ಹಾಡಹಗಲೇ ಪೊಲೀಸ್​ ಠಾಣೆ ಎದುರು ವ್ಯಕ್ತಿಯ ಬರ್ಬರ ಹತ್ಯೆ

ಇಂದು ಹಾಡಹಗಲು ಜನಸಂದಣಿಯಿದ್ದಾಗಲೇ ಈ ಹತ್ಯೆ ನಡೆದಿದೆ. ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

news18-kannada
Updated:November 12, 2019, 7:58 PM IST
ಹಾಡಹಗಲೇ ಪೊಲೀಸ್​ ಠಾಣೆ ಎದುರು ವ್ಯಕ್ತಿಯ ಬರ್ಬರ ಹತ್ಯೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಳಗಾವಿ(ನ.12): ಪೊಲೀಸ್​ ಠಾಣೆ ಎದುರೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಠಾಣೆ ಎದುರು ನಡೆದಿದೆ.

ಪಕ್ಕೀರಪ್ಪ ಮುರಾರಿ ಕೊಲೆಯಾದ ದುರ್ದೈವಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಾಡಿ ನಿವಾಸಿ ಎಂದು ತಿಳಿದು ಬಂದಿದೆ.

ರೈತ ಮುಖಂಡರ ಜೊತೆ ಸಭೆ ನಡೆಸಿದ ಯಡಿಯೂರಪ್ಪ; ಸಿಎಂ ಮುಂದೆ 20 ಬೇಡಿಕೆಗಳಿಟ್ಟ ಅನ್ನದಾತರು

ಇಂದು ಹಾಡಹಗಲು ಜನಸಂದಣಿಯಿದ್ದಾಗಲೇ ಈ ಹತ್ಯೆ ನಡೆದಿದೆ. ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿ ಓಡಿ ಹೋಗುತ್ತಿದ್ದ ಇಬ್ಬರು ಆರೋಪಿಗಳನ್ನು ಕಿತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪೊಲೀಸರು ತಪಾಸಣೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚುನಾವಣಾ ಆಯುಕ್ತ ಅಶೋಕ್ ಲವಾಸಾ ಮಗನ ವಿರುದ್ಧ ಇಡಿ ಪ್ರಕರಣ ದಾಖಲು

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading