ಜೀವದ ಹಂಗು ತೊರೆದು ಕುರಿಗಾಹಿ ರಕ್ಷಿಸಿದ ಎನ್​ಡಿಆರ್​ಎಫ್ ತಂಡ; ಕೊನೆಗೂ ಯಶಸ್ವಿಯಾದ ಸತತ 7 ಗಂಟೆ ಕಾರ್ಯಾಚರಣೆ

ಖುದ್ದು ಸುರಪುರ ಶಾಸಕ ರಾಜುಗೌಡ ಅವರು ಬೆಳಿಗ್ಗೆಯಿಂದ ನದಿ ತೀರಕ್ಕೆ ಭೇಟಿ ನೀಡಿ ಕುರಿಗಾಹಿ ರಕ್ಷಣೆ ಮಾಡುವವರೆಗೂ ಸ್ಥಳದಲ್ಲಿಯೇ ಇದ್ದು ಕುರಿಗಾಹಿಯನ್ನು  ರಕ್ಷಣೆ ಕಾಳಜಿ  ತೊರಿದ್ದಾರೆ. ಹೈದ್ರಾಬಾದ್​ನಿಂದ ಎನ್ ಡಿಆರ್​ಎಫ್   ಕಮಾಂಡರ್ ಸಂತೋಷ ಕುಮಾರ ಅವರ 16 ಜನ ತಂಡವು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.

news18-kannada
Updated:August 9, 2020, 8:47 PM IST
ಜೀವದ ಹಂಗು ತೊರೆದು ಕುರಿಗಾಹಿ ರಕ್ಷಿಸಿದ ಎನ್​ಡಿಆರ್​ಎಫ್ ತಂಡ; ಕೊನೆಗೂ ಯಶಸ್ವಿಯಾದ ಸತತ 7 ಗಂಟೆ ಕಾರ್ಯಾಚರಣೆ
ಬದುಕುಳಿದ ಕುರಿಗಾಹಿ
  • Share this:
ಯಾದಗಿರಿ(ಆ.09): ಕಳೆದ ನಾಲ್ಕು ದಿನಗಳಿಂದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣನನ್ನು ಎನ್ ಡಿ ಆರ್ ಎಫ್ ತಂಡವು ಸತತ 7 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಕುರಿಗಾಹಿಯನ್ನು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಛಾಯಾಭಗವತಿ ದೇವಸ್ಥಾನ ತೀರದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಐಬಿ ತಾಂಡಾದ ನಿವಾಸಿ ಟೋಪಣ್ಣ ಗಡ್ಡೆಯಲ್ಲಿ ಸಿಲುಕಿದ್ದನು. ಇಂದು ಆತನನ್ನು ರಕ್ಷಣೆ ಮಾಡಲಾಗಿದೆ.

ಖುದ್ದು ಸುರಪುರ ಶಾಸಕ ರಾಜುಗೌಡ ಅವರು ಬೆಳಿಗ್ಗೆಯಿಂದ ನದಿ ತೀರಕ್ಕೆ ಭೇಟಿ ನೀಡಿ ಕುರಿಗಾಹಿ ರಕ್ಷಣೆ ಮಾಡುವವರೆಗೂ ಸ್ಥಳದಲ್ಲಿಯೇ ಇದ್ದು ಕುರಿಗಾಹಿಯನ್ನು  ರಕ್ಷಣೆ ಕಾಳಜಿ  ತೊರಿದ್ದಾರೆ. ಹೈದ್ರಾಬಾದ್​ನಿಂದ ಎನ್ ಡಿಆರ್​ಎಫ್   ಕಮಾಂಡರ್ ಸಂತೋಷ ಕುಮಾರ ಅವರ 16 ಜನ ತಂಡವು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.

ಕುರಿ ಬಿಟ್ಟು ಬರಲು ಹಿಂದೇಟು...!

ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡ ಕುಟುಂಬವು ಈಗ ಕುರಿ ಬಿಟ್ಟು ಬರುವದು ಹೇಗೆ? ಅವುಗಳ ಜೀವಕ್ಕೆ ಅಪಾಯ ಆದರೆ ಹೇಗೆ? ಎಂದು ಟೋಪಣ್ಣ ಕುರಿಗಳು ಬಿಟ್ಟು ಬರಲು ಹಿಂದೇಟು ಹಾಕಿದ್ದಾನೆ. ನಂತರ ತಂಡದ ಸದಸ್ಯರು ಆತನನ್ನು ಮನವೊಲಿಸಿ ಕರೆತರುವ ಕೆಲಸ ಮಾಡಿದ್ದಾರೆ. ಒಂದು ಶ್ವಾನದೊಂದಿಗೆ ಟೋಪಣ್ಣ ಬೋಟ್ ಮೂಲಕ ಬಂದಿದ್ದಾನೆ. ನಾಯಿ ಅಂದರೆ ಪಂಚಪ್ರಾಣ ಹೀಗಾಗಿ ನಾಯಿಯನ್ನು  ತೆಗೆದುಕೊಂಡು ಬಂದಿದ್ದಾನೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕುರಿಗಾಹಿ ಟೋಪಣ್ಣ ಮಾತನಾಡಿ, ಊಟಕ್ಕೆ ಸಮಸ್ಯೆಯಾಗಿತ್ತು, ಕುರಿಗಳ ಹಾಲು ಸೇವನೆ ಮಾಡಿದ್ದಾನೆ‌. 230 ಕುರಿಗಳು ಇವೆ‌.ನಾವು ಬಡವರು ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದನು.

ಎನ್ ಡಿ ಆರ್ ಎಫ್ ಕಾರ್ಯಕ್ಕೆ ಹರ್ಷ...!ಕೃಷ್ಣಾ ನದಿಯ ಪ್ರವಾಹದಲ್ಲಿ ಅಪಾಯ ಮೀರಿ ಕುರಿಗಾಹಿಯನ್ನು ಬೋಟ್ ಮೂಲಕ ಸುರಕ್ಷಿತವಾಗಿ ಕರೆ ತರುತ್ತಿದ್ದಂತೆ ಎಲ್ಲೆಡೆ ಜೈಕಾರ ಹಾಕಲಾಗಿತ್ತು. ನಂತರ ಶಾಸಕ ರಾಜುಗೌಡ ಅವರು ತಂಡದ ಎಲ್ಲರಿಗೂ ಸನ್ಮಾನಿಸಿ ಗೌರವಿಸಿದರು.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಾಸಕ ರಾಜುಗೌಡ ಮಾತನಾಡಿ, ಎನ್​ಡಿಆರ್​​​ಎಫ್​ ತಂಡವು ಅಪಾಯದ ನಡುವೆಯು  ರಕ್ಷಣೆ ಮಾಡಿದ್ದು, ಖುಷಿಯಾಗಿದ್ದು ಮತ್ತೆ ಯಾರು ಕೂಡ ನಡುಗಡ್ಡೆಗೆ ತೆರಳಬಾರದು. ಅದೇ ರೀತಿ ನದಿ ತೀರಕ್ಕೆ ತೆರಳಬಾರದೆಂದು ಜನರಲ್ಲಿ ಮನವಿ ಮಾಡಿದ್ದಾರೆ. ಕಳೆದ ನಾಲ್ಕು ದಿನದಿಂದ ಗಡ್ಡೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುರಿಗಾಹಿ ಈಗ ಸುರಕ್ಷಿತವಾಗಿ ಮನೆ ಸೇರಿದ್ದಾನೆ.
Published by: Latha CG
First published: August 9, 2020, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading