• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Crime News: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆಯ ಮಗಳನ್ನೇ ಅತ್ಯಾಚಾರ ಎಸಗಿದ ಕಾಮುಕ ಅಂದರ್

Crime News: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆಯ ಮಗಳನ್ನೇ ಅತ್ಯಾಚಾರ ಎಸಗಿದ ಕಾಮುಕ ಅಂದರ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬಾಲಕಿಯ ಚಿಕ್ಕಪ್ಪ ಭೇಟಿ ಮಾಡಲು ಬಂದಿದ್ದ ವೇಳೆ ಆಕೆ ತನ್ನ ಎಲ್ಲಾ ಕಷ್ಟವನ್ನು ಚಿಕ್ಕಪ್ಪನ ಬಳಿ ಹೇಳಿಕೊಂಡಿದ್ದಾಳೆ. ಆಗ ಆತ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ದೂರು ನೀಡಿದ್ದಾರೆ. ಬಾಲಕಿ ಪೊಲೀಸರ ಬಳಿ ವಿವರವಾಗಿ ಹೇಳಿದಾಗ ಕಾಮುಕ ಕೇದಾರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Rajasthan, India
 • Share this:

ರಾಜಸ್ತಾನ: ಲಿವ್‌ ಇನ್ ಟುಗೆದರ್‌ನಲ್ಲಿದ್ದ (Live in Telationship) ವ್ಯಕ್ತಿಯೊಬ್ಬ ಆಕೆಯ ಅಪ್ರಾಪ್ತ ವಯಸ್ಸಿನ ಮಗಳ (Minor Girl) ಮೇಲೆ ನಿರಂತರ ಅತ್ಯಾಚಾರ (Crime news) ಎಸಗಿರುವ ಅಮಾನವೀಯ (Harassment) ಘಟನೆ ರಾಜಸ್ತಾನದಲ್ಲಿ (Rajasthan) ನಡೆದಿದೆ. ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು (Rajasthan Police) ಆತನನ್ನು ಜೈಲಿಗೆ ತಳ್ಳಿದ್ದಾರೆ.


ರಾಜಸ್ತಾನದ ಬರಾನ್ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿ ಕೇದಾರ್‌ ಸಿಂಗ್ (48) (Kedar Singh) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಕಾಮುಕ ಕೇದಾರ್ ಸಿಂಗ್ ಸುಮಾರು ಎಂಟು ಒಂಭತ್ತು ತಿಂಗಳಿಂದ 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮಾಡುತ್ತಾ ಬಂದಿದ್ದು, ಇದರ ಪರಿಣಾಮ ಸಂತ್ರಸ್ತ ಬಾಲಕಿ ಸದ್ಯ ಗರ್ಭಿಣಿಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಚಾಬ್ರಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Inspiring Story: 12ನೇ ವಯಸ್ಸಿನಲ್ಲಿ ಅತ್ಯಾಚಾರ, ಮನೆಯಲ್ಲೂ ಛೀಮಾರಿ! ಇಂದು ಏಷ್ಯಾದ ನಂಬರ್​ 1 ಶ್ರೀಮಂತ ಟ್ರಾನ್ಸ್​​ಜೆಂಡರ್​!


ಬಾಲಕಿ 23 ವಾರಗಳ ಗರ್ಭಿಣಿ!


ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಬಾಲಕಿಯ ತಾಯಿ ಜೊತೆ ಕಾಮುಕ ಕೇದಾರ್ ಸಿಂಗ್ ಕಳೆದ ಅನೇಕ ವರ್ಷಗಳಿಂದ ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ. ಆದರೆ ಬಾಲಕಿಯ ತಾಯಿ ಕಳೆದ ಹನ್ನೊಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಆರೋಪಿಯು ಆಕೆಯ ಮಗಳಿಗೆ ಲೈಂಗಿಕ ಹಿಂಸೆ ನೀಡಲು ಪ್ರಾರಂಭ ಮಾಡಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಆಕೆ 23 ವಾರಗಳ ಗರ್ಭಿಣಿ (Minor Girl Pragnant) ಎಂದು ತಿಳಿದು ಬಂದಿದೆ.


ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?


ಇತ್ತೀಚೆಗೆ ಬಾಲಕಿಯ ಚಿಕ್ಕಪ್ಪ ಆಕೆಯನ್ನು ಭೇಟಿ ಮಾಡಲು ಬಂದಿದ್ದ, ಹೀಗೆ ಮಾತನಾಡುತ್ತಿರುವಾಗ ಆಕೆ ತನ್ನ ಎಲ್ಲಾ ಕಷ್ಟವನ್ನು ಚಿಕ್ಕಪ್ಪನ ಬಳಿ ಹೇಳಿಕೊಂಡಿದ್ದಾಳೆ. ಆಗ ಆಕೆಯ ಚಿಕ್ಕಪ್ಪ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ದೂರು ನೀಡಿದ್ದಾನೆ. ಆಗ ಬಾಲಕಿ ಪೊಲೀಸರ ಬಳಿ ವಿವರವಾಗಿ ಹೇಳಿದಾಗ ಪೊಲೀಸರು ಕಾಮುಕ ಕೇದಾರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿ ಆತನ ಬಂಧನಕ್ಕೆ ಬಲೆ ಬೀಸಿದ್ದರು.


ಇದನ್ನೂ ಓದಿ : Crime news: ಅತ್ಯಾಚಾರಕ್ಕೆ ಯತ್ನಿಸಿದವನ ತುಟಿ ಕಚ್ಚಿ ತುಂಡರಿಸಿದ ಯುವತಿ! ಮಾನಗೇಡಿ ಕೃತ್ಯಕ್ಕೆ ಬಂದವ ಈಗ ಆಸ್ಪತ್ರೆ ಪಾಲು!


ಆರೋಪಿ ನ್ಯಾಯಾಂಗ ಬಂಧನಕ್ಕೆ


ಸದ್ಯ ಪೊಲೀಸರು ಆರೋಪಿ ಕೇದಾರ್‌ ಸಿಂಗ್‌ನನ್ನು ಬಂಧಿಸಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದ ಪೊಲೀಸರು


ಸದ್ಯ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಬಾಲಕಿಯನ್ನು ಮಕ್ಕಳ ಆಶ್ರಯಧಾಮಕ್ಕೆ ಕಳುಹಿಸಲಾಗಿದ್ದು, ಅಲ್ಲಿಯೂ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಬಾಲಕಿಯ ಗರ್ಭಪಾತಕ್ಕೆ ಪೊಲೀಸರು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: FIFA World Cup 2022: ಫಿಫಾ ವಿಶ್ವಕಪ್​ ಬಗ್ಗೆ ವರದಿ ಮಾಡ್ತಿದ್ದಾಗಲೇ ಕಳ್ಳತನ! ಲೈವ್​ನಲ್ಲೇ ಪತ್ರಕರ್ತೆಯ ವ್ಯಾಲೆಟ್ ದೋಚಿದ ಕಳ್ಳರು!

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು