ಆತ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ (Birthday Party) ಮಾಡಲು ಡಾಬಾಗೆ ಹೋಗಿದ್ದ. ಪಾರ್ಟಿ ಕೂಡ ಚೆನ್ನಾಗಿ ಆಗಿತ್ತು. ಆದ್ರೆ ಇನ್ನೇನೋ ಎಲ್ಲಾ ಮುಗಿಸಿಕೊಂಡ ಹೊರ ಬರಬೇಕು ಅನ್ನುವಷ್ಟರಲ್ಲಿ ಮತ್ತೊಂದು ಟೇಬಲ್ ನಲ್ಲಿ (Table) ಪಾರ್ಟಿ ಮಾಡ್ತಿದ್ದವರ ಜೊತೆ ಜಗಳವಾಗಿ. ಅದು ಕೊಲೆಯಲ್ಲಿ ಅಂತ್ಯವಾಗಿದೆ. ಕ್ಷುಲ್ಲಕ ಕಾರಣಕ್ಕೆ 25 ವರ್ಷದ ಯುವಕ (Boy) ಹೆಣವಾಗಿದ್ದಾನೆ. ಪಾರ್ಟಿ ಚೆನ್ನಾಗೇ ನಡೀತು, ಸಾಗರ್ ಬಿಲ್ ಪೇ (Bill Pay) ಮಾಡಿ ಬರ್ತಿನಿ ಎಂದು ಮತ್ತೆ ಡಾಬಾ ಒಳ ಹೋಗಿದ್ದ. ಈ ಸಂದರ್ಭ ಅಲ್ಲಿಗೆ ಪಾರ್ಟಿ ಮಾಡಲು ಬಂದಿದ್ದ ಮತ್ತೊಂದು ಯುವಕರ ಗುಂಪಿನ ಜೊತೆ ಹಾಗೂ ಸಾಗರ್ (Sagar) ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.
ಎಣ್ಣೆ ಏಟಲ್ಲಿ ಎದೆಗೆ ಚೂರಿ, ಕೊಪ್ಪಾದ ಯುವಕನ ಸಾವು
ಇಂತಹ ಒಂದು ಘಟನೆ ನಡೆದಿರೋದು ಸಕ್ಕರೆ ನಾಡು ಮಂಡ್ಯದ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. ಕೊಪ್ಪ ಗ್ರಾಮದ 25 ವರ್ಷದ ಸಾಗರ್ ಚೂರಿ ಇರಿತದಿಂದ ಸಾವನ್ನಪ್ಪಿದ ಯುವಕ. ನಿನ್ನೆ ರಾತ್ರಿ ಸಾಗರ್ ಮತ್ತು ಆತನ ಸ್ನೇಹಿತರು. ಸ್ನೇಹಿತನ ಪಾರ್ಟಿ ಮಾಡುವ ಸಲುವಾಗಿ ಕೊಪ್ಪ ಗ್ರಾಮದ ಸಿಂಚನ ಡಾಬಾಗೆ ಹೋಗಿದ್ದರು. ಅಂದುಕೊಂಡಂತೆ ಪಾರ್ಟಿ ಕೂಡ ಚೆನ್ನಾಗೆ ಆಗುತ್ತಿ. ಬಳಿಕ ಸಾಗರ್ ಸ್ನೇಹಿತರು ಡಾಬಾಯಿಂದ ಹೊರನಡೆದಿದ್ರು. ಆದ್ರೆ ಈ ಸಂದರ್ಭ ಸಾಗರ್ ಬಿಲ್ ಪೇ ಮಾಡಿ ಬರ್ತಿನಿ ಎಂದು ಮತ್ತೆ ಡಾಬಾ ಒಳ ಹೋಗಿದ್ದ. ಈ ಸಂದರ್ಭ ಅಲ್ಲಿಗೆ ಪಾರ್ಟಿ ಮಾಡಲು ಬಂದಿದ್ದ ಮತ್ತೊಂದು ಯುವಕರ ಗುಂಪಿನ ಜೊತೆ ಹಾಗೂ ಸಾಗರ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.
ಇದನ್ನೂ ಓದಿ: Karnataka Politics: ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳ್ಕೊಂಡಿದ್ದಾರೆ- ಸಿ.ಟಿ ರವಿ
ಬಿಲ್ ನೀಡಲು ಹೋದವನು ರಕ್ತದ ಮಡುವಿನಲ್ಲಿ ಬಿದ್ದಿದ್ದ
ಇನ್ನು ಬಿಲ್ ನೀಡಲು ಹೋದ ಸಾಗರ್ ಮತ್ತು ಮತ್ತೊಂದು ಯುವಕರ ಗುಂಪಿನ ನಡುವೆ ನಡೆಯುತ್ತಿದ್ದ ಗಲಾಟೆ ಶಬ್ದ ಕೇಳಿ, ಸಾಗರ್ ಸ್ನೇಹಿತರು ವಾಪಸ್ ಡಾಬಾ ಬಳಿಗೆ ಬಂದು ನೋಡಿದಾಗ ಸಾಗರ್ ಎದೆಗೆ ಚಾಕುವಿನಿಂದ ಇರಿಯಲಾಗಿತ್ತು. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಗರ್ ನನ್ನು ಕೊಪ್ಪ ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾಗರ್ ಇಂದು ಮೃತಪಟ್ಟಿದ್ದಾನೆ..
3 ತಿಂಗಳ ಹಿಂದೆ ನಡೆದ ಗಲಾಟೆಯೇ ಕೊಲೆಗೆ ಕಾರಣ
3 ತಿಂಗಳ ಹಿಂದೆ ಸಾಗರ್ ಗೆ ಹರಗಲವಾಡಿ ಗ್ರಾಮ ಮತ್ತು ಸೋಮನಹಳ್ಳಿ ಗ್ರಾಮದ ಗೀರೀಶ್, ರಾಕೇಶ್ ಮತ್ತು ಪ್ರತಾಪ್ ನಡುವೆ ಗಲಾಟೆಯಾಗಿತ್ತು. ಹಿಗಾಗಿ ನಿನ್ನೆ ಸಾಗರ್ ಮತ್ತು ಇವರ ನಡುವೆ ಗಲಾಟೆಯಾಗಿದ್ದು, ಗಲಾಟೆಗೆ ಹಳೇ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಗಲಾಟೆ ಬಳಿಕ ಗಿರೀಶ್ ಮತ್ತು ಪ್ರತಾಪ್ ತಲೆ ಮರೆಸಿಕೊಂಡಿದ್ದು, ರಾಕೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ಅಲ್ಲದೆ ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲಾಗಿದ್ದು, ಉಳಿದ ಆರೋಪಿತರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: PSI Recruitment Scam: ಅಕ್ರಮವಾಗಿ ಎಕ್ಸಾಂ ಬರೆದು ಸಕ್ಸಸ್ ಆಗಿದ್ದಕ್ಕೆ ಫೋಟೋಶೂಟ್, ಸಿಬ್ಬಂದಿಗೆ 4000 ಕೊಟ್ಟ ದಿವ್ಯಾ ಹಾಗರಗಿ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಸಾಗರ್ ಮತ್ತು ಆತನ ಸ್ನೇಹಿತರು ಹುಟ್ಟುಹಬ್ಬದ ಆಚರಣೆಗಾಗಿ ಸಿಂಚನ ಡಾಬಾದಲ್ಲಿ ಊಟಕ್ಕೆ ಹೋಗಿದ್ದರು. ಆದ್ರೆ ಅಲ್ಲಿ ಕಾಲು ಕೆರೆದು ಜಗಳ ಮಾಡಿ ನಮ್ಮ ಹುಡುಗನನ್ನ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಸಾಗರ್ ಸಾವಿನಿಂದ ಆತನ ಕುಟುಂಬಸ್ಥರಿಗೆ ಆಗಾತವಾಗಿದ್ದು, ಆರೋಪಿಗಳನ್ನ ಹಿಡಿದು ಕಠಿಣ ಶಿಕ್ಷೆ ನೀಡುವಂತೆ ಆಕ್ರೋಶ ಹೊರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ