HOME » NEWS » State » A MAN WHO STABBED KNIFE WOMEN IN BENGALURU RH KMTV

ಸಂಸಾರ ಸರಿಪಡಿಸಿ ಎಂದು ಬಂದವನು ಮಹಿಳೆಯ ಕತ್ತುಕೊಯ್ದು ಹತ್ಯೆ ಮಾಡಿ ಹೋದ!

ಸದ್ಯ ಆರೋಪಿ ವಿಜಯಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಎರಡು ಮನೆಯವರ ವಿಚಾರಣೆ ನಡೆಸಿದ್ದಾರೆ‌.

news18-kannada
Updated:November 15, 2020, 8:19 PM IST
ಸಂಸಾರ ಸರಿಪಡಿಸಿ ಎಂದು ಬಂದವನು ಮಹಿಳೆಯ ಕತ್ತುಕೊಯ್ದು ಹತ್ಯೆ ಮಾಡಿ ಹೋದ!
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು; ನಾದಿನಿಯ ಕುಟುಂಬದ ವ್ಯಥೆ ಕೇಳಲು ಹೋಗಿದ್ದಕ್ಕೆ ಮಹಿಳೆಯೊಬ್ಬರು ಶವವಾಗಿದ್ದಾರೆ. ಹೌದು, ಸಂಸಾರ ಸರಿಪಡಿಸಿ ಎಂದು ಗೋಗರೆಯುತ್ತಿದ್ದ ಆತ ಕೊನೆಗೆ ತನ್ನ ಪತ್ನಿಯ ಅತ್ತಿಗೆಯನ್ನೇ ಕೊಲೆಗೈದಿರುವ ಧಾರುಣ ಘಟನೆ ರಾಮಮೂರ್ತಿನಗರದ ಟಿನ್ ಫ್ಯಾಕ್ಟರಿ ಬಳಿಯ ಮನೆಯೊಂದರಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಸಡಗರದಲ್ಲಿದ್ದ ಲಾವಣ್ಯಳನ್ನ ಪತಿಯ ತಂಗಿ ಗಂಡ ವಿಜಯ್ ಕುಮಾರ್ ಹತ್ಯೆಗೈದು ಬಳಿಕ ಅದೇ ಚಾಕುವಿನಿಂದ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಆರೋಪಿ ವಿಜಯ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ವಿಜಯ್ ಕುಮಾರ್ ವೃತ್ತಿಯಲ್ಲಿ ಟೈಲರ್ ಆಗಿದ್ದು ಕುಡಿತದ ದಾಸನಾಗಿದ್ದನಂತೆ.  ಪ್ರತಿನಿತ್ಯ ಕುಡಿದು ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ವರದಕ್ಷಿಣೆಗಾಗಿ ಪೀಡಿಸಿ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ವಿಜಯ್ ಪತ್ನಿ ಬಸವನಗುಡಿ ಮಹಿಳಾ ಠಾಣೆಯಲ್ಲಿ‌ ದೂರು ಸಹ ದಾಖಲು ಮಾಡಿದ್ದಾಳೆ.  ಪತ್ನಿಯ ಜೊತೆಗಿನ ಮುನಿಸಿನ ಬಳಿಕ ಆರೋಪಿ ವಿಜಯ್ ಕುಮಾರ್ ರಾಜಿ ಮಾಡಿಸುವಂತೆ ಲಾವಣ್ಯ ಹಾಗೂ ಆಕೆಯ ಪತಿ ವಾಸುಗೆ ದುಂಬಾಲು ಬಿದ್ದಿದ್ದನಂತೆ. ಸಾಕಷ್ಟು ಬಾರಿ ಲಾವಣ್ಯ ಬುದ್ಧಿವಾದ ಸಹ ಹೇಳಿದ್ದರಂತೆ. ಆದರೆ ಇಂದು ಮಾತುಕತೆಗೆ ಬಂದಿದ್ದ ವಿಜಯ್ ಕುಮಾರ್ ಹಾಗೂ ಲಾವಣ್ಯ ನಡುವೆ ಯಾವ ಕಾರಣಕ್ಕೆ ಗಲಾಟೆಯಾಯ್ತೋ ಏನೋ ಏಕಾಏಕಿ ಚಾಕುವಿನಿಂದ ಲಾವಣ್ಯ ಕತ್ತು ಸೀಳಿ ಹತ್ಯೆಗೈದಿದ್ದಾನೆ‌.

ಇದನ್ನು ಓದಿ: ಪಟಾಕಿ ಸಿಡಿದು ರಾಜಧಾನಿಯಲ್ಲಿ 10 ಜನರಿಗೆ ಗಾಯ; ಸಿಡಿಯದ ಪಟಾಕಿ ನೋಡಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಬಾಲಕ

ಬಳಿಕ ತಾನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯೊಳಗಿನ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ನೋಡಿದಾಗ ಲಾವಣ್ಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ ಗಾಯಾಳು ವಿಜಯಕುಮಾರ್ ನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸದ್ಯ ಆರೋಪಿ ವಿಜಯಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಎರಡು ಮನೆಯವರ ವಿಚಾರಣೆ ನಡೆಸಿದ್ದಾರೆ‌.
Published by: HR Ramesh
First published: November 15, 2020, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading