HOME » NEWS » State » A MAN SAVED FROM VILLAGERS IN DHARAWAD WHO WASH AWAY IN WATER LG

ನೋಡ ನೋಡುತ್ತಲೇ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ; ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬದುಕುಳಿದ..!

ಹಳ್ಳದಲ್ಲಿ ತೇಲಿ ಹೋಗುತ್ತಿದ್ದ ವ್ಯಕ್ತಿಯನ್ನು ಮಲ್ಲಪ್ಪ ವಟ್ನಾಳ ಎಂದು ಗುರುತಿಸಲಾಗಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ವ್ಯಕ್ತಿಗೆ ಹಗ್ಗ ನೀಡಿ ಕೆಲ ಯುವಕರು ಸಹ ಹಳ್ಳದಲ್ಲಿ ಹೋಗಿ ರಕ್ಷಣೆ ಮಾಡಿದ್ದಾರೆ.

news18-kannada
Updated:August 5, 2020, 6:30 PM IST
ನೋಡ ನೋಡುತ್ತಲೇ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ; ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬದುಕುಳಿದ..!
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿರುವ ದೃಶ್ಯ
  • Share this:
ಧಾರವಾಡ(ಆ.05): ವ್ಯಕ್ತಿಯೋರ್ವ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು, ಕೂಡಲೇ ರಕ್ಷಣೆಗಿಳಿದ ಗ್ರಾಮಸ್ಥರು, ಯುವಕರು ಹಾಗೂ ಹಗ್ಗದ ಸಹಾಯದಿಂದ‌ ವ್ಯಕ್ತಿಯನ್ನು‌ ರಕ್ಷಿಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದೆ. ಮೊರಬ ಗ್ರಾಮಕ್ಕೆ ಆಗಮಿಸಿದ್ದ ಹೆಳವ ಹಳ್ಳದಲ್ಲಿ ತೇಲಿ ಹೋಗುತ್ತಿದ್ದ. ಗ್ರಾಮದ ಹೊರ ವಲಯದಲ್ಲಿನ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮೇಲೆ ಬರುವಾಗ  ಹಳ್ಳದ‌ ನೀರಿನ ಮಟ್ಟ ಏಕಾಏಕಿ ಹೆಚ್ಚಾಗಿ ತೇಲಿ ಹೋಗಿ ಹಳ್ಳದಲ್ಲಿ ಸಿಲುಕಿದ್ದ.

ಬದುಕುಳಿದ ವ್ಯಕ್ತಿ


ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಗ್ರಾಮಕ್ಕೆ ಬಂದಿದ್ದ ಹೆಳವ ಬದುಕುಳಿದಿದ್ದಾರೆ. ಹಳ್ಳದಲ್ಲಿ ತೇಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಗ್ಗ ಬಿಟ್ಟು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಹಳ್ಳದಲ್ಲಿ ತೇಲಿ ಹೋಗುತ್ತಿದ್ದ ವ್ಯಕ್ತಿಯನ್ನು ಮಲ್ಲಪ್ಪ ವಟ್ನಾಳ ಎಂದು ಗುರುತಿಸಲಾಗಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ವ್ಯಕ್ತಿಗೆ ಹಗ್ಗ ನೀಡಿ ಕೆಲ ಯುವಕರು ಸಹ ಹಳ್ಳದಲ್ಲಿ ಹೋಗಿ ರಕ್ಷಣೆ ಮಾಡಿದ್ದಾರೆ.


Youtube Video

ಮಳೆರಾಯನ ಆರ್ಭಟ ಹೆಚ್ಚಾದರೆ ಸಾಕು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಹಳ್ಳದಲ್ಲಿ ತೇಲು ಹೋಗುವ ಪ್ರಕರಣಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾದ್ರೆ ಸಾಕು ತುಪ್ಪರಿ ಹಳ್ಳ, ಬೆಣ್ಣಿ ಹಳ್ಳ ತುಂಬಿ ಹರಿಯುತ್ತದೆ. ಇದರಿಂದ ಹಳ್ಳದ ಅಕ್ಕಪಕ್ಕದ ಗ್ರಾಮಗಳಿಗೂ ಆತಂಕ ಸೃಷ್ಟಿ ಮಾಡುತ್ತಲೇ ಇವೆ.
Published by: Latha CG
First published: August 5, 2020, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories