• Home
  • »
  • News
  • »
  • state
  • »
  • KGF Chapter 2 ಸಿನಿಮಾಗೆ ಹೋಗೋಣ ಅಂದವ ಮನೆಗೆ ಬರಲೇ ಇಲ್ಲ! ಕಾದು ಕುಳಿತವಳಿಗೆ ಬಂದಿದ್ದು ಗಂಡನ ಸಾವಿನ ಸುದ್ದಿ!

KGF Chapter 2 ಸಿನಿಮಾಗೆ ಹೋಗೋಣ ಅಂದವ ಮನೆಗೆ ಬರಲೇ ಇಲ್ಲ! ಕಾದು ಕುಳಿತವಳಿಗೆ ಬಂದಿದ್ದು ಗಂಡನ ಸಾವಿನ ಸುದ್ದಿ!

ಕೊಲೆಯಾದ ಗಜೇಂದ್ರ ಸಿಂಗ್

ಕೊಲೆಯಾದ ಗಜೇಂದ್ರ ಸಿಂಗ್

ಮಧ್ಯಾಹ್ನ 3 ಗಂಟೆ ಸುಮಾರಿ ಗಜೇಂದ್ರ ಹಾಗೂ ಶಿವರಾಜ್ ಪೂಜಾರ್ ಅಲಿಯಾಸ್ ಮೊಬೈಲ್ ಶಿವ್ಯಾ ಮಧ್ಯೆ ಸಣ್ಣಗೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ.

  • Share this:

ಗದಗ: ಹೆಂಡತಿಗೆ (Wife) ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ (Cinema) ತೋರಿಸುತ್ತೇನೆ ಅಂತಾ ಹೇಳಿ ಕೆಲಸಕ್ಕೆ ಹೋಗಿದ್ದ ಪತಿ. ಮರಳಿ ಮನೆಗೆ (Home) ಬರುವ ವೇಳೆ  ರಾಜಕೀಯ ವೈಷಮ್ಯ ದಿಂದ ಅವಳ ಪತಿಯನ್ನೆ ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ (Murder) ಮಾಡಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ರಾಜಕೀಯ (Political) ಗಲಾಟೆಯಲ್ಲಿ (Clash) ಆತ ಮೃತಪಟ್ಟಿದ್ದಾನೆ. ಗದಗ (Gadag) ಜಿಲ್ಲೆಯ ಬೆಟಗೇರಿಯ ಮಂಜುನಾಥ್ ಬಡಾವಣೆಯಲ್ಲಿ ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಚಾಕು ಇರಿತಕ್ಕೆ ಓರ್ವ ಬಲಿಯಾಗಿದ್ದಾನೆ. ಬೆಟಗೇರಿಯ ಮಂಜುನಾಥ ಬಡಾವಣೆಯ ಗಜೇಂದ್ರ ಸಿಂಗ್ ಸೊಲ್ಲಾಪುರ (30) ಹತ್ಯೆಯಾದ ಯುವಕ..


ಮಾತಿಗೆ ಮಾತು ಬೆಳೆದು ಗಲಾಟೆ


ಮಧ್ಯಾಹ್ನ 3 ಗಂಟೆ ಸುಮಾರಿ ಗಜೇಂದ್ರ ಹಾಗೂ ಶಿವರಾಜ್ ಪೂಜಾರ್ ಅಲಿಯಾಸ್ ಮೊಬೈಲ್ ಶಿವ್ಯಾ ಮಧ್ಯೆ ಸಣ್ಣಗೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ.. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಜೇಂದ್ರ, ಶಿವರಾಜ್, ಮಲ್ಲೇಶ್ ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಆದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಗಜೇಂದ್ರ ಅಲಿಯಾಸ್ ಗಣೇಶ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.


ಸ್ವಲ್ಪದರಲ್ಲೇ ಮಿಸ್ ಆಗಿತ್ತು ಟಾರ್ಗೆಟ್


ಬೆಟಗೇರಿಯ ಮಂಜುನಾಥ್ ಬಡಾವಣೆಯ ಡಂಬಳದವರ ಅಂಗಡಿ ಬಳಿ ಕೂತಿದ್ದ ಶಿವು ಪೂಜಾರ ಅಲಿಯಾಸ್ (ಮೊಬೈಲ್ ಶಿವ್ಯಾ) ಆ್ಯಡ್ ಟೀಮ್ ಕೂತಿತ್ತಂತೆ.. ಸ್ನೇಹಿತರಾದ ಎಲ್ಲಪ್ಪ ಭಜಂತ್ರಿ, ಮಂಜು ಪೂಜಾರಿ, ಉಮೇಶ್, ಪ್ರಕಾಶ್ ಸುಣಗಾರ ಜೊತೆ ಶಿವು ಕೆಜಿಎಫ್ ಸಿನಿಮಾ ನೋಡೋ ಪ್ಲಾನ್ ಮಾಡಿಕೊಂಡಿದ್ರಂತೆ.. ಆದ್ರೆ ಈ ವೇಳೆ ಗಜೇಂದ್ರನ ಸಹೋದರ ರವಿ ಸೊಲ್ಲಾಪುರ ಎದ್ರಿಗೆ ಬಂದಿದ್ದ..


ಹಳೆಯ ವೈಷಮ್ಯದ ಹಿನ್ನೆಲೆ ಹಿನ್ನೆಲೆ ರವಿ ಹಾಗು ಶಿವು ಮಧ್ಯೆ ಸಣ್ಣಗೆ ಗಲಾಟೆ ನಡೆದಿದೆ‌.. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿತ್ತಂತೆ.. ಅದೇಗೋ ಅಲ್ಲಿಂದ ರವಿ ತಪ್ಪಿಸಿಕೊಂಡು ಓಡಿ ಬಂದಿದಾನೆ..


ಇದನ್ನೂ ಓದಿ: Hubballi: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ: ಮತೀಯ ಶಕ್ತಿಗಳನ್ನು ಮಟ್ಟ ಹಾಕ್ತೇವೆ ಎಂದ ಅರಗ ಜ್ಞಾನೇಂದ್ರ


ಕೊಲೆ ಬಳಿಕ ಬೈಕ್‌ಗೆ ಬೆಂಕಿ


ಈ ಮಧ್ಯೆ ಕೆಲಸ ಮುಗುಸ್ಕೊಂಡು ಗಜೇಂದ್ರ ಅದೇ ಮಾರ್ಗವಾಗಿ ಬರ್ತದ್ನಂತೆ.. ಮೊದ್ಲೆ ರೊಚ್ಚಿಗೆದ್ದಿದ್ದ ಶಿವು ಆ್ಯಡ್ ಟೀಮ್ ಗಜೇಂದ್ರನ ಮೇಲೂ ಮುಗಿಬಿದ್ದಿದ್ರಂತ್ರೆ.. ಪ್ರತಿರೋಧ ವ್ಯಕ್ತಪಡಿಸಿದ್ದ ಗಜೇಂದ್ರ ಅವರ ಕೈಯಲ್ಲಿದ್ದ ಚಾಕು ಕಸಿದು ಮರು ಹಲ್ಲೆಗೆ ಪ್ರಯತ್ನಿಸಿದ್ನಂತೆ.. ಆದ್ರೆ, ಗಲಾಟೆಯಲ್ಲಿ ಗಜೇಂದ್ರನ ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯಗಳಾಗಿವೆ.. ಶಿವು ಪೂಜಾರ್ ಮಲ್ಲೇಶನಿಗೂ ಗಾಯವಾಗಿದೆ‌‌‌.. ನಂತ್ರ ಸಿಟ್ಟಿಗೆದ್ದ ಶಿವು ಸಪೋರ್ಟರ್ಸ್ ಗಜೇಂದ್ರ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ ಅನ್ನೋ ಆರೋಪವೂ ಇದೆ.


ಬುದ್ಧಿ ಹೇಳಿದ್ದಕ್ಕೆ ಕೊಲೆ ಮಾಡಿದ್ರಾ ಪಾಪಿಗಳು?


ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಯುವಕ ಯುವತಿಯರ ಮೊಬೈಲ್ ನಂಬರ್ ಸಂಗ್ರಹಿಸಿ, ಡಿಜಿಟಲ್ ಪ್ರಚಾರ ಮಾಡ್ಲಾಗ್ತಿತ್ತಂತೆ‌.. ಲೀಸ್ಟ್ ನಲ್ಲಿದ್ದ ಹುಡುಗಿಯರ ನಂಬರ್ ಇಟ್ಕೊಂಡು ಶಿವರಾಜ್ ಕಡೆಯ ಕೆಲ ಹುಡುಗ್ರು ಮೆಸೇಜ್ ಮಾಡೋದು ಮಾಡ್ತಿದ್ರಂತೆ.. ಈ ವಿಚಾರವನ್ನ ಮನೆ ಬಳಿಯ ಓರ್ವ ಯುವತಿ ಗಜೇಂದ್ರನಿಗೆ ತಿಳಿಸಿದ್ಲಂತೆ..


ಹೀಗಾಗಿ ಗಜೇಂದ್ರ ಆ ಯುವಕರನ್ನ ಕರೆದು ಬುದ್ಧಿ ಹೇಳಿದ್ರಂತೆ.. ಇದ್ರಿಂದ ಕೆರಳಿದ್ದ ಶಿವು, ಗಜೇಂದ್ರ ಮೇಲೆ ಸಿಟ್ಟಾಗಿದ್ದ.. ಹೀಗಾಗಿ ಹಲ್ಲೆ ಮಾಡಿದ್ದ ಅನ್ನೋ ಮಾತನ್ನ ಗಜೇಂದ್ರ ಕುಟುಂಬ ಹೇಳ್ತಿದೆ..


ಚುನಾವಣೆ ಹಳೆ ದ್ವೇಷಕ್ಕೆ ನಡೆಯಿತಾ ಮರ್ಡರ್?


ಚುನಾವಣೆ ಹಳೆಯ ವೈಷಮ್ಯವೇ ಚಾಕು ಇರಿತಕ್ಕೆ ಕಾರಣ ಎನ್ನಲಾಗ್ತಿದೆ.. ಡಿಸೆಂಬರ್ ನಲ್ಲಿ ನಡೆದ ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದ ಗಜೇಂದ್ರ ಸಿಂಗ್ ಬಿಜೆಪಿಯ ಶಿವು ವೈರುದ್ಧ ಕಟ್ಕೊಂಡಿದ್ದ.. ನಾಲ್ಕನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಅಕ್ಕಿ ಪರ ಗಜೇಂದ್ರ ಪ್ರಚಾರ ಮಾಡಿದ್ದ.. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಶಿವರಾಜ್ ಪೂಜಾರ್ ದ್ವೇಷ ಕಾರುತ್ತಿದ್ನಂತೆ.. ಚುನಾವಣೆಯಲ್ಲಿ ಶಿವರಾಜ್ ಸಂಬಂಧಿ ದೀಪಾ ಪೂಜಾರ್ ಸೋತಿದ್ದು ದ್ವೇಷಕ್ಕೆ ಕಾರಣ ಎನ್ನಲಾಗಿದೆ.. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಗದ್ದಲ ಗಲಾಟೆ ನಡೀತಿತ್ತು ಎನ್ನಲಾಗ್ತಿದೆ..


ಇದನ್ನೂ ಓದಿ: Heavy Rain: ಕೋಟೆನಾಡಿನ ಜನರನ್ನು ಕಂಗೆಡಿಸಿದ ಭಾರೀ ಮಳೆ; ಬಿರುಗಾಳಿ ಅಬ್ಬರಕ್ಕೆ ಅಡಿಕೆ-ತೆಂಗು ನಾಶ


ಸದ್ಯ ಶಿವು, ಮಲ್ಲೇಶ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದಾರೆ.. ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸ್ತಿದ್ದಾರೆ.

Published by:Annappa Achari
First published: