ಪು ಎಂದು ಖಂಡಿಸಿಕೊಂಡು ಬಂದಿದ್ದೀನಿ. ತಪ್ಪನ್ನ ಎತ್ತಿ ಹೇಳೋದೇ ನನ್ನ ತಪ್ಪು ಎನ್ನೋದಾದ್ರೆ ಜನರ ತೀರ್ಮಾನಕ್ಕೆ ಬಿಡುವೆ ಎಂದು ಗುಡುಗಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು