HOME » NEWS » State » A MAN WHO DIED DUE NOT GET TREATMENT AT THE RIGHT TIME IN BENGALURU RH

ತೀವ್ರ ಅನಾರೋಗ್ಯ ಇದ್ದ ವ್ಯಕ್ತಿಗೆ ಸಿಗಲಿಲ್ಲ ಚಿಕಿತ್ಸೆ; ಐದಾರು ಆಸ್ಪತ್ರೆ ಸುತ್ತಿ ಆಟೋದಲ್ಲೇ ಮೃತಪಟ್ಟ ನತದೃಷ್ಟ

ಒಂದು ಕಡೆ ಬೆಂಗಳೂರು ನಗರದಲ್ಲಿ ಕೋವಿಡ್​ನಿಂದ ಜನರು ಸಾಯುತ್ತಾ ಇದ್ದರೆ ಇನ್ನು ಕೆಲವರು ಕೋವಿಡ್ ಇಲ್ಲದಿದ್ದರೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾಯುತ್ತಾ ಇದ್ದಾರೆ. ರೋಗಿಗಳನ್ನು ದಾಖಲಿಸಿಕೊಳ್ಳದೆ, ಚಿಕಿತ್ಸೆ ನೀಡದೆ ಅಮಾನವೀಯವಾಗಿ ವರ್ತಿಸುವ ಇಂತಹ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

news18-kannada
Updated:August 2, 2020, 9:01 PM IST
ತೀವ್ರ ಅನಾರೋಗ್ಯ ಇದ್ದ ವ್ಯಕ್ತಿಗೆ ಸಿಗಲಿಲ್ಲ ಚಿಕಿತ್ಸೆ; ಐದಾರು ಆಸ್ಪತ್ರೆ ಸುತ್ತಿ ಆಟೋದಲ್ಲೇ ಮೃತಪಟ್ಟ ನತದೃಷ್ಟ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಬೆಂಗಳೂರಿನಲ್ಲಿ ಮತ್ತೆ ಆಸ್ಪತ್ರೆಗಳ ನಿರ್ಲಕ್ಷ್ಯ ಮುಂದುವರೆದಿದೆ. ಅಸ್ತಮಾ‌ ಇದ್ದ 55 ವರ್ಷದ ವ್ಯಕ್ತಿ ಚಿಕಿತ್ಸೆ ಪಡೆಯೋಕೆ ಆಗದೆ ಆಟೋದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಗರದಲ್ಲಿ ನಡೆದಿದೆ.

55 ವರ್ಷದ ವ್ಯಕ್ತಿ ಅಸ್ತಮಾ ಜಾಸ್ತಿ ಆದ ಕಾರಣ ಇಂದು ಮುಂಜಾನೆ ಆಸ್ಪತ್ರೆಗೆ ಅಂತ ತನ್ನ ಮಗಳು ಹಾಗೂ ಮಗನ‌ ಜೊತೆ ಬಂದಿದ್ದಾರೆ. ಆಟೋದಲ್ಲಿ ಮೊದಲಿಗೆ ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಇಲ್ಲ ಹಾಗೂ ಬೆಡ್ ಇಲ್ಲ ಅಂತ ವಾಪಸ್ ಕಳುಹಿಸಿದ್ದಾರೆ‌. ನಂತರ ಅದೇ ಆಟೋದಲ್ಲಿ ಶೋಭಾ ಆಸ್ಪತ್ರೆಗೆ ಹೋಗಿದ್ದು ಅಲ್ಲಿಯೂ ಬೆಡ್ ಇಲ್ಲ ಅಂತ ವಾಪಸ್ ಕಳುಹಿಸಿದ್ದಾರೆ. ಕೊನೆಗೆ ಸರ್ಕಾರಿ ಆಸ್ಪತ್ರೆಯಲ್ಲಾದರೂ ಚಿಕಿತ್ಸೆ ಸಿಗಬಹುದು ಅಂತ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅಲ್ಲಿಯೂ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಕೊನೆಗೆ ಸತತ ಐದು ಗಂಟೆಗಳ ಸುತ್ತಾಟದ ಬಳಿಕ ಕೊನೆಗೆ ಕೆ.ಸಿ. ‌ಜನರಲ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಒಳಗಡೆ ಸಹ ಬಿಟ್ಟಿಲ್ಲವಂತೆ. ಈ ವೇಳೆ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಮುಂಭಾಗ ಆಟೋದಲ್ಲಿಯೇ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಣ್ಣ ಮುಂದೆಯೇ ತಂದೆಯ ಸಾವನ್ನು ಕಂಡ ಮಕ್ಕಳು ಸರ್ಕಾರ ಹಾಗೂ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪ್ರತಿಬಾರಿಯೂ ಎರ್ಮಜೆನ್ಸಿ‌ಇರುವ ರೋಗಿಗೆ ಮೊದಲು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಬೇಕು ಅಂತ ಹೇಳಿದೆ. ಆದರೆ ಇಂತಹ ಆಸ್ಪತ್ರೆಗಳ ಅವಾಂತರಕ್ಕೆ ಏನ್ ಹೇಳಬೇಕು. ಸರ್ಕಾರದ ಮಾತಿಗೂ ಸ್ವಲ್ಪವೂ ಬೆಲೆ ಕೊಡದ ಇಂತಹ ಆಸ್ಪತ್ರೆಗಳ ಮೇಲೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನೋಡಬೇಕು.

ಇದನ್ನು ಓದಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದೆ ರಾಶಿ ರಾಶಿ ಕೊರೋನಾ ತ್ಯಾಜ್ಯ!

ಒಂದು ಕಡೆ ಬೆಂಗಳೂರು ನಗರದಲ್ಲಿ ಕೋವಿಡ್​ನಿಂದ ಜನರು ಸಾಯುತ್ತಾ ಇದ್ದರೆ ಇನ್ನು ಕೆಲವರು ಕೋವಿಡ್ ಇಲ್ಲದಿದ್ದರೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾಯುತ್ತಾ ಇದ್ದಾರೆ. ರೋಗಿಗಳನ್ನು ದಾಖಲಿಸಿಕೊಳ್ಳದೆ, ಚಿಕಿತ್ಸೆ ನೀಡದೆ ಅಮಾನವೀಯವಾಗಿ ವರ್ತಿಸುವ ಇಂತಹ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
Published by: HR Ramesh
First published: August 2, 2020, 9:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories