ಎಣ್ಣೆ ಪಾರ್ಟಿಗೆಂದು ಹೋದವನು ಗೆಳೆಯರಿಂದಲೇ ಕೊಲೆಯಾದ..!; ಕುಡಿದ ಮತ್ತಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಮೃತ ಮುನಿರಾಜು ಕೈ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದು, ಆಟೋ ಸಹ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ಸಹ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಮುನಿರಾಜು ರಾತ್ರಿ ಊಟ ಮುಗಿಸಿ ನಿದ್ರೆಗೆ ಜಾರುವವನಿದ್ದ. ಅಷ್ಟೊತ್ತಿಗೆ ಮನೆ ಬಳಿ ಆಗಮಿಸಿದ ಸ್ನೇಹಿತನೊಬ್ಬ ಕೆಲಸವಿದೆಯೆಂದು ಕರೆದೊಯ್ದಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್(ಫೆ.14): ಆತ ಆಗ ತಾನೇ ಊಟ ಮಾಡಿ ನಿದ್ರೆಗೆ ಜಾರುವವನಿದ್ದ. ಸ್ನೇಹಿತ ಕರೆದ ಎಂದು ಎಣ್ಣೆ ಪಾರ್ಟಿಗೆ ಹೋಗಿದ್ದಾನೆ. ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತರೆಲ್ಲ ಸೇರಿ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಏನಾಯ್ತೋ ಗೊತ್ತಿಲ್ಲ. ಜೊತೆಯಲ್ಲಿದ್ದ ಸ್ನೇಹಿತನನ್ನೆ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಷ್ಟಕ್ಕೂ ನಶೆಯಲ್ಲಿ ಸ್ನೇಹಿತನ ಕೊಲೆ ನಡೆದಿದ್ದಾದರೂ ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.....

ಕೊಲೆಯಾದವನ ಹೆಸರು ಮುನಿರಾಜು. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಪಂಪ್ ಹೌಸಿ ವಾಸಿ. ಈತ ಆನೇಕಲ್​ನ ಗಾಂಧಿ ಕುಟೀರ ಸಮೀಪದ ಬಸವಣ್ಣ ಬೀದಿಯ ಶ್ರೀಧರ್ ಎಂಬುವವರ ಮನೆಯಲ್ಲಿ ಸ್ನೇಹಿತರ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಲು ಹೋಗಿ ದಾರುಣವಾಗಿ ಕೊಲೆಯಾಗಿ ಹೋಗಿದ್ದಾನೆ. ಘಟನೆ ನಡೆದ ಮನೆಯಲ್ಲಿ ಸುಮಾರು ಐದಾರು ಮಂದಿ ಸೇರಿ ನಿನ್ನೆ ರಾತ್ರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಎಲ್ಲರೂ ಕಂಠಪೂರ್ತಿ ಕುಡಿದಿದ್ದಾರೆ. ಈ ವೇಳೆ ಗೆಳೆಯರ ನಡುವೆಯೇ ವಾಗ್ವಾದ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು,  ಕುಡಿದು ನಶೆಯಲ್ಲಿದ್ದ ಸ್ನೇಹಿತರು ಸಮೀಪವೇ ಇದ್ದ ಮಚ್ಚು ತೆಗೆದುಕೊಂಡು ಮುನಿರಾಜುವಿನ ಕುತ್ತಿಗೆ ಭಾಗಕ್ಕೆ ಬೀಸಿದ್ದಾರೆ. ಒಂದೇ ಏಟಿಗೆ ಮುನಿರಾಜು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ಬೆಳಗಾವಿ: ಎರಡು ಲಕ್ಷದ ಆಸೆಗೆ ಮಗು ಕಿಡ್ನಾಪ್, ಮಕ್ಕಳು ಕಳ್ಳರ ಗ್ಯಾಂಗ್ ಈಗ ಪೊಲೀಸರ ಅತಿಥಿ!

ಉಳಿದವರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಜೊತೆಗೆ ಘಟನೆ ನಡೆದ ಮನೆಗೆ ನಿನ್ನೆ ರಾತ್ರಿ ನಿವೃತ್ತ ಎಎಸ್ಐ ಒಬ್ಬರು ಭೇಟಿ ನೀಡಿದ್ದರು ಎಂಬ ಮಾಹಿತಿ ಇದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ.

ಇನ್ನೂ  ಮೃತ ಮುನಿರಾಜು ಕೈ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದು, ಆಟೋ ಸಹ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ಸಹ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಮುನಿರಾಜು ರಾತ್ರಿ ಊಟ ಮುಗಿಸಿ ನಿದ್ರೆಗೆ ಜಾರುವವನಿದ್ದ. ಅಷ್ಟೊತ್ತಿಗೆ ಮನೆ ಬಳಿ ಆಗಮಿಸಿದ ಸ್ನೇಹಿತನೊಬ್ಬ ಕೆಲಸವಿದೆಯೆಂದು ಕರೆದೊಯ್ದಿದ್ದಾನೆ.

ತಡರಾತ್ರಿಯಾದರು ಮುನಿರಾಜು ಮನೆಗೆ ಬಾರದಿದ್ದಾಗ ಮನೆಯವರು ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದಾರೆ. ಎಲ್ಲಿಯೂ ಪತ್ತೆಯಾಗಿರಲಿಲ್ಲ. ಎಲ್ಲೋ ಸ್ನೇಹಿತರ ಜೊತೆ ಹೋಗಿರಬೇಕು ಎಂದುಕೊಂಡು ಸುಮ್ಮನಾಗಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಕೊಲೆಯಾಗಿರುವ ವಿಷಯ ಪೊಲೀಸರಿಂದ ತಿಳಿಯಿತು. ಯಾವ ವಿಚಾರಕ್ಕೆ ಕೊಲೆಯಾಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ಯಾರ ಜೊತೆಯು ಇತ್ತಿಚೆಗೆ ಜಗಳ ಸಹ ನಡೆದಿರಲಿಲ್ಲ ಎಂದು ಮೃತನ ಸಂಬಂಧಿ ತಿಮ್ಮರಾಜು ತಿಳಿಸಿದ್ದಾರೆ.

ಒಟ್ಟಿನಲ್ಲಿ ಎಣ್ಣೆ ಪಾರ್ಟಿಗೆಂದು ಸ್ನೇಹಿತರ ಜೊತೆ ಹೊದವನು ಸ್ನೇಹಿತರಿಂದಲೇ ದಾರುಣವಾಗಿ ಅಂತ್ಯ ಕಂಡಿದ್ದು ಮಾತ್ರ ದುರಂತ. ಸದ್ಯ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.
Published by:Latha CG
First published: