ಬೆಂಗಳೂರು: ಎರಡು ದಿನಗಳ ಹಿಂದೆ ಉದ್ಯಮಿ ಲಿಯಾಕತ್ ಆಲಿ ಖಾನ್ (Liyakhath Ali Khan) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತ ಇಲಿಯಾಸ್ ಎಂಬುವವನನ್ನು ಚಂದ್ರಾ ಲೇಔಟ್ (Chandra Layout) ಪೊಲೀಸರು ಬಂಧಿಸಿದ್ದಾರೆ. ಈ ಕೊಲೆಗೆ ಸಲಿಂಗಕಾಮವೇ (Homosexual)ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಇಬ್ಬರು ಸಲಿಂಗ ಕಾಮದಲ್ಲಿದ್ದರೆಂದು ತಿಳಿದುಬಂದಿದ್ದು, ವೈಯಕ್ತಿಕ ಜೀವನ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇಲಿಯಾಸ್ ಮತ್ತು ಲಿಯಾಕತ್ ಅಲಿಖಾನ್ ಎರಡೂ ವರ್ಷಗಳಿಂದಲೂ ಸಲಿಂಗಕಾಮ ಹೊಂದಿದ್ದರು ಎಂದು ತಿಳಿದುಬಂದಿದೆ.
ಕೊಲೆಯಾದ ಲಿಯಾಕತ್ ಅಲಿಖಾನ್ ಎರಡು ದಿನಗಳ ಹಿಂದೆ 2ನೇ ಮದುವೆಯಾಗಿದ್ದ. ಆದರೆ ಲಿಯಾಕತ್ ಜೊತೆ ಇದ್ದ ಸಂಬಂಧದಿಂದಾಗಿ ಇಲಿಯಾಸ್ ಇತ್ತೀಚೆಗೆ ತನ್ನ ಎಂಗೇಜ್‌ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದ. ಇದೇ ವೇಳೆ ಲಿಯಾಕತ್ 2ನೇ ವಿವಾಹವಾಗಿದ್ದ ಎನ್ನಲಾಗಿದೆ. ಮಾನಸಿಕವಾಗಿ ಪತಿ ಪತ್ನಿಯಂತಿದ್ದ ಇಲಿಯಾಸ್, ಲಿಯಾಕತ್ ನಡುವೆ ಬಿರುಕು ಮೂಡಲು ಈ ಮದುವೆ ಕಾರಣ ಎನ್ನಲಾಗಿದೆ. ಲಿಯಾಕತ್‌ಗೆ ಮದುವೆ ಬೇಡ ಅಂತ ಹೇಳಿದರೂ ಸಹ ಆತ ಮದುವೆಯಾಗಿದ್ದ. ಇದರಿಂದ ಕೋಪಗೊಂಡಿದ್ದ ಎನ್ನಲಾಗಿದೆ.
ಸುತ್ತಿಗೆಯಲ್ಲಿ ಹೊಡೆದು ಪರಾರಿಯಾಗಿದ್ದ ಆರೋಪಿ
ಭವಿಷ್ಯದ ವಿಚಾರವಾಗಿ ಮಾತನಾಡಲು ಫೆಬ್ರವರಿ 28 ರಂದು ಬೇರೆ ಮನೆಯಲ್ಲಿ ಲಿಯಾಕತ್ ಮತ್ತು ಆರೋಪಿ ಇಲಿಯಾಸ್ ಸೇರಿದ್ದಾರೆ. ಈ ವೇಳೆ ಭವಿಷ್ಯದ ಚಿಂತೆಯಲ್ಲಿದ್ದ ಇಲಿಯಾಸ್ ಲಿಯಾಕತ್ನೊಂದಿಗೆ ಜಗಳ ಮಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ಸುತ್ತಿಗೆಯಲ್ಲಿ ತಲೆಗೆ ಹೊಡೆದು ಕತ್ತರಿಯಿಂದ ಚುಚ್ಚಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Crime News: 16 ಬಾರಿ ಚುಚ್ಚಿ ಚುಚ್ಚಿ ಯುವತಿಯ ಕೊಲೆ; ಇದು ದಿನಕರ್-ಲೀಲಾ ಪ್ರೇಮ್ ಕಹಾನಿ
ಜಿಮ್ಗೆಂದು ತೆರಳಿ ಶವವಾಗಿ ಪತ್ತೆಯಾಗಿದ್ದ ಲಿಯಾಕತ್
ಚಂದ್ರಾ ಲೇಔಟ್ ದುರ್ಗಾ ಪರಮೇಶ್ವರಿ ದೇವಸ್ಥಾನ ಬಳಿ ಲಿಯಾಕತ್ ವಾಸವಿದ್ದರು. ನಾಯಂಡನಹಳ್ಳಿಯ ಚೆಟ್ಟೀಸ್ ಬಂಕ್ ಸಮೀಪದಲ್ಲಿರುವ ಮನೆಯಲ್ಲಿ ಸೋಮವಾರ ರಾತ್ರಿ ಲಿಯಾಕತ್ ಮೃತದೇಹ ಪತ್ತೆಯಾಗಿತ್ತು. ನಿತ್ಯವೂ ಬೆಳಿಗ್ಗೆ ನಾಗರಬಾವಿಯಲ್ಲಿರುವ ಜಿಮ್‌ಗೆ ಹೋಗುತ್ತಿದ್ದ ಲಿಯಾಕತ್, ವ್ಯಾಯಾಮ ಮುಗಿಸಿ ಕಚೇರಿಗೆ ತೆರಳುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ವಾಪಸು ಮನೆಗೆ ಹೋಗುತ್ತಿದ್ದರು. ಆದರೆ ಅಂದು ಮನೆಗೆ ಬಾರದ ಕಾರಣ ಗಾಬರಿಯಾಗಿದ್ದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಸೋಮವಾರ ಜಿಮ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದ ಲಿಯಾಕತ್ ರಾತ್ರಿ 12 ಗಂಟೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಗಾಬರಿಗೊಂಡಿದ್ದ ಮನೆಯವರು, ಲಿಯಾಕತ್‌ಗಾಗಿ ಹುಡುಕಾಟ ನಡೆಸಿದ್ದರು. ಜಿಮ್, ಕಚೇರಿ ಎಲ್ಲಾ ಕಡೆ ಹೋಗಿ ನೋಡಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ನಾಯಂಡನಹಳ್ಳಿಯ ಚೆಟ್ಟೀಸ್ ಬಂಕ್ ಸಮೀಪದಲ್ಲಿರುವ ಲಿಯಾಕತ್ ಅವರಿಗೆ ಸೇರಿದ್ದ ಮತ್ತೊಂದು ಮನೆಗೆ ಹೋಗಿದ್ದ ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಲಿಯಾಕತ್ ಮೃತದೇಹ ಪತ್ತೆಯಾಗಿತ್ತು.
ಆತ್ಮಹತ್ಯೆಗೆ ಯತ್ನಿಸಿದ್ದ ಇಲಿಯಾಸ್
ಲಿಯಾಕತ್ ಆಲಿಖಾನ್ ಹತ್ಯೆಯಾಗದ ಬೆನ್ನಲ್ಲೆ ಕುಟುಂಬಸ್ಥರು ಪ್ರಿಂಟಿಂಗ್ ಪ್ರೆಸ್ನ ಪಾಲುದಾರರಾಗಿದ್ದ ಜೋಹರ್, ವಸೀಂ ಹಾಗೂ ಇಲಿಯಾಸ್ ಖಾನ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಹಣಕಾಸಿನ ಕೊಲೆಯಾಗಿರಬಹುದು ಎಂದು ಇಲಿಯಾಸ್ ಹಾಗೂ ಕೆಲ ವ್ಯಕ್ತಿಗಳ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೂವರು ತಲೆಮರೆಸಿಕೊಂಡಿದ್ದರು.
ಆಸ್ಪತ್ರೆ ಸೇರಿದ್ದ ಆರೋಪಿ
ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಇಲಿಯಾಸ್ನನ್ನು ಪ್ರಶ್ನಿಸಲು ಮನೆಗೆ ಹೋಗಿದ್ದ ವೇಳೆ ಆತ ಥೈರಾಯಿಡ್ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ ಎಂಬ ಮಾಹಿತಿ ತಿಳಿದುಬಂದಿತ್ತು. ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂಜಾಗೃತ ಕ್ರಮವಾಗಿ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಆರೋಪಿ ಕಾವಲಿಗಾಗಿ ನಿಯೋಜಿಸಲಾಗಿದೆ. ಡಿಸ್ಚಾರ್ಜ್ ಆದ ಆದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಇದೀಗ ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ