• Home
  • »
  • News
  • »
  • state
  • »
  • Death Sentence: 1 ವರ್ಷದ ಬಾಲಕನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪಾಪಿ! ಕಾಮುಕನಿಗೆ ಮರಣದಂಡನೆ ಫಿಕ್ಸ್

Death Sentence: 1 ವರ್ಷದ ಬಾಲಕನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪಾಪಿ! ಕಾಮುಕನಿಗೆ ಮರಣದಂಡನೆ ಫಿಕ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಮುಕನಿಗೆ ಅದೇನಾಯಿತೋ ಏನೋ, ಮಗುವನ್ನು ಕರೆದುಕೊಂಡು ಗೊರಗುಂಟೆಪಾಳ್ಯದ ಏರ್‌ಪೋರ್ಸ್‌ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದ್ದ. ಅಲ್ಲಿ ಮಗುವಿನ ಮೇಲೆ ಅನೈಸರ್ಗಿಕ ಲೈಂಗಿಕ ದೌಜ್ಯನ್ಯ ಎಸಗಿದ್ದ. ಕೊನೆಗೆ ಮಗುವಿನ ತಲೆ ಮೇಲೆ 40 ಕೆಜಿ ಭಾರದ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದೀಗ 7 ವರ್ಷಗಳ ಬಳಿಕ ಪಾಪಿಗೆ ತಕ್ಕ ಶಿಕ್ಷೆ ವಿಧಿಸಲಾಗಿದೆ!

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಲೈಂಗಿಕ ದೌರ್ಜನ್ಯ, ಕಿರುಕುಳ (harassment) ಅತ್ಯಾಚಾರದಂತಹ ಅಪರಾಧಗಳಿಗೆ (Crime) ಭಾರತದಲ್ಲಿ (India) ಕಠಿಣ ಶಿಕ್ಷೆಗಳನ್ನು (punishments) ನೀಡಲಾಗುತ್ತದೆ. ಆದರೂ ಕಾಮುಕರು, ಅಪರಾಧಿಗಳು, ಕಿರಾತಕರು ಹೆದರೋದಿಲ್ಲ. ಶಿಕ್ಷೆ ಪ್ರಮಾಣ ಎಷ್ಟು ಹೆಚ್ಚಾಗುತ್ತಿದೆಯೋ ಅಪರಾಧ ಪ್ರಮಾಣವೂ ಅಷ್ಟೇ ಹೆಚ್ಚಾಗುತ್ತಾ ಇದೆ. ಕಾಮುಕರು ಮನೆಯೊಳಗಿನ ಹೆಂಗಸರು, ಮಕ್ಕಳು, ವೃದ್ಧರು, ಕೊನೆಗೆ ಪ್ರಾಣಿಗಳನ್ನೂ ಬಿಡದೇ ಕಾಡುತ್ತಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ (Bengaluru) ಇಂಥದ್ದೊಂದು ಘಟನೆ ನಡೆದಿತ್ತು. ಕೇವರ 1 ವರ್ಷದ ಬಾಲಕನ (1-year-old boy) ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಆ ಹಸುಳೆಯನ್ನು ಕೊಂದು (Murder) ಹಾಕಿದ್ದ ಪಾಪಿ. ಇದೀಗ ಆತನಿಗೆ ಮರಣ ದಂಡನೆ (Death Sentence) ವಿಧಿಸಿ, ಕೋರ್ಟ್ (Court) ಆದೇಶ ನೀಡಿದೆ.


2015ರಲ್ಲಿ ನಡೆದಿದ್ದ ಘಟನೆ


2015ರ ಸೆಪ್ಟೆಂಬರ್ 12ರಂದು ಮಧ್ಯಾಹ್ನ 2ಕ್ಕೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಇಲ್ಲಿನ ಉಲ್ಲಾಸ್ ಚಿತ್ರ ಮಂದಿರದ ಬಳಿ 1 ವರ್ಷದ ಪುಟ್ಟ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿತ್ತು. ಈ ಆರೋಪದ ಮೇಲೆ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಕರೀಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಅಲಿಯಾಸ್‌ ಹಲ್ಲುಜ್ಜ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಇದೀಗ ರಾಜ್ಯ ಬೆಂಗಳೂರಿನ 1ನೇ ತ್ವರಿತಗತಿಯ ನ್ಯಾಯಾಲಯ ಅಪರಾಧಿಗೆ ಮರಣ ದಂಡನೆ ವಿಧಿಸಿ ಮಹತ್ವದ ಆದೇಶ ನೀಡಿದೆ.


ಕಾಮುಕ ಮನೆಯಲ್ಲಿಯೇ ಬಾಲಕನನ್ನು ಬಿಟ್ಟು ಹೋಗಿದ್ದ ತಂದೆ


ಮೃತ ಬಾಲಕನ ತಂದೆಗೆ ಆರೋಪಿ ಮೂರ್ತಿ ಅಲಿಯಾಸ್ ಹಲ್ಲುಜ್ಜು ಎಂಬಾತ ಪರಿಚಯವಿದ್ದರು. 2015ರ ಸೆ.12ರಂದು ಮಧ್ಯಾಹ್ನ 2ಕ್ಕೆ ಉಲ್ಲಾಸ್‌ ಚಿತ್ರಮಂದಿರ ಬಳಿ ಮೂರ್ತಿಗೆ ಬಾಲಕ ಮತ್ತು ಆತನ ತಂದೆ ಸಿಕ್ಕಿದ್ದರು. ತನಗೆ ತುರ್ತು ಕೆಲಸ ಇರುವ ಹಿನ್ನೆಲೆಯಲ್ಲಿ ತಂದೆ ತನ್ನ 1 ವರ್ಷದ ಮಗನನ್ನು ಕಾಮುಕನ ಬಳಿ ಕೊಟ್ಟು, ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿ, ತನ್ನ ತುರ್ತು ಕೆಲಸಕ್ಕೆ ತೆರಳಿದ್ದರು.


1 ವರ್ಷದ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ


ಈ ಸಂದರ್ಭದಲ್ಲಿ ಕಾಮುಕನಿಗೆ ಅದೇನಾಯಿತೋ ಏನೋ, ಮಗುವನ್ನು ಕರೆದುಕೊಂಡು ಗೊರಗುಂಟೆಪಾಳ್ಯದ ಏರ್‌ಪೋರ್ಸ್‌ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದ್ದ. ಅಲ್ಲಿ ಮಗುವಿನ ಮೇಲೆ ಅನೈಸರ್ಗಿಕ ಲೈಂಗಿಕ ದೌಜ್ಯನ್ಯ ಎಸಗಿದ್ದ.


ಅತ್ಯಾಚಾರದ ಬಳಿಕ ಕಂದಮ್ಮನ ಕೊಲೆ


ಕಾಮುಕನ ವರ್ತನೆ ಹಾಗೂ ಕಿರುಕುಳದಿಂದ ಭಯಪಟ್ಟ ಮಗು ಜೋರಾಗಿ ಅಳೋದಕ್ಕೆ ಶುರು ಮಾಡಿದೆ. ಆಗ ಗಾಬರಿಗೊಂಡ ಕಾಮುಕ ಮಗುವನ್ನು ಕೊಲ್ಲಲು ಯೋಚಿಸಿದ್ದಾನೆ. ಅಲ್ಲೇ ಬಿದ್ದಿದ್ದ ಸುಮಾರು 40 ಕೆಜಿ ತೂಕದ ಸಿಮೆಂಟ್ ಮೌಲ್ಡ್‌ ಕಲ್ಲನ್ನು ಮಗುವಿನ ತಲೆ ಮೇಲೆ ಎತ್ತಿ ಹಾಕಿ, ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಅಲ್ಲೇ ಬಿದ್ದಿದ್ದ ಕಸ ಇತ್ಯಾದಿಗಳನ್ನು ಮಗುವಿನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.


7 ವರ್ಷಗಳ ಸುದೀರ್ಘ ತನಿಖೆ


ಪ್ರಕರಣ ಬೆಳಕಿಗೆ ಬಂದ ನಂತರ ರಾಜಗೋಪಾಲನಗರ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯ, ಎಂಟು ಜನರ ಸಾಕ್ಷ್ಯ ಪರಿಗಣಿಸಿ ದೋಷಿಗೆ ಮರಣ ದಂಡನೆ ವಿಧಿಸಿದೆ. ಪ್ರಾಸಿಕ್ಯೂಷನ್‌ ಪರ ಸರ್ಕಾರಿ ಅಭಿಯೋಜಕರಾದ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.


ಇದನ್ನೂ ಓದಿ: Crime News: ಹೆಂಡ್ತಿ, ಮಕ್ಕಳಿದ್ದ ಮನೆಗೆ ಕೊಳ್ಳಿ ಇಟ್ಟ ನೀಚ; ಇತ್ತ ನೀರಲ್ಲಿ ಮುಳುಗಿ ತಂದೆ-ಮಗ ಸಾವು


ಕಾಮುಕರನಿಗೆ ಮರಣ ದಂಡನೆ ವಿಧಿಸಿದ ಕೋರ್ಟ್


ಪ್ರಕರಣದ ವಿಚಾರಣೆ ನಡೆಸಿದ ನಗರದ 1ನೇ ತ್ವರಿತಗತಿಯ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್‌.ರೂಪಾ ಅವರು, ದೋಷಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 302 ಅಡಿ (ಕೊಲೆ) ಮರಣ ದಂಡನೆ ವಿಧಿಸಿದ್ದಾರೆ. ಐಪಿಸಿ ಸೆಕ್ಷನ್‌ 377 (ಅನೈಸರ್ಗಿಕ ಲೈಂಗಿಕ ಕ್ರಿಯೆ) ಮತ್ತು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೋ) ಸೆಕ್ಷನ್‌ 5 ಹಾಗೂ 6 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು .50 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ, ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

Published by:Annappa Achari
First published: