ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾಳೆ ಸಕ್ಕರೆನಾಡಿನ ಹುಡುಗಿ

news18
Updated:July 26, 2018, 8:52 PM IST
ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾಳೆ ಸಕ್ಕರೆನಾಡಿನ ಹುಡುಗಿ
news18
Updated: July 26, 2018, 8:52 PM IST
ರಾಘವೇಂದ್ರ ಗಂಜಾಮ್, ನ್ಯೂಸ್-18 ಕನ್ನಡ

ಮಂಡ್ಯ (ಜುಲೈ. 26): ಆಕೆ ಸಾಮಾನ್ಯ ರೈತನ‌ ಮಗಳಾಗಿ ಬೆಳೆದ ಗ್ರಾಮೀಣ ಪ್ರತಿಭೆ. ಕ್ರೀಡೆಯಲ್ಲಿ ಏನಾದರು ಸಾಧನೆ ಮಾಡಬೇಕೆಂದು ಕನಸು ಕಂಡಿದ ಪ್ರತಿಭಾನ್ವಿತ ಕ್ರೀಡಾಪಟು. ಸತತ ಅಭ್ಯಾಸದಿಂದ ಇದೀಗ ಈಕೆ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಂಸವೇಣಿ ಎಂಬ ಯುವತಿ ಈಗಾಗಲೇ ಹತ್ತು ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿ ಬಹುಮಾನ ಪಡೆದು  ಹೆಸರು ಗಳಿಸಿರುವ ಗ್ರಾಮೀಣ ಪ್ರತಿಭೆ. ಇದೀಗ ರಷ್ಯಾದ ಒಕ್ಕೂಟದ  ಬೆಲಾರಸ್​​ನಲ್ಲಿ ನಡೆಯಲಿರುವ 4ನೇ ವಿಶ್ವ  ಟೆನಿಕಾಯ್ಟ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮೆರೆದಿದ್ದಾಳೆ‌.  ಜುಲೈ. 31 ರಿಂದ  ಆಗಸ್ಟ್ ೦9 ರ ವರೆಗೆ ರಷ್ಯಾದ ಬೆಲಾರಷ್ ನಡೆಯಲಿರುವ 4ನೇ ವಿಶ್ವ ಟೆನಿಕಾಯ್ಟ್ ಚಾಂಪಿಯನ್ ಶಿಫ್ ಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸುವ ಮೂಲಕ ರಾಜ್ಯದಿಂದ ಏಕೈಕ ಕ್ರೀಡಾಪಟುವಾಗಿದ್ದಾಳೆ. ಈ ಮೂಲಕ  ಕರ್ನಾಟಕದ ಮತ್ತು ತವರು ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದು, ಬೆಲಾರಸ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಜಯಸಿ ರಾಷ್ಟ್ರದ ಮತ್ತು ರಾಜ್ಯ ಹಾಗು ಸಕ್ಕರೆ ಜಿಲ್ಲೆಯ ಕೀರ್ತಿ ಪತಾಕೆ ಬೆಳಗಿಸುವ ವಿಶ್ವಾಸ ಹೊಂದಿದ್ದಾಳೆ.

ಇನ್ನು ಹಂಸವೇಣಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿತ್ತಿದ್ದಂತೆ ತವರಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ತಮ್ಮೂರಿನ‌ ಪ್ರಮುಖ ವೃತ್ತದಲ್ಲಿ ಹಂಸವೇಣಿಗೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿ ಗ್ರಾಮಸ್ಥರು ಸಂಭ್ರಮಿಸಿ ಸಂತಸ ವ್ಯಕ್ತಪಡಿಸಿದರೆ, ಹಂಸವೇಣಿ ಸಂಭಂಧಿಕರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಈಗಾಗಲೇ‌ ಸತತ ಪರಿಶ್ರಮದ ಮೂಲಕ ಸಾಕಷ್ಟು ಹೆಸರು ಮಾಡಿರುವ ಹಂಸವೇಣಿ, ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಬಳಿಕ ಗ್ರಾಮದಲ್ಲಿ ಹೆಚ್ಚಿನ‌ ತರಬೇತಿ ಪಡೆಯುತ್ತಿದ್ದಾಳೆ.‌ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು‌ ಸಜ್ಜಾಗಿರೋ ಹಂಸವೇಣಿ ವಿದೇಶದಲ್ಲಿ ಪ್ರಶಸ್ತಿ ಗಳಿಸಿ ಭಾರತದ ಕೀರ್ತಿ ಪತಾಕೆ ಹಾರಿಸಲಿ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...