ಹೀಗೂ ಉಂಟೆ..? ಗೆಳೆಯರ ಸ್ನೇಹ ಪರೀಕ್ಷಿಸಲು ಈ ಭೂಪ ಮಾಡಿದ್ದೇನು ಗೊತ್ತೇ?

news18
Updated:August 30, 2018, 4:32 PM IST
ಹೀಗೂ ಉಂಟೆ..? ಗೆಳೆಯರ ಸ್ನೇಹ ಪರೀಕ್ಷಿಸಲು ಈ ಭೂಪ ಮಾಡಿದ್ದೇನು ಗೊತ್ತೇ?
news18
Updated: August 30, 2018, 4:32 PM IST
-ನ್ಯೂಸ್​ 18 ಕನ್ನಡ

ಚಿಕ್ಕಬಳ್ಳಾಪುರ,(ಆ.30): ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಟ್ವಿಟ್ಟರ್​​ ವಾಟ್ಸ್ಯಾಪ್​ಗಳು ಸಮಾಜಕ್ಕೆ  ಎಷ್ಟು ಪೂರಕವೋ ಅಷ್ಟೇ ಮಾರಕವೂ ಹೌದು. ಈ ಆಧುನಿಕ ಯುಗದಲ್ಲಿ ವಯಸ್ಸಿನ ಅಂತರವಿಲ್ಲದೆ ಬಹುತೇಕ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಜಾಲತಾಣಗಳಲ್ಲಿ ಯುವಕರಂತೂ ಹೆಚ್ಚು ಕಾಲಕಳೆಯುತ್ತಾರೆ. ರಾಜಕೀಯ ವ್ಯಕ್ತಿಗಳು ಬೇರೊಬ್ಬ ರಾಜಕಾರಣಿಯ ಕಾಲು ಎಳೆಯಲು, ಟೀಕೆ ಮಾಡಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವುದು ಹೊಸದೇನಲ್ಲ.  ಫೇಸ್​ಬುಕ್​ನಲ್ಲಿ ಹಾಕುವ ಕೆಲವು ಪೋಸ್ಟ್​ಗಳು ಕೆಲವೊಮ್ಮೆ ಅವಾಂತರಗಳನ್ನು ಸೃಷ್ಟಿಸುತ್ತದೆ. ಇಂತಹ ವಿಚಾರಗಳಿಗೆ ನಿದರ್ಶನವೆಂಬಂತೆ  ಮಹಾಶಯನೊಬ್ಬ  ಫೇಸ್​ಬುಕ್​ನಲ್ಲಿ 'ನಾಳೆ ನನ್ನ ಸಾವು' ಎಂದು ಬರೆದು ಅವಾಂತರ ಸೃಷ್ಟಿಸಿದ್ದಾನೆ.

ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಜಯಚಂದ್ರರೆಡ್ಡಿ ಎಂಬಾತ ತನ್ನ ಫೇಸ್​ಬುಕ್​ನಲ್ಲಿ 'ನಾಳೆ ನನ್ನ ಸಾವು' ಎಂದು ಬರೆದುಕೊಂಡಿದ್ದಾನೆ. ಪೋಸ್ಟ್​ ನೋಡಿ ಗಾಬರಿಗೊಂಡ ಗೆಳೆಯರು, ಸಂಬಂಧಿಕರು ಕರೆ ಮಾಡಿ ವಿಚಾರಿಸಿದ್ದಾರೆ. ಜಯಚಂದ್ರ ತನ್ನ ಗೆಳೆಯರು ತನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು ತಿಳಿಯಲು ಈ ರೀತಿ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿದೆ. ನಿಜಾಂಶ ತಿಳಿದ ತಕ್ಷಣ ಪೊಲೀಸರು, ಸಂಬಂಧಿಕರು ಯುವಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಟೇಟಸ್ ಡಿಲೀಟ್​ ಮಾಡಿ ಜಯಚಂದ್ರ ಎಸ್ಕೇಪ್​ ಆಗಿದ್ಧಾನೆ. ತಡವಾಗಿ ಬೆಳಕಿಗೆ ಬಂದ ಘಟನೆಯಿಂದ ಪೊಲೀಸ್ ಇಲಾಖೆ ಆತಂಕಕ್ಕೆ ಒಳಗಾಗಿದೆ.

ತಮಾಷೆಗಾಗಿ ಮಾಡಿದ ಇಂತಹ ಕೃತ್ಯಗಳು ಕೆಲವೊಮ್ಮೆ ಅವಾಂತರಗಳನ್ನು ಸೃಷ್ಟಿಸುತ್ತವೆ. ಜಯಚಂದ್ರ ರೆಡ್ಡಿ ಮಾಡಿದ ಅವಾಂತರದಿಂದಾಗಿ ಆತನ ಗೆಳೆಯರು ಮತ್ತು ಸಂಬಂಧಿಕರು ಗಾಬರಿಗೊಂಡಿದ್ದರೆ, ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು ಸುಳ್ಳಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಸದುಪಯೋಗ ಆಗಬೇಕೆ ಹೊರತು ದುರುಪಯೋಗವಾಗಬಾರದು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...