ರಾಯಚೂರು: ಆಸ್ತಿಗಾಗಿ ವ್ಯಕ್ತಿಯನ್ನು ಕೊಲೆಮಾಡಿ ಸುಟ್ಟಿದ್ದ ಆರೋಪಿಗಳ ಬಂಧನ

ಡಿಸೆಂಬರ್ 16 ರಂದು ಬಸಣ್ಣನನ್ನು ಶಿಖರೇಶ್ವರ, ಶಿವಸಂಗಪ್ಪ ಹಾಗು ಶಂಕರಗೌಡ ಮತ್ತು ಇತರ ಮೂರು ಜನರು ಸೇರಿ ಕಿಡ್ನಾಪ್​​ ಮಾಡಿ ಜಮೀನನ್ನು ತಮ್ಮ ಹೆಸರಿಗೆ ಬರೆದುಕೊಡಲು ಒತ್ತಾಯಿಸಿದ್ದಾರೆ. ಆದರೆ ಆತ ಒಪ್ಪಿಕೊಂಡಿಲ್ಲ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು(ಫೆ.13): ಹೆಣ್ಣು ಮಣ್ಣು, ಹೊನ್ನಿಗಾಗಿ ಏನೆಲ್ಲ ನಡೆಯುತ್ತವೆ. ಇತಿಹಾಸ ಪುಟಗಳಲ್ಲಿಯೂ ನಡೆದಿದೆ. ಇದಕ್ಕೆ ಪೂರಕ ಎಂಬಂತೆ ರಾಯಚೂರಿನಲ್ಲಿ  ಮಣ್ಣಿಗಾಗಿ ಸಹೋದರ ಸಂಬಂಧಿಯನ್ನೆ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ್ದನ್ನು ಮುಚ್ಚಿ ಹಾಕಲು ದೂರದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ಕೊಲೆ ಮಾಡಿದ ನಂತರ ಪ್ರಕರಣದ ಆರೋಪಿಗಳು 50 ದಿನಗಳ ನಂತರ ಪೊಲೀಸರ ಅತಿಥಿಯಾಗಿದ್ದಾರೆ. ಈ ರೋಚಕ ಕಥೆ ಇಲ್ಲಿದೆ.

ದೂರದ ಪ್ರದೇಶದಲ್ಲಿ ಸುಟ್ಟು ಹಾಕಿದರೆ ಯಾರಿಗೂ ಮಾಹಿತಿ ಸಿಗುವುದಿಲ್ಲ. ಈ ಪ್ರಕರಣದಲ್ಲಿ ತಾವು ಬಚವಾಗಬಹು ಎಂದುಕೊಂಡಿದ್ದರಿಗೆ ಪೊಲೀಸರು ಬಲೆ ಬೀಸಿ ಖೆಡ್ಡಾಕ್ಕೆ ಕೆಡವಿದ್ದಾರೆ. ಕಳೆದ ಡಿಸೆಂಬರ್ 20ರಂದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗೌಡೂರು ಬಳಿಯಲ್ಲಿ ಸೋಮನಾಥ ಕುರೇರ್ ಎಂಬುವವರ ಜಮೀನಿನಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಸುಮಾರು 50 ವರ್ಷ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಶವ ಎಲ್ಲಿಯದು? ಯಾರದು? ಎಂಬ ಮಾಹಿತಿ ಇರಲಿಲ್ಲ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವದ ಪತ್ತೆ ಪ್ರಕರಣ ದಾಖಲಾಗಿತ್ತು.

ಅಲ್ಲಿಂದ ಈ ಪ್ರಕರಣದ ತನಿಖೆ ನಡೆಸಲು ಹಟ್ಟಿ ಪೊಲೀಸರು ವಿವಿಧ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಬಸಣ್ಣ ಎಂಬ 55 ವರ್ಷ ವ್ಯಕ್ತಿ ನಾಪತ್ತೆಯಾಗಿದ್ದ. ಈ ಬಗ್ಗೆ ಹಟ್ಟಿ ಪೊಲೀಸರು ಮಾಹಿತಿ ಪಡೆದು ತನಿಖೆ ನಡೆಸಿದರು. ತನಿಖೆಯ ನಂತರ ಬಸಣ್ಣನಿಗೂ ಆತನ ಸಹೋದರ ಸಂಬಂಧಿಗಳು ವರಸೆಯಲ್ಲಿ ಮಾವಂದಿರಗಳ ಮಧ್ಯೆ ಆಸ್ತಿ ವಿಷಯಕ್ಕೆ ಜಗಳವಿತ್ತು ಎಂದು ತಿಳಿದು ಬಂದಿದೆ.

ಸೊಸೆಯ ಮೇಲೆ ಅತ್ಯಾಚಾರ ಪ್ರಕರಣ; ತಂದೆ, ಇಬ್ಬರು ಗಂಡು ಮಕ್ಕಳಿಗೆ ಬಂಧನಪೂರ್ವ ಜಾಮೀನು ನಿರಾಕರಣೆ

ಬಸಣ್ಣನ ಅಜ್ಜನಿಗೆ 4 ಜನ ಹೆಣ್ಣು ಮಕ್ಕಳು. ಈ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಬೇಕಾಗಿತ್ತು.  ಆದರೆ 10 ಎಕರೆ ಭೂಮಿಯು ಬಸಣ್ಣನ ಹೆಸರಿನಲ್ಲಿತ್ತು. ಈ ಕುರಿತು ಆಗಾಗ ಜಗಳವಾಗುತ್ತಿತ್ತು. ಈ ಕುರಿತು ಬಸವನಬಾಗೇವಾಡಿ ನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಈ ವಿವಾದ ಬಗೆಹರಿಸಲು ಸ್ಥಳೀಯ ಮುಖಂಡರು ಸಹ ಸಂಧಾನ ಸಭೆ ನಡೆಸಿದ್ದರು. ಆದರೆ ಸಂಧಾನ ಸಫಲವಾಗಿರಲಿಲ್ಲ. ಈ ಮಧ್ಯೆ ಡಿಸೆಂಬರ್ 16 ರಂದು ಬಸಣ್ಣನನ್ನು ಶಿಖರೇಶ್ವರ, ಶಿವಸಂಗಪ್ಪ ಹಾಗು ಶಂಕರಗೌಡ ಮತ್ತು ಇತರ ಮೂರು ಜನರು ಸೇರಿ ಕಿಡ್ನಾಪ್​​ ಮಾಡಿ ಜಮೀನನ್ನು ತಮ್ಮ ಹೆಸರಿಗೆ ಬರೆದುಕೊಡಲು ಒತ್ತಾಯಿಸಿದ್ದಾರೆ. ಆದರೆ ಆತ ಒಪ್ಪಿಕೊಂಡಿಲ್ಲ.

ಈ ಮಧ್ಯೆ ಬಸಣ್ಣನ ಪತ್ನಿ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರು ದಾಖಲಿಸಿದ ನಂತರ ಎಲ್ಲಿ ಬಸಣ್ಣ ತಮ್ಮ ಹೆಸರು ಹೇಳುತ್ತಾನೋ ಎಂದುಕೊಂಡು ಆತನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡುವ ಮುನ್ನ ಕಾರಿನಲ್ಲಿ ಮೂರು ದಿನ ತಿಂಥಣಿ ಬ್ರಿಡ್ಜ್​ ಸುತ್ತಲೂ ತಿರುಗಾಡಿಸಿ ಕೊನೆಗೆ ಕೊಲೆ ಮಾಡಿದ್ದಾರೆ.

ಲಿಂಗಸಗೂರು ಹಟ್ಟಿ ಮಾರ್ಗದಲ್ಲಿರುವ ಗೌಡೂರು ಬಳಿಯ ತೊಗರಿ ಹೊಲದಲ್ಲಿ ಆತನನ್ನು ಕೊಲೆ ಮಾಡಿ ನಂತರ ಹುಲ್ಲು ಹಾಕಿ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ. ಈ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಲು ಯತ್ನ ನಡೆದಿದ್ದು ದೂರದ ಪ್ರದೇಶದಲ್ಲಿ ಕೊಲೆ ಮಾಡಿ ಸುಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ ಪೊಲೀಸರ ಕಾರ್ಯಾಚರಣೆಯಂತೆ ಈ ಪ್ರಕರಣ ಬಯಲಿಗೆ ಬಂದಿದ್ದು, ಮೂರು ಜನರನ್ನು ಬಂಧಿಸಲಾಗಿದೆ, ಇನ್ನೂ ಮೂರು ಜನರು ನಾಪತ್ತೆಯಾಗಿದ್ದಾರೆ.
Published by:Latha CG
First published: